ಸಿಂಗಲ್ ಎಂಟ್ರಿ ವಿಸಿಟಿಂಗ್ ವಿಸಾದಲ್ಲಿ ಸೌದಿ ಅರೇಬಿಯಕ್ಕೆ ಹೋದ ಭಾರತೀಯರಿಗೆ ಶುಭ ಸುದ್ದಿ

0
934

ಸನ್ಮಾರ್ಗ ವಾರ್ತೆ

ಸಿಂಗಲ್ ಎಂಟ್ರಿ ವಿಸಿಟಿಂಗ್ ವೀಸಾವನ್ನು ಬಳಸಿಕೊಂಡು ಸೌದಿ ಅರೇಬಿಯಾಕ್ಕೆ ತೆರಳಿದ ರಳಿದ ಪ್ರಯಾಣಿಕರಿಗೆ ಶುಭ ಸುದ್ದಿ. ಮೂರು ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದವರಿಗೆ ಇನ್ನೂ ಮೂರು ತಿಂಗಳ ಅವಧಿಗೆ ಈ ವೀಸಾವನ್ನು ನವೀಕರಿಸುವ ಅವಕಾಶವನ್ನು ಒದಗಿಸಲಾಗಿದೆ. ಈ ವಿಸಾದ ಮೂಲಕ ಗರಿಷ್ಠ 9 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಇರಲು ಅವಕಾಶವೂ ಇದೆ.

ಈ ಸೌಲಭ್ಯ ವಿಸಿಟಿಂಗ್ ವೀಸಾದಲ್ಲಿ ಹೋದವರಿಗೆ ಭಾರಿ ಸಂತೋಷವನ್ನು ತಂದಿದೆ. ಸೆಪ್ಟೆಂಬರ್ 16 ರಿಂದ ಈ ನವೀಕರಣ ಸೌಲಭ್ಯ ಲಭ್ಯವಿದೆ. ಸಿಂಗಲ್ ಎಂಟ್ರಿ ವೀಸಾಗಳನ್ನು ಇನ್ನು ಮುಂದೆ ನವೀಕರಣ ಮಾಡಬಹುದಾಗಿದೆ. ಆದರೆ ಹಜ್ ನ ಸಂದರ್ಭದಲ್ಲಿ ಇಂತಹ ಸಿಂಗಲ್ ಎಂಟ್ರಿ ವೀಸಾ ಗಳನ್ನು ನವೀಕರಣ ಮಾಡಲು ಅವಕಾಶವಿಲ್ಲ.

ಈ ಬಗ್ಗೆ ಅಧಿಕೃತ ಘೋಷಣೆಯನ್ನು ಹೊರಡಿಸಿಲ್ಲವಾದರೂ ಸೌದಿಯ ವೀಸಾ ಕೇಂದ್ರಗಳು ಈ ಮಾಹಿತಿಯನ್ನು ನೀಡಿವೆ. ಮಲ್ಟಿಪಲ್ ಎಂಟ್ರಿ ವೀಸಾದಲ್ಲಿ ಸೌದಿ ಅರೇಬಿಯಾ ಪ್ರವೇಶಿಸಿದವರಿಗೆ ರಿನಿವಲ್ ಮುಗಿಯುವವರೆಗೆ ಸೌದಿಯಲ್ಲಿಯೇ ಮುಂದುವರಿಯಬಹುದು. ಮಲ್ಟಿಪಲ್ ಎಂಟ್ರಿ ವಿಸಿಟಿಂಗ್ ವಿಸಾಕ್ಕೆ ಈ ಮೊದಲೇ ನಿಯಂತ್ರಣವನ್ನು ಏರ್ಪಡಿಸಲಾಗಿತ್ತು. ಉದ್ಯೋಗ ಸಹಿತ ಈ ವಿಸಾವನ್ನು ದುರುಪಯೋಗಿಸಿರುವುದಕ್ಕೆ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.

ಮಕ್ಕಾ ಸಹಿತ ವಿವಿಧ ಕಡೆಗಳಿಂದ ಬಂದಿಸಲಾದವರು ಉಮ್ರ ವಿಸಾ ಮತ್ತು ವಿಸಿಟಿಂಗ್ ವೀಸಾದಲ್ಲಿ ಬಂದು ಕೆಲಸ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿತ್ತು. ಈ ಕಾರಣದಿಂದ ಭಾರತ ಸಹಿತ 14 ರಾಷ್ಟ್ರಗಳ ಮಂದಿಗೆ ಸದ್ಯ ಸಿಂಗಲ್ ಎಂಟ್ರಿ ವಿಸಾಗಳು ಲಭಿಸುತ್ತಿವೆ. ಒಂದು ವರ್ಷಕ್ಕಾಗಿ ಲಭಿಸುತ್ತಿದ್ದ ಬಿಸಿನೆಸ್ ವೀಸಾಗಳಿಗೂ ಸದ್ಯ ಈ 14 ರಾಷ್ಟ್ರಗಳ ಮಂದಿಗೆ ನಿಯಂತ್ರಣವನ್ನು ಹೇರಲಾಗಿದೆ.