ಜಗತ್ತಿನಲ್ಲಿ 50 ಲಕ್ಷಕ್ಕೂ ಅಧಿಕ ಕೊರೋನ ಸಾವು

0
618

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೋನ ಸಾವು ಪ್ರಕರಣಗಳು 50 ಲಕ್ಷ ದಾಟಿದೆ ಎಂಬುದಾಗಿ ಶುಕ್ರವಾರ ರಾಯಿಟರ್ಸ್ ದತ್ತಾಂಶಗಳನ್ನು ಪ್ರಕಟಿಸಿದೆ. ಒಂದು ವರ್ಷದಲ್ಲಿ 25 ಲಕ್ಷ ಮಂದಿ ಕೊರೋನದಿಂದ ಮೃತರಾಗಿದ್ದಾರೆ. 236 ದಿನಗಳಲ್ಲಿ 25 ಲಕ್ಷ ಮಂದಿಯ ಜೀವವು ಕೋರನಕ್ಕೆ ಬಲಿಯಾಯಿತು.

ಅಮೆರಿಕ, ರಷ್ಯ, ಬ್ರೆಝಿಲ್, ಮೆಕ್ಸಿಕೊ, ಭಾರತಗಳಲ್ಲಿ ಅತಿ ಹೆಚ್ಚು ಕೊರೋನ ಸಾವುಗಳು ಸಂಭವಿಸಿವೆ. ವಿಶ್ವದ ಅರ್ಧಾಂಶ ಮಂದಿಗೆ ವ್ಯಾಕ್ಸಿನ್ ಇನ್ನೂ ಸಿಕ್ಕಿಲ್ಲ ಎಂದು ಲೆಕ್ಕಗಳು ತಿಳಿಸುತ್ತಿವೆ. ಕಳೆದ ಒಂದು ವಾರದಿಂದ ಸರಾಸರಿ 8000 ಸಾವು ಜಗತ್ತಿನಲ್ಲಿ ಪ್ರತಿದಿನ‌ ಸಂಭವಿಸುತ್ತಿವೆ ಎಂದು ವರದಿ ತಿಳಿಸಿದೆ. ಒಂದು ನಿಮಿಷಕ್ಕೆ ಐವರೆಂಬಂತೆ ಕೊರೋನದಿಂದ ಜನರು ಹತರಾಗುತ್ತಿದ್ದಾರೆ.