ಅರ್ನಾಬ್‍ರಿಗೆ ಪತ್ರಕರ್ತರಲ್ಲ, ಗೂಂಡಾಗಳು ಬೇಕಾಗಿದ್ದಾರೆ; ನೀವು ಓದಿರದ ತೇಜಿಂದರ್ ಸಿಂಗ್‍ರ ಪತ್ರದ ಪೂರ್ಣ ಪಾಠ

0
858

ಸನ್ಮಾರ್ಗ ವಾರ್ತೆ

ರಿಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿದ ಮಾಜಿ ಬ್ಯೂರೊ ಮುಖ್ಯಸ್ಥ ತೇಜಿಂದರ್ ಸಿಂಗ್‍ರ ರಾಜೀನಾಮೆ ಪತ್ರ ಈಗ ವ್ಯಾಪಕ ಚರ್ಚೆಯಾಗುತ್ತಿದೆ. ರಿಪಬ್ಲಿಕ್ ಟಿವಿ ಸೇರುವ ಕುರಿತು ತಳೆದ ತೀರ್ಮಾನದಲ್ಲಿ ವಿಷಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಅರ್ನಾಬ್ ಮಾಧ್ಯಮ ರಂಗವನ್ನು ಕೊಲೆ ಮಾಡಿದರು. ಮಾಧ್ಯಮ ರಂಗದಲ್ಲಿ ಅರ್ನಾಬ್ ಎಂದೂ ಕ್ರಾಂತಿಯುಂಟು ಮಾಡಿಲ್ಲ. ತಾ ನೂ ಕೂಡ ಅವರ ಅಪರಾಧದಲ್ಲಿ ಪಾಲುದಾರನಾಗಿದ್ದೆ ಎಂದು ತೇಜಿಂದರ್ ಸಿಂಗ್ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಹಣ, ಅಧಿಕಾರ ಬರತೊಡಗಿದಂತೆ ಅರ್ನಾಬ್ ಹೆಚ್ಚು ಅಹಂಕಾರಿಯಾದರು. ಅರ್ನಾಬ್‍ರಿಗಾಗಿ ಯಾರಿಗೂ ಹೊಡೆಯುವುದು ವರದಿಗಾರರ ಕೆಲಸವಾಗಿತ್ತು. ಉತ್ತರಪ್ರದೇಶದ ಒಬ್ಬ ವರ ದಿಗಾರರಿಗೆ ಹೇಳಿದ್ದು- ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಹಿಂಬಾಲಿಸಿ ದೃಶ್ಯಗಳನ್ನು ನೀಡುವುದು. ಅದಾದ ಮೇಲೆ ಮನೆಯ ಗೋಡೆ ಹಾರಿ ಒಳಗೆ ಹೋಗುವುದಕ್ಕಾಗಿತ್ತು. ದೇಶದ ಅತೀ ದೊಡ್ಡ ಟಿವಿ ಶೃಂಖಲೆ ರಿಪಬ್ಲಿಕ್ ಎಂದು ಅರ್ನಾಬ್ ಹೇಳುತ್ತಾರೆ. ವಾಸ್ತವದಲ್ಲಿ ಹಲವು ರಾಜ್ಯಗಳಲ್ಲಿ ಒಬ್ಬರೂ ವರದಿಗಾರರಿಲ್ಲ. ಇದ್ದವರು ರಾಜೀನಾಮೆ ನೀಡಿ ಹೋದರು. ಇನ್ನು ಯಾವುದೇ ವೃತ್ತಿಪರ ಪತ್ರಕರ್ತ ಅದರ ಭಾಗವಾಗಲು ಇಚ್ಛಿಸಲಾರ-ತೇಜಿಂದರ್ ಸಿಂಗ್‍ರ ಪತ್ರದಲ್ಲಿ ಪತ್ರ ಹೀಗಿದೆ- ನನಗೆ ನೀಡಿದ ಭಡ್ತಿಗೆ ಕೃತಜ್ಞತೆಗಳು. ಎಚ್.ಆರ್. ಮುಖ್ಯಸ್ಥ ಸ್ಥಾ ನದಿಂದ ಕಂಪೆನಿಯ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ನೀಡಿದ್ದು ಒಂದು ದೊಡ್ಡ ಗೌರವವಾಗಿತ್ತು ರಿಪಬ್ಲಿಕ್‍ನಲ್ಲಿಲ್ಲದಿದ್ದರೂ. ರಿಪಬ್ಲಿಕನಲ್ಲಿ ಒಬ್ಬನೆ ನಾಯಕನಿರುವುದು. ರಿಪಬ್ಲಿಕ್‍ನ ಆಡಳಿತವನ್ನು ಹಿಂದೆ ನಿಂತು ನೋಡಿಕೊಳ್ಳುವುದು ಅರ್ನಾಬ್ ಪತ್ನಿಯಾಗಿದ್ದಾರೆ. ಆದರೆ ಹಿಂದೆ ಇರುವವರೆಲ್ಲ ಪಟ್ಟಿಯಲ್ಲಿ ಸ್ಥಳ ತುಂಬುವುದಕ್ಕಿರುವವರು ಮಾತ್ರ ಆಗಿದ್ದಾರೆ.

ನನ್ನ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಇಲ್ಲಿ ಎಲ್ಲವೂ ಅರ್ನಾಬ್‍ರಿಂದ ಆರಂಭಗೊಂಡು ಕೊನೆಗೊಳ್ಳುವುದು ಗೋಸ್ವಾಮಿಯಲ್ಲಿ. ನನ್ನಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ನಿಮಗೆ ಇದ ನ್ನೆಲ್ಲ ಮಾಜಿ ಎಚ್.ಆರ್. ಮುಖ್ಯಸ್ಥರು ಹೇಳಿಯಾರು. ಬರೇ ಮೂರು ವರ್ಷದಲ್ಲಿ ಎಚ್.ಆರ್. ವಿಭಾಗದಲ್ಲಿ ಎಲ್ಲರೂ ಕೆಲಸ ಬಿಟ್ಟು ಹೋಗಿರುವಂತಹ ಯಾವುದಾದರೂ ಸಂಸ್ಥೆಯನ್ನು ನೀವು ನೋಡಿದ್ದೀರಾ?

ಕಾಲವೇ ಮಹಾನ್ ಗುರು. ಆದ್ದರಿಂದ ನಾನು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ. ಈ ಹಿಂದೆ ಬಿಟ್ಟು ಹೋದವರು ಅನುಭವಿಸಿದ್ದು ನಿಮಗೆ ಬರದಿರಲಿ. ಆದರೂ ನನಗೆ ಭಡ್ತಿ ನೀಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿದೆ. ಅದೊಂದು ದಿನ ನಿದ್ದೆ ಮಾಡುವ ಸಮಯದಲ್ಲಿ ಅರ್ನಾಬ್‍ರ ಪತ್ನಿಯ ಕರೆ ನನಗೆ ಬಂದಿತು. ಈ ಕಂಪೆನಿ ಶುರುವಾಗುವ ಮೊದಲು ಒಂದು ಕಾಂಗ್ರೆಸ್ ಪತ್ರಿಕೆಯ ಬ್ಯೂರೊ ವರದಿಗಾರ ಮಾತ್ರ ಆಗಿದ್ದ ಅರ್ನಾಬ್‍ರ ಪತ್ನಿಗೂ ಮತ್ತು ಅರ್ನಾಬ್‍ರಿಗೂ ನನ್ನ ಕೆಲಸ ತುಂಬ ಇಷ್ಟವಾಯಿತೆಂದೂ ಆದ್ದರಿಂದ ಭಡ್ತಿ ನೀಡಲು ತೀರ್ಮಾ ನಿಸಿದ್ದೇವೆಂದೂ ಹೇಳಿದರು. ಯಾವುದೇ ಭಡ್ತಿಗೂ ಅರ್ಹತೆ ಮಾನದಂಡವಾಗುವಾದರೆ ಮಾತ್ರ ನನಗೆ ಸಂತೋಷವಾಗುತ್ತದೆ.
ಪತಿ, ಪತ್ನಿ ಸೇರಿ ನಿರಂತರ ಹೇಳಿಕೊಂಡರು. ಕೊನೆಗೆ ನಾನೇ ಫೋನ್ ಕಟ್ ಮಾಡಿದೆ. ಅವರಿಬ್ಬರ ಮಾತಿನ ಧಾಟಿ ಹೇಗಿತ್ತೆಂದರೆ ಇತರ ಪತ್ರಿಕೆಗಳು ಜನರನ್ನು ಕೆಲಸದಿಂದ ತೆಗೆಯುವಾಗ, ಸಂಬಳ ಕಟ್ ಮಾಡುತ್ತಿವಾಗ ನಾವು ಭಡ್ತಿ ನೀಡಿ ಸ್ಟಾಫ್‍ನೊಂದಿಗೆ ಎಷ್ಟು ಕರುಣೆ ತೋರಿಸುತ್ತಿದ್ದೇವೆ ಎಂದಿತ್ತು.

ಕೆಲಸದಲ್ಲಿ ಭಡ್ತಿ ಸಿಗುವುದರೊಂದಿಗೆ ಜವಾಬ್ದಾರಿಯ ಭಾರವೂ ಹೆಚ್ಚುತ್ತದೆ ಎಂದರು. ಸ್ಟೋರಿಗಳನ್ನು ಡೆಸ್ಕ್‍ನಲ್ಲಿ ಹೇಗೆ ಮುಂದಕ್ಕೆ ಕೊಂಡು ಹೋಗುವುದನ್ನು ಇನ್ನು ಮುಂದೆ ನೀವೇ ತೀರ್ಮಾನಿಸಬೇಕಾಗುತ್ತದೆ ಎಂದರು. ಈಗ ನನಗೆ ಮತ್ತೆ ಆಶ್ಚರ್ಯವಾಯಿತು. ರಿಪಬ್ಲಿಕ್ ಡೆಸ್ಕ್‍ನಿಂದ ಒಬ್ಬೊಬ್ಬರೇ ವಿದಾಯ ಹೇಳಿ ಹೊರಟು ಹೋದ ಬಳಿಕ ಆ ಎರಡು ವರ್ಷಗಳಿಂದ ನಾನು ಅದನ್ನೇ ಮಾಡಿಕೊಂಡು ಬರುತ್ತಿದ್ದೆನಲ್ಲ. ಈ ಭಡ್ತಿಯಲ್ಲಿ ಮತ್ತೊಂದು ತಮಾಶೆ ಕೂಡ ಇತ್ತು. ಸಂಬಳ ಹೆಚ್ಚಳ ಮಾತ್ರವಲ್ಲ, ಬದಲಾಗಿ ರಿಪಬ್ಲಿಕ್‍ನ ಪರಮೋಚ್ಚ ನಾಯಕನು ತನ್ನ ಸ್ಟಾಫ್‍ಗಳೊಡನೆ ಎಷ್ಟು ಉದಾರಿ ಎಂದು ನಾವು ಹೇಳುತ್ತಲೇ (ಹೊಗಳುತ್ತಲೇ) ಇರಬೇಕಾಗಿತ್ತು. (ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ರಿಪಬ್ಲಿಕ್ ವಿಳಾಸ ಡಿಲಿಟ್ ಮಾಡಬೇಕೆಂದು ಬೆದರಿಕೆ ಹಾಕಿದ್ದ ಕಂಪೆನಿಯ ಕುರಿತು ನಾವು ಇನ್ನೇನು ಹೇಳಬೇಕು?)

ಆದರೆ, ಸ್ವಂತ ವರ್ಚಸ್ಸಿನಲ್ಲಿ ನಂಬಿಕೆ ಇರುವ ವ್ಯಕ್ತಿ ನಾನು. ಅವರು ನಮಗೆ ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ರಿಪಬ್ಲಿಕ್ ಟಿವಿಯ ಪೋಸ್ಟ್ ಹಾಕಬೇಕೆಂದು ಅವರು ಹೇಳುತ್ತಿದ್ದರು. ಒಂದೆರಡು ದಿವಸ ನಾನೂ ಹಾಗೇ ಮಾಡಿದೆ. ತಪ್ಪು ಮನವರಿಕೆಯಾದಾಗ ಅದನ್ನು ಬಿಟ್ಟುಬಿಟ್ಟೆ. ನಮಗೆಲ್ಲರಿಗೂ ಗೊತ್ತು. ಅರ್ನಾಬ್ ಭಾರೀ ಹಣ ಕಲೆ ಹಾಕುತ್ತಾರೆ. ಅವರ ನಿಕಟರಾದ ಕೆಲವರಿಗೆ ಹಣ ಚೆನ್ನಾಗಿ ಸಿಗುತ್ತದೆ ಎಂದು. ಆದರೆ, ಇಲ್ಲಿ ಕೆಲಸವನ್ನು ಸರಿಯಾಗಿ ಮಾಡುವವರಿಗೆ ಸಿಗುವುದು ನಯಾ ಪೈಸೆ ಮಾತ್ರ.

