ಸನ್ಮಾರ್ಗ ವಾರ್ತೆ
ಮೆರಿಲೆಂಡ್,ಜೂ.4: ಜಾಗತಿಕ ಮಟ್ಟದಲ್ಲಿ ಒಂದು ಕೋಟಿ ಹತ್ತು ಲಕ್ಷ ಜನರಿಗೆ ಕೊರೋನ ಸೋಂಕು ತಗುಲಿದೆ. ಈ ಲೆಕ್ಕವನ್ನು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೊರಬಿಟ್ಟಿದ್ದು, ಪ್ರಸ್ತುತ ವಿಶ್ವದಲ್ಲಿ 1,11,90,678 ಕೊರೋನ ಪೀಡಿತರಿದ್ದಾರೆ. ಹಾಗೂ 5,29113 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 62,97,610 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 43,63,955 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೀನದ ವುಹಾನ್ನಿಂದ ಬಂದಿದೆ ಎನ್ನಲಾದ ಕೊರೋನ ಸೋಂಕಿಗೆ ಅಮೆರಿಕದಲ್ಲಿ ಅತೀ ಹೆಚ್ಚು ಜನರು ಮೃತಪಟ್ಟಿದ್ದಾರೆ. 1,32,101 ಮಂದಿ ಅಮೆರಿಕದಲ್ಲಿ ಕೊರೋನ ಪೀಡಿತರಾಗಿ ಸಾವಿಗೀಡಾಗಿದ್ದಾರೆ.ಅಲಬಾಮ, ನಾರ್ತ್ ಕರೊಲಿನಾ, ಸೌತ್ ಕರೊಲಿನಾ, ಟೆನ್ಸಿಸ್ಸೀ, ಅಲಾಸ್ಕದಲ್ಲಿ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿದೆ.
ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಬ್ರೆಝಿಲ್ ಎರಡನೆಯ ಸ್ಥಾನದಲ್ಲಿದ್ದು, ಅಲ್ಲಿ 15ಲಕ್ಷ ರೋಗಿಗಳಿದ್ದಾರೆ. 24 ಗಂಟೆಗಳಲ್ಲಿ 42,223 ಹೊಸ ಪ್ರಕರಣ ವರದಿಯಾಗಿದ್ದು, ಕೊರೋನ ಪೀಡಿತರ ಸಂಖ್ಯೆ 15,39,081ಕ್ಕೆ ತಲುಪಿದೆ. 24 ಗಂಟೆಗಳಲ್ಲಿ 1290 ಮಂದಿ ಸಾವಿಗೀಡಾಗಿದ್ದು, ಒಟ್ಟು 63,174 ಜನರು ಕೊರೋನದಿಂದ ಮೃತಪಟ್ಟಿದ್ದಾರೆ.
ಬ್ರರಝಿಲ್ ನಗರದಲ್ಲಿ ಲಾಕ್ಡೌನ್ ಸಡಿಲಿಕೆಯಿಂದಾಗಿ ಬಾರ್ಗಳು, ರೆಸ್ಟರೋರೆಂಟ್ಗಳು ಹಾಗೂ ಜಿಮ್ಮುಗಳು ತೆರೆದುಕೊಂಡದ್ದರಿಂದ ಇನ್ನಷ್ಟು ರೋಗ ಹರಡುವ ಭೀತಿಯಿದೆ.
ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದು, ಒಟ್ಟು 6,49,889 ಕೊರೋನ ಸೋಂಕಿತರಿದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












