ಅರಬ್ ಜಗತ್ತಿಗೆ ಗೂಗಲ್‍ನಿಂದ ಹೊಸ ಇಮೋಜಿ

0
9003

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.10: ಅರಬ್-ಮಧ್ಯಪ್ರಾಚ್ಯದ ಸಾಮಾಜಿಕ ಮಾಧ್ಯಮ ಬಳಕೆದಾರರಿಗಾಗಿ ಹೊಸ ಇಮೋಜಿಯನ್ನು ಗೂಗಲ್ ಪರಿಚರಿಯಿಸಿದೆ.

ರಿಲ್ಯಾಕ್ಸ್, ವೈಯ್ಟ್,(ಸಹನೆ ವಹಿಸಿ, ಸ್ವಲ್ಪ ಕಾದಿರಿ) ಎಂಬ ಅರ್ಥದ ಕೈಯಿಂದ ತೋರಿಸುವ ಸನ್ನೆಯನ್ನು ಸಾಮಾಜಿಕ ಮಾದ್ಯಮಗಳ ಬಳಕೆದಾರರಿಗೆ ಗೂಗಲ್ ಮೊಬೈಲ್ ಆಪರೇಟಿಂಗ್ ಸಿಂಟಮ್ ಆಂಡ್ರಾಯ್ಡ್ ಹೊರ ತಂದಿದೆ.

ಈ ರೀತಿ ಕೈಯಿಂದ ಸನ್ನೆ ಅರಬರ ನಡುವೆ ಸಾಮಾನ್ಯವಾಗಿ ಬಳಸಲಾಗುತ್ತಿದೆ. ಕೈ ಬೆರಳು ಮಡಚಿ ವಿನಂತಿಯ ಧ್ವನಿಯಲ್ಲಿ ಅರಬರು ಸನ್ನೆ ಮಾಡುತ್ತಾರೆ. ಆಂಡ್ರಾಯಿಡ್‍ನಲ್ಲಿ ಅತ್ಯಂತ ಹೊಸ ಅಪ್ಡೇಶನ್‍ನಲ್ಲಿ ಗೂಗಲ್ ಇದನ್ನು ಸೇರಿಸಿದೆ.
ವಾಟ್ಸಪ್, ಫೇಸ್‍ಬುಕ್, ಟ್ವಿಟರ್, ಇನ್‌‌ಸ್ಟಾಗ್ರಾಮ್ ಮೊದಲಾದ ಆಂಡ್ರಾಯಿಡ್ ವರ್ಷನ್‍ಗಳಲೆಲ್ಲ ಹೊಸ ಇಮೋಜಿ ಲಭಿಸುತ್ತದೆ.

ಅರಬ್, ಮೆಡಿಟರೇನಿಯನ್ ಸಂಸ್ಕೃತಿಯ ಸನ್ನೆ, ಒಂದು ನಿಮಿಷ ಕಾದಿರಿ, ಸಹನೆ ವಹಿಸಿ, ಶಾಂತವಾಗಿರಿ ಎಂಬ ಅರ್ಥವನ್ನು ಹೊಂದಿದ್ದು ಸನ್ನೆಗಳನ್ನು ಅರಬ್ ಜನರು ಪರಸ್ಪರ ಉಪಯೋಗಿಸುತ್ತಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.