ಸಿಬ್ಬಂದಿಗಳಿಗೆ ಸಂಬಳ ಹೆಚ್ಚಿಸದಿದ್ದುದು ಆ ಹಣವನ್ನು ಒಂದು ಹಿಂದಿ ಚ್ಯಾನೆಲ್ ಆರಂಭಿಸಲು ಮತ್ತು ಅದಕ್ಕೆ ಹೊಸ ಸಿಬ್ಬಂದಿಗಳನ್ನು ನೇಮಿಸುವುದಕ್ಕಾಗಿತ್ತು. ಇರಲಿ, ಆಗಸ್ಟ್‍ಗೆ ಮರಳಿ ಬರೋಣ.

ನಿಮಗೆ (ಅರ್ನಾಬ್‍ಗೆ) ನೆನಪಿರಬಹುದು, ರಾಜೀನಾಮೆ ಪತ್ರ ನೀಡುವ ಒಂದು ಗಂಟೆ ಮೊದಲು ಭಡ್ತಿಯ ಮಾತನ್ನು ನಾನು ತಿರಸ್ಕರಿಸಿದ್ದೆ. ರಾಜೀನಾಮೆಗೆ ಕಾರಣವೇನೆಂದು ವಿವರವಾದ ಪತ್ರವನ್ನು ಕಳುಹಿಸುವೆ ಎಂದು ಸೂಚಿಸಿದ್ದೆ. ಆ ಪತ್ರದಲ್ಲಿ ರಿಪಬ್ಲಿಕ್ ಟಿವಿಯ ಯಾವುದೇ ಕೆಲಸಕ್ಕೂ ನಾನು ಅರ್ಜಿ ಹಾಕಿಲ್ಲ. ಹಿಂದೆ ಕೆಲಸ ಮಾಡಿದ ಸಂಸ್ಥೆಯಲ್ಲಿ ತುಂಬ ಸಂತೃಪ್ತ ಮತ್ತು ಸಂತೋಷದಲ್ಲಿದ್ದೆ.

ಅದು 2017. ನನ್ನ ಮದುವೆ ದಿನ ಅರ್ನಾಬ್‍ರ ಕಚೇರಿಯಿಂದ ಒಬ್ಬರು ಕರೆ ಮಾಡಿ ಅರ್ನಾಬ್‍ರಿಗೆ ಮಾತಾಡಲಿಕ್ಕಿದೆ ಎಂದು ಹೇಳಿದರು. ಗುರುದ್ವಾರದಲ್ಲಿ ಮದುವೆ ಕಾರ್ಯಕ್ರಮ ಆರಂಭವಾಗುವ ಗಂಟೆಗಳಿರುವಾಗ ಕರೆ ಬಂತು. ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದು ಅನಿಸಿತು. ಕೆಲವು ದಿವಸದ ನಂತರ ಕರೆಮಾಡಲು ಹೇಳಿ ಫೋನ್ ಕಟ್ ಮಾಡಿದೆ.

ಆಶ್ಚರ್ಯವೆಂದರೆ, ಕೆಲವು ದಿವಸದ ಬಳಿಕ ಪುನಃ ಆ ಕರೆ ಬಂತು. ವಾಟ್ಸಪ್ ವೀಡಿಯೊ ಕಾಲ್‍ನಲ್ಲಿ ಅರ್ನಾಬ್ ಮಾತಾಡಿದರು. ವಿನಯದಿಂದ ಮೃದುವಾದ ಭಾಷೆಯಲ್ಲಿ ಅವರ ವರ್ತ ನೆಯಿತ್ತು. ಟಿವಿಯಲ್ಲಿ ನೋಡಿ ಪರಿಚಯವಿರುವ ಒಬ್ಬ ಮೊದಲ ಬಾರಿ ನನ್ನನ್ನಲ್ಲಿ ಮಾತಾಡುತ್ತಿರುವುದು. ತಾನು ಟೈಮ್ಸ್ ನೌ ಬಿಟ್ಟದ್ದು ಯಾಕೆ ಎಂದು ಅವರು ನನ್ನಲ್ಲಿ ವಿವರವಾಗಿ ಹೇಳಿದರು. ಟೈಮ್ಸ್ ನೌ ಸಾಮ್ರಾಜ್ಯವನ್ನು ಒಡೆಯುವ ಆತ್ಮವಿಶ್ವಾಸವನ್ನು ಪ್ರಕಟಿಸಿದರು. ಕೆಲವರು ನಿಮ್ಮ ಹೆಸರು ಹೇಳಿದ್ದಾರೆ. ತಂಡದಲ್ಲಿ ಸೇರಿಸಿಕೊಳ್ಳುವುದಕ್ಕೆ ಸಂತೋಷವಿದೆ ಎಂದು ನಂತರ ಹೇಳಿದರು.

