ಗಾಂಧಿ ಜಯಂತಿಯಂದು ಗೋಡ್ಸೆ ಝಿಂದಾಬಾದ್ ಟ್ವಿಟರ್ ಟ್ರೆಂಡ್!

0
623

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗಾಂಧಿ ಜಯಂತಿಯಂದೇ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜಿಂದಾಬಾದ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಹಲವರು ಗಾಂಧಿಯನ್ನು ಅಪಮಾನಿಸಿ ಗೋಡ್ಸೆಯನ್ನು ಪ್ರಶಂಸಿಸುವ ಬರಹ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಗಾಂಧಿಯ 152ನೇ ಜನ್ಮದಿನದಲ್ಲಿ ರಾಜ್‍ಘಾಟ್‍ಗೆ ಹೋಗಿ ಗೌರವ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿ ಶುಭಾಶಯ ಕೋರಿದರು.

ಈ ನಡುವೆ 1,27,000 ಮಂದಿ ಗೋಡ್ಸೆ ಝಿಂದಾಬಾದ್ ಟ್ವೀಟ್ ಹಂಚಿಕೊಂಡಿದ್ದಾರೆ. ಬಿಜೆಪಿ, ಸಂಘಪರಿವಾರದ ಅನುಯಾಯಿಗಳು ಮತ್ತು ಅವರ ಆಶಯವನ್ನು ಹಂಚುವವರು ಇದರಲ್ಲಿ ಹೆಚ್ಚಿನವರು.

ಇದೇ ವೇಳೆ ಗೋಡ್ಸೆ ಪ್ರಶಂಸೆಗೆ ಹಲವು ದಿಕ್ಕುಗಳಿಂದ ಟೀಕೆ ಕೇಳಿಬಂದಿವೆ. ಇಂತಹವರನ್ನು ಪ್ರಧಾನಿ ಮೌನದೊಂದಿಗೆ ಬೆಂಬಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಸಂಸದ ಮಾಣಿಕ್ ಟಾಗೋರ್ ಆರೋಪಿಸಿದರು. ಈ ಘೋಷಣೆಯ ಜವಾಬ್ದಾರ ಯಾರು ಇದರ ವಿರುದ್ಧ ಮೋದಿಯ ಕ್ರಮವೇನು? ಹೀಗೆ ಮಾಡುವ ಸಂಘಿಗಳನ್ನು ಮೌನವಾಗಿ ಬೆಂಬಲಿಸುವುದೊ? ಎಂದು ಮಾಣಿಕ್ ಟಾಗೋರ್ ಪ್ರಶ್ನಿಸಿದರು.

ಬಿಜೆಪಿ ನಾಯಕ ವರುಣ್ ಗಾಂಧಿ ಗೋಡ್ಸೆಗೆ ಜಿಂದಾಬಾದ್ ಹೇಳುವುದೆಂದರೆ ದೇಶವನ್ನು ಅಪಮಾನಿಸುವುದು ಎಂಬುದಾಗಿ ಹೇಳಿದರು.