ದೇಶದ ಟಿವಿ ಉದ್ಯಮದಲ್ಲಿ ರಿಪಬ್ಲಿಕ್ ಚ್ಯಾನೆಲ್ ಕ್ರಾಂತಿ ಮಾಡಲಿದೆ. ಅಧಿಕಾರದಲ್ಲಿರುವವರನ್ನು ಅದು ಪ್ರಶ್ನಿಸುತ್ತದೆ. ದಮನಿತರ ಧ್ವನಿಯಾಗಲಿದೆ. ಒಂದು ಸಂಪೂರ್ಣ ವಾರ್ತಾ ಚ್ಯಾನೆಲ್ ಆಗಿರಲಿದೆ ಎಂದು ಅರ್ನಾಬ್ ಹೇಳಿದರು. ಪ್ರಿಂಟ್ ಮೀಡಿಯ ನನ್ನ ಕ್ಷೇತ್ರ. ಟಿವಿ ಕ್ಷೇತ ಅಪರಿಚಿತ ಎಂದು ನಾನು ಹೇಳಿದೆ. ಆದರೆ ಹೊಸ ಮುಖಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು. ಯುವಕರಾದ ವೃತ್ತಿಪರರು ಈ ಚ್ಯಾನೆಲ್‍ನ ಶಕ್ತಿ ಆಗಲಿದ್ದಾರೆ. ಯುವ ಪತ್ರಕರ್ತರು ನಡೆಸುವ ಚ್ಯಾನೆಲ್ ಇದು ಆಗಲಿದೆ.

ಅರ್ನಾಬ್ ದೊಡ್ಡ ಪ್ರೇರಣೆ ನೀಡುವ ಭಾಷಣಗಾರರಲ್ಲಿ ಒಬ್ಬರು ಎಂದು ಹೇಳಬಹುದು. ಯಾಕೆಂದರೆ ಅವರ ಮಾತಿಗೆ ನಾನು ಬೌಲ್ಡಾದೆ. ಯಾವತ್ತೂ ಟಿವಿ ಕ್ಷೇತ್ರಕ್ಕೆ ಹೋಗಬಾರದೆಂದು ನಿರ್ಧರಿಸಿದ್ದ ನಾನು ಹೋಗಿ ಅವರ ತಂಡದಲ್ಲಿ ಒಬ್ಬನಾದೆ. ಸಂಬಳದ ಕುರಿತ ಚರ್ಚೆಯಲ್ಲಿ ಈಗಿನ ಪರಿಸ್ಥಿತಿ ಪರಿಗಣಿಸಿ ಇದುವರೆಗೆ ಪಡೆಯುವ ಸಂಬಳವನ್ನು ಪಡೆಯಬೇಕೆಂದು ಕಂಪೆನಿ ಲಾಭದಲ್ಲಾದರೆ ದುಪ್ಪಟ್ಟು ಕೊಡುವುದಾಗಿ ಆಶೆ ಹುಟ್ಟಿಸಿದರು. ಅಂದಿನವರೆಗೆ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಎಡಿಟರ್ ಇನ್ ಚೀಫ್ ಕರೆ ಮಾಡಿ 20 ಸಾವಿರ ರೂಪಾಯಿ ಹೆಚ್ಚಿಸಿ ಕೊಡುತ್ತೇವೆ, ಕೆಲಸ ಬಿಡಬೇಡಿರಿ ಎಂದು ಹೇಳಿದರೂ ನಾನು ಒಪ್ಪಲಿಲ್ಲ. ಅರ್ನಾಬ್‍ಗೆ ಮಾತುಕೊಟ್ಟಾಯಿತೆಂದು ಎಡಿಟರ್‍ಗೆ ಹೇಳಿದೆ.
ಹಿಂದಕ್ಕೆ ನೋಡುವಾಗ ರಿಪಬ್ಲಿಕ್‍ಗೆ ಸೇರಲು ಮಾಡಿದ ನಿರ್ಧಾರದಲ್ಲಿ ವಿಷಾದ ಆಗುತ್ತಿದೆ. ಮಾಧ್ಯಮದಲ್ಲಿ ಅವರು ಯಾವತ್ತೂ ಕ್ರಾಂತಿ ಮಾಡಲಿಲ್ಲ. ಮಾತ್ರವಲ್ಲ ಅದನ್ನು ಕೊಲೆ ಮಾಡುತ್ತಿದ್ದರು. ಅದನ್ನು ಒಂದು ಪ್ರಹಸನವಾಗಿ ಬದಲಾಯಿಸಿದರು. ನಾನು ಕೂಡ ಆ ಅಪರಾಧದಲ್ಲಿ ಭಾಗಿಯಾದೆ. ಲಾಂಚಿಂಗ್ ಆದ ಬಳಿಕ ಮೊದಲ ವಾರ ಟಿಆರ್‍ಪಿ ರೇಟಿಂಗ್‍ನಲ್ಲಿ ಚ್ಯಾನಲ್ ಪ್ರಥಮ ಸ್ಥಾನಕ್ಕೆ ಬಂದುದು ನಮಗೆ ತುಂಬ ಸಂತೋಷವುಂಟು ಮಾಡಿತು. ಎಲ್ಲರೂ ಸೇರಿ ರಕ್ತ ಬೆವರು ಹರಿಸಿ ಸಿಕ್ಕಿದ ಗೆಲುವದು. ಈ ಒಗ್ಗೂಡಿದ ಯಶಸ್ಸಿಗೆ ಅರ್ನಾಬ್ ಅಭಿನಂ ದಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ, ಎಲ್ಲಿಯೂ ಯಾವಾಗಲೂ ಅರ್ನಾಬ್ ಮಾತ್ರ ಆಗಿದ್ದರು. ದೇಶಾದ್ಯಂತ ಅರ್ನಾಬ್‍ರನ್ನು ಹೊಗಳಿ ಬ್ಯಾನರ್‍ಗಳು ಬಂದವು. ಹಿಂದಿ ಚ್ಯಾನೆಲ್ ಟಿಆರ್‍ಪಿ ರೇಟಿಂಗಿನಲ್ಲಿ ಪ್ರಥಮ ಸ್ಥಾನಕ್ಕೆ ಬಂದ ಬೆನ್ನಿಗೆ ದಿಲ್ಲಿಯಲ್ಲಿ ಅಂತಹದೇ ಬ್ಯಾನರ್ ಬಂತೆಂದು ಹೇಳಿದರೆ ನನ್ನನ್ನು ನಂಬಬೇಕಾಗಿಲ್ಲ.

ವಾರಗಳು ಕಳೆದಾಗ ಫೋಟೊದಲ್ಲಿ ಅರ್ನಾಬ್ ಮಾತ್ರ ಇದ್ದಾರೆ. ತಂಡದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದು ಸ್ಪಷ್ಟವಾಯಿತು. ತಿಂಗಳಾದ ಬಳಿಕ ಇನ್ನಷ್ಟು ಹೆಚ್ಚಿತು. ರಿಪಬ್ಲಿಕ್‍ನಲ್ಲಿ ನಾವೆಲ್ಲ ಸ್ಥಾ ನವನ್ನು ತುಂಬಲಿಕ್ಕಿರುವವರು ಮಾತ್ರ ಎಂದು ಮನವರಿಕೆಯಾಯಿತು. ಸಂಜೆ ಪ್ರಸಾರದಲ್ಲಿ ಅರ್ನಾಬ್ ಬರುವವರೆಗೆ ಇರುವ ಮಧ್ಯಾಂತರ ಸಮಯದಲ್ಲಿ ಸ್ಕ್ರೀನ್‍ನಲ್ಲಿ ಇರಬೇಕಾದವರು. ಅ ರ್ನಾಬ್ ಒಂದು ದೈತ್ಯ ಮರ. ಆದ್ದರಿಂದ ನಿಧಾನವಾಗಿ ಇನ್ನೊಂದು ಮರ ಅಲ್ಲಿ ಬೆಳೆಯಲಾರದು ಎಂಬ ರೀತಿಯದು.

ಯಾಕೆಂದರೆ ಚ್ಯಾನೆಲ್‍ನ ಮುಖವಾಗಿ ಇನ್ನೊಂದು ಮರವನ್ನು ಅವರು ಸಹಿಸುತ್ತಿರಲಿಲ್ಲ. ಆದ್ದರಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಸುದ್ದಿ ಗೋಷ್ಠಿಯಲ್ಲಿ ರಿಪಬ್ಲಿಕ್‍ಗೆ ಅನುಮತಿ ನಿರಾಕರಿಸಲ್ಪಟ್ಟಿತು. ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ಕಚೇರಿಗಳ ಮುಂದೆ ಕಪ್ಪುಪಟ್ಟಿ ಕಟ್ಟಿ ಪ್ರತಿಭಟಿಸಲು ಆದೇಶ ಬಂತು. ಯಾವುದೇ ರಾಜಕೀಯ ಪಾರ್ಟಿಯ ವಿರುದ್ಧ ಪ್ರತಿಭಟಿಸುವುದು ನಮ್ಮ ಕೆಲಸ ಅಲ್ಲ ಅಂತ ಯಾರಲ್ಲಿ ಹೇಳುವುದು? ಹೀಗೆ ಎಲ್ಲರೂ ಹಾಗೆಯೇ ಮಾಡಬೇಕಾಯಿತು.

ಒಂದು ದಿವಸ ನನಗೆ ಡೆಸ್ಕ್‍ನಿಂದ ಒಬ್ಬರ ಕರೆ ಬಂತು (ಅರ್ನಾಬ್‍ರ ಕೀಟಲೆ ಗರಿಷ್ಠ ಸಹಿಸಬೇಕಾಗಿ ಬಂದು ಕಚೇರಿಯಲ್ಲಿ ಹೃದಯಾಘಾತದವರೆಗೂ ಉಂಟಾದ ಅವರ ಹೆಸರು ಹೇಳುವು ದಿಲ್ಲ). ಸುನಂದ ಪುಷ್ಕರ್ ಮನೆಯೊಳಗೆ ಹೋಗಿ ಅಡಗಿ ಕೂತುಕೊಳ್ಳಲು. ಹೇಳಿದ ಸಮಯದಲ್ಲಿ ಹೇಳಿದ ವಿಷಯವನ್ನು ಮಾಡಲು ಸೂಚನೆ ಅದಾಗಿತ್ತು. ಯಾಕೆ ಅಡಗಿ ಕೂತುಕೊಳ್ಳುವುದು? ಸ್ವಂತ ಸ್ಟಾಫ್‍ನಲ್ಲಿ ಅವರಿಗೆ ಯಾವತ್ತೂ ನಂಬಿಕೆಯಿರಲಿಲ್ಲ. ಆದ್ದರಿಂದ ಕೊನೆಯ ಕ್ಷಣದವರೆಗೆ ನಮ್ಮೊಂದಿಗೆ ಏನನ್ನೂ ಹೇಳುತ್ತಿರಲಿಲ್ಲ.

ನಾನು ಆ ಮನೆಗೆ ಹೋದೆ. ಕೂಡಲೇ ಬಂತು ಸಂದೇಶ. ಒಳಗೆ ಸುನಂದಾರ ವಯೋವೃದ್ಧ ತಂದೆಯನ್ನು ಭೇಟಿಯಾಗಿ ಶಶಿ ತರೂರ್‍ಗೆ ಬೈಯ್ಯಲು ಹೇಳಬೇಕು. ಅದಕ್ಕೆ ನಾನು ಪ್ರಯತ್ನಿಸಿದೆ. ಆದರೆ, ಒಳಗೆ ಹೋಗಿ ಆ ವಿವಶರಾಗಿದ್ದ ತಂದೆಯನ್ನು ಕಂಡಾಗ ನನಗೆ ಕಣ್ಣೀರು ಬಂತು. ತುಂಬ ವಿವಶರಾಗಿದ್ದರು. ಆತ್ಮಸಾಕ್ಷಿ ಕಳಕೊಂಡ ಅವಸ್ಥೆಯಲ್ಲಿ ಅದನ್ನು ನಾನು ಡೆಸ್ಕ್‍ಗೆ ತಿಳಿಸಿದೆ. ಆದರೆ ಅದಕ್ಕೆ ಸಿಕ್ಕಿದ ಉತ್ತರ ಅರ್ನಾಬ್ ಕೊಪಗೊಂಡಿದ್ದಾರೆ ಎಂದಾಗಿತ್ತು. ಏನೆ ಮಾಡಿಯಾದರೂ ತಂದೆಯಿಂದ ಶಶಿ ತರೂರ್ ಮಗಳನ್ನು ಕೊಂದಿದ್ದಾರೆ ಎಂದು ಹೇಳಿಸಬೇಕಾಗಿತ್ತು.

ಇದಕ್ಕೊಪ್ಪದೆ ನಾನು ಅಲ್ಲಿಂದ ಹೊರಬಂದೆ. ತರೂರ್ ಮತ್ತು ಪುಷ್ಕರ್ ನಡುವೆ ಇದ್ದ ಉತ್ತಮ ಸಂಬಂಧ ಕುರಿತು ಮಾತಾಡಿದ ಮನೆಯ ಕೆಲಸಗಾರರೊಂದಿಗೆ ಮಾತಾಡಿದ ಬಳಿಕ ಮರಳಿದೆ. ಆದರೆ, ಅದು ಎಂದೂ ಚ್ಯಾನೆಲ್ ಮೂಲಕ ಹೊರ ಜಗತ್ತಿಗೆ ಗೊತ್ತಾಗಲಿಲ್ಲ. ಮರುದಿವಸ ಕರೆ ಮಾಡಿ ಬೇರೆ ವಿಷಯದಲ್ಲಿ ಬೈದರು. ಸುನಂದರ ತಂದೆಯಿಂದ ತರೂರ್‍ರನ್ನು ಬೈಯುವ ಬೈಟ್ ಮಾಡಿಕೊಡದೆ ತನ್ನನ್ನು ಅಪಮಾನಿಸಿದ್ದೀರಿ ಎಂದು ಹೇಳಿದರು. ಇಂತಹ ಒಂದು ವರದಿಗಾರಿಕೆಗೆ ನಾನು ರಿಪಬ್ಲಿಕ್‍ಗೆ ಸೇರಿರಲಿಲ್ಲ. ಅರ್ನಾಬ್‍ರಿಗಾಗಿ ಯಾರಿಗೂ ಹೊಡೆಯುವುದು ವರದಿಗಾರರ ಕೆಲಸವಾಗಿತ್ತು.

ಉತ್ತರಪ್ರದೇಶದ ಒಬ್ಬ ವರದಿಗಾರನಿಗೆ ಸಿಕ್ಕಿದ ಸೂಚನೆ ಅಂದಿನ ಮುಖ್ಯಮಂತ್ರಿಯನ್ನು ಹಿಂಬಾಲಿಸಿ ದೃಶ್ಯಗಳನ್ನು ಕೊಡಬೇಕು. ಅದು ಆದ ಬಳಿಕ ಅವರ ಮನೆಯ ಕಂಪೌಂಡ್ ಹಾರಿ ಮ ನೆಯೊಳಗೆ ತಲುಪಬೇಕು ಎಂದಾಗಿತ್ತು. ಭದ್ರತಾ ಸಿಬ್ಬಂದಿ ಗುಂಡಿಟ್ಟು ಕೊಂದಾರು ಎಂದು ಹೇಳಿದ್ದಕ್ಕೆ ಅರ್ನಾಬ್‍ನ ಪತ್ನಿಯ ನಿಂದನೆ ಸಹಿಸಲಾಗದೆ ಅವರು ಮರುದಿವಸ ಕೆಲಸಕ್ಕೆ ರಾಜೀ ನಾಮೆ ಕೊಟ್ಟು ಹೋದರು.

ಹಣ ಅಧಿಕಾರ ಬರುವುದರೊಂದಿಗೆ ಅರ್ನಾಬ್ ಹೆಚ್ಚು ಅಹಂಕಾರಿಯಾದರು. ಬೇರೆ ಯಾರ ಮಾತಿಗೂ ಅವರು ಕಿವಿಗೊಡಲಿಲ್ಲ. ಚ್ಯಾನೆಲ್‍ನ ಸ್ವಂತ ಸ್ಟಾಫ್‍ಗಳನ್ನು ಗೌರವಿಸಲಿಲ್ಲ. ನಿರಂತರ ನಿಂದನೆಯಿಂದ ಸಹನೆಗೆಟ್ಟ ಕೆಲವರು ಕೆಲಸ ಬಿಟ್ಟು ಹೋದರು. ಇದು ಮಾಧ್ಯಮವಲ್ಲ ಎಂದು ಅವರಿಗೆ ಭರವಸೆ ಇತ್ತು. ನಿಧಾನವಾಗಿ ಎಲ್ಲರೂ ರಾಜೀನಾಮೆ ನೀಡುವಲ್ಲಿಗೆ ಬಂದರು. ಉತ್ತರ ಪ್ರದೇಶದ ವರದಿಗಾರನಿಂದ ಅದು ಆರಂಭವಾಗಿದ್ರೆ ಮಧ್ಯಪ್ರದೇಶದ ವರದಿಗಾರ ನಂತರ ಕೆಲಸ ಬಿಟ್ಟರು. ಪಶ್ಚಿಮಬಂಗಾಳ, ರಾಜಸ್ಥಾನ, ಚಂಡೀಗಡ, ಬೆಂಗಳೂರು, ಹೀಗೆ ಅನೇಕ ಕಡೆಗಳ ಬ್ಯೂರೊಗಳಲ್ಲಿ ಎಡಿಟೋರಿಯಲ್ ನೀತಿಯನ್ನು ಪ್ರತಿಭಟಿಸಿ ರಾಜೀನಾಮೆ ನೀಡುವುದು ಮುಂದುವರಿಯುತ್ತಿದೆ.

ನಾವು ರಿಪಬ್ಲಿಕ್‍ಗೆ ಮಾಧ್ಯಮ ಚಟುವಟಿಕೆಗಳಿಗಾಗಿ ಸೇರಿದ್ದು. ಯಾವುದೇ ರಾಜಕೀಯ ಪಕ್ಷದ ಗೂಂಡಾ ಕೆಲಸ ಮಾಡುವುದಕ್ಕಾಗಿರಲಿಲ್ಲ. ಆ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಇರುವವರನ್ನು ಹೊಡೆಯುವ ಕೆಲಸ ಮಾಡುವುದಕ್ಕಲ್ಲ ಎಂದು ಅವರು ಹೇಳಿದರು. ಎರಡು ಚ್ಯಾನೆಲ್ ಮೂಲಕ ತನ್ನ ಹಳೆಯ ಕಂಪೆನಿಯ ವಿರುದ್ಧ ಲೆಕ್ಕ ಚುಕ್ತ ಮಾಡುವ ಕೆಲಸವನ್ನು ಅರ್ನಾಬ್ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಬೊಬ್ಬೆ ಹೊಡೆದು ಮೌನವಾಗಿಸುವ ವರ್ತನೆಯೊಂದಿಗೆ ಸಹೋದ್ಯೋಗಿಗಳೂ, ಹಳೆಯ ಕಾಲದ ಮಾಧ್ಯಮ ಜೊತೆಗಾರರೂ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು.

ರಿಪಬ್ಲಿಕ್ ಪ್ರಮುಖ ಸುದ್ದಿ ನಿರೂಪಕರಲ್ಲಿ ಹೆಚ್ಚಿನವರು ಕೆಲಸ ಬಿಟ್ಟುಹೋದರು. ಇವರಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯನ್ನು ಬಹಿರಂಗವಾಗಿ ಅಪಮಾನಿಸಿ ಸ್ಟುಡಿಯೊದಿಂದ ಹೊರಗಟ್ಟಿದ ಸಂದರ್ಭ ಈಗಲೂ ನೆನಪಿದೆ. ಮತ್ತೆಂದೂ ಅವರು ಮರಳಿ ಚ್ಯಾನೆಲ್ ಕಡೆಗೆ ಮುಖ ಹಾಕಲಿಲ್ಲ. ಅರ್ನಾಬ್ ಬಲಗೈಯಾಗಿದ್ದವರಲ್ಲಿ ಪ್ರಮುಖರೆಲ್ಲ ಕೆಲಸಬಿಟ್ಟು ಹೋದರು. ಇವರೆಲ್ಲ ವೃತ್ತಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆಯನ್ನು ನೀಡಿದವರು. ನಾವು ಯಾಕೆ ರಿಪಬ್ಲಿಕ್ ಬಿಟ್ಟುಹೋದೆವು ಎಂದು ಅವರು ಹೇಳಿಲ್ಲ. ಕಾರಣ ಕೇಳಿದರೆ ‘ನಿಮ್ಮ ವಿರುದ್ಧ ಸುಳ್ಳು ಮಾತಿನ ಲೋಕ ಸೃಷ್ಟಿಸುವ ವೇದಿಕೆ ಆತನೊಂದಿಗೆ ಇದೆ ಎಂದು ಒಬ್ಬ ಮಾಜಿ ಸುದ್ದಿ ನಿರೂಪಕ ಹೇಳಿದರು. ಅರ್ನಾಬ್‍ಗೆ ನನ್ನ ಹೆಸರು ಸೂಚಿಸಿದ್ದು ಆದಿತ್ಯ ರಾಜ್ ಕೌಲ್ ಆಗಿದ್ದಾರೆ. ಹಿಂದೆ ಎರಡು ಸಲ ಜಮ್ಮುವಿಗೆ ಕಳುಹಿಸಿ ನನ್ನ ಕೆಲಸವನ್ನು ಅವರು ಗಮನಿಸಿದ್ದರು.

ಟೈಮ್ಸ್ ನೌನಲ್ಲಿ ಅಂದು, ರಿಪಬ್ಲಿಕ್‍ನಲ್ಲಿ ಈಗಲೂ ಹಲವು ಎಕ್ಸ್‍ಕ್ಲೂಸಿವ್ ಸ್ಟೋರಿಗಳ ಹಿಂದೆ ಆದಿತ್ಯ ಕೈ ಇತ್ತು. ನಾನು ನೇರವಾಗಿ ಅವರ ಸಂಪರ್ಕದ ಜಗತ್ತನ್ನು ಕಂಡವನು. ಅವರು ರಿಪಬ್ಲಿಕ್ ಟೀಮ್‍ಗೆ ಸಿಕ್ಕಿದ್ದು ಅರ್ನಾಬ್‍ರ ಭಾಗ್ಯವಾಗಿತ್ತು. ಯಾಕೆಂದರೆ, ರಿಪಬ್ಲಿಕ್ ಟಿವಿ ಬ್ರೇಕಿಂಗ್ ವಾರ್ತೆಗಳಿಂದ ಹಿಡಿದು ಎಕ್ಸ್‍ಕ್ಲೂಸಿವ್‍ಗಳು, ಸಂದರ್ಶನಗಳವರೆಗೆ ಎಲ್ಲವನ್ನೂ ಪ್ರಸಾರಮಾಡುತ್ತಿದ್ದ ದಿನಗಳಿದ್ದವು. ನಾವು ತಮಾಷೆಗೆ ರಿಪಬ್ಲಿಕ್ ಟಿವಿಯನ್ನು ಆದಿತ್ಯ ಟಿವಿಯೆಂದು ಅರ್ನಾಬ್ ಬದಲಾಯಿಸಬೇಕಾಗುತ್ತದೆ ಎಂದು ಹೇಳು ತ್ತಿದ್ದೆವು. ಆದರೆ ಅವರ ಕೆಲಸಕ್ಕೆ ಅರ್ನಾಬ್ ಹೆಚ್ಚುವರಿ ಏನನ್ನೂ ಕೊಡಲಿಲ್ಲ. ಆದರೆ, ಪ್ರತೀ ವಾರ್ತೆಯಲ್ಲಿಯೂ ಆದಿತ್ಯರ ಸ್ಪರ್ಷ ಇತ್ತು. ಹೀಗಿದ್ದಾಗಲೇ ಒಂದು ದಿನ ಆದಿತ್ಯ ಕೆಲಸ ಬಿಟ್ಟು ಹೋದರು. ಅವರು ಬಿಟ್ಟು ಹೋದ ಕಾರಣ ಏನು? ಆ ದಿತ್ಯ ಮತ್ತು ಅರ್ನಾಬ್ ನಡುವೆ ಏನು ನಡೆದಿತ್ತು ಎಂದು ನಮಗೆ ಈಗಲೂ ಗೊತ್ತಿಲ್ಲ.

ಅರ್ನಾಬ್‍ರನ್ನು ಚೆನ್ನಾಗಿ ಗೊತ್ತಿರುವವರು ರಿಪಬ್ಲಿಕ್‍ನಲ್ಲಿ ಆದಿತ್ಯ ಇನ್ನೂ ಬೆಳೆಯುವುದು ಅರ್ನಾಬ್‍ರಿಂದ ಸಹಿಸುವಂತಹದಲ್ಲ ಎಂದು ಊಹಿಸಿರಬಹುದು. ಆದಿತ್ಯರಿಗೆ ಹೊರಹೋಗುವ ದಾರಿಯನ್ನು ಇದುವೇ ತೋರಿಸಿಕೊಟ್ಟಿರಬಹುದು. ಆದಿತ್ಯ ಹೊರಟು ಹೋದ ಮೇಲೆ ರಿಪಬ್ಲಿಕ್ ಚ್ಯಾನೆಲ್‍ನ ಬೆನ್ನು ಮೂಳೆ ಮುರಿಯಿತು. ಅವರ ಭಾರವನ್ನು ಹೊರಲು ಅರ್ನಾಬ್ ನಮ್ಮ ಮೇಲೆ ಒತ್ತಡ ಹಾಕಿದರು. ಆದರೆ, ಅದು ನಡೆಯಲಿಲ್ಲ. ನಮ್ಮ ಕೆಲಸಗಳನ್ನು ಅರ್ನಾಬ್ ಒಪ್ಪಲೂ ಇಲ್ಲ. ನಾನು ಇಲ್ಲಿ ಸೇರುವ ಮೊದಲೇ, ರಿಪಬ್ಲಿಕ್ ತಂಡದ ಭಾಗವಾಗಿದ್ದ ಕೆಲವರ ಹೆಸರನ್ನು ಹೇಳುತ್ತೇನೆ.

ಸ್ನೇಹಾಶೀಸ್ ಆಲಕ್ಸ್ ಫಿಲಿಪ್. ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಅತ್ಯಂತ ಉನ್ನತ ಪತ್ರಕರ್ತರಲ್ಲಿ ಒಬ್ಬರು. ಈ ಹಿಂದೆ ಮುಂಚೂಣಿ ಸುದ್ದಿ ಸಂಸ್ಥೆಯೊಂದಕ್ಕಾಗಿ ಅವರು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರು ಅರ್ನಾಬ್ ತಂಡಕ್ಕೆ ಸೇರಿದರು. ಅವರು ಕೆಲಸ ಬಿಟ್ಟು ಹೋಗಲು ಪಕ್ಷಪಾತದ ಎಡಿಟೋರಿಯಲ್ ನೀತಿ, ಸಿಬ್ಬಂದಿಗಳೊಂದಿಗೆ ಪಕ್ಷಪಾತ ಕಾರಣವಾಯಿತು. ಸ್ನೇಹಾಶಿಸ್‍ರ ಹಳೆಯ ವರದಿಗಳನ್ನು ರಿಪಬ್ಲಿಕ್ ವಾರ್ತೆಗಳಿಗೆ ಇಂದೂ ಬಳಸಲಾಗುತ್ತಿದೆ. ದಕ್ಷಿಣ ಭಾರತದ ಸ್ಟಾರ್ ನಿರೂಪಕ ಹರಿಹರನ್. ರಿಪಬ್ಲಿಕ್‍ಗೆ ಸೇರಿ

ತಿಂಗಳಾಗುವುದರೊಳಗೆ ಕೆಲಸ ಬಿಟ್ಟರು. ಇದಕ್ಕೂ ಕಾರಣವನ್ನು ಬೇರೆ ಹೇಳಬೇಕಾಗಿಲ್ಲವಷ್ಟೇ.
ಪರೀಕ್ಷಿತ್ ಲೂತ್ರಾ. ಇವರಂತಹ ಮೃದು ಮಾತುಗಾರ ಜೊತೆಗೆ ತನ್ನನ್ನು ಕೆಲಸದಲ್ಲಿ ಸಮರ್ಪಿಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ನಾನು ನೋಡಿಲ್ಲ. ಅವರು ಯಾಕೆ ಕೆಲಸ ಬಿಟ್ಟರು ಎಂದು ಎಲ್ಲರಿಗೂ ಗೊತ್ತಿದೆ. ಲೂತ್ರ ಈಗಲೂ ಮಾಧ್ಯಮ ಕ್ಷೇತ್ರದಲ್ಲೇ ಇದ್ದಾರೆ. ಹೆಚ್ಚು ಸಕ್ರಿಯರಾಗಿ. ಸುದೀರ್ಘ 17 ವರ್ಷ ದೂರದರ್ಶನದಲ್ಲಿ ಸುದ್ದಿ ಓದುತ್ತಿದ್ದ ಸಕಲ್ ಭಟ್ ದೊಡ್ಡ ಅನುಭವಿ. ಅವರು ರಿ ಪಬ್ಲಿಕ್‍ಗೆ ಬಂದರು. ಆದರೆ ಅರ್ನಾಬ್‍ಗೆ ತನಗಿಂತ ದೊಡ್ಡವರೋ, ಹೆಚ್ಚು ಅಭಿಮಾನಿಗಳಿರುವ ಯಾರನ್ನೂ ಸಹಿಸಲಾಗುವುದಿಲ್ಲ. ಸಕಲ್ ಕೂಡ ಕೆಲಸ ಬಿಟ್ಟು ಹೋದರು. ಪುನಃ ದೂರದರ್ಶನಕ್ಕೆ ಮರಳಿ ಈಗಲೂ ಅವರು ಪ್ರೈಂ ಟೈಂ ಸುದ್ದಿ ಪ್ರಸ್ತುತಪಡಿಸುತ್ತಿದ್ದಾರೆ.

ಟೈಮ್ಸ್ ನೌ ತೊರೆದು ರಿಪಬ್ಲಿಕ್‍ಗೆ ಬಂದ ಪೂಜಾ ಪ್ರಸನ್ನ ಈ ಕಂಪೆನಿ ಹೊಸ ಎತ್ತರಕ್ಕೆ ಏರಲು ನೆರವಾದವರು. ಅರ್ನಾಬ್‍ರ ಜೊತೆ ಮುಂಬೈಯಲ್ಲಿ ಸ್ಟುಡಿಯೊ ಸೆಟ್ ಹಾಕಲು ಕುಟುಂಬವನ್ನು ಬಿಟ್ಟು ವಾರಗಳ ಕಾಲ ಮುಂಬೈಯಲ್ಲಿ ಓಡಾಡಿದವರು. ಅವರೂ ಈಗ ರಿಪಬ್ಲಿಕ್‍ನಲ್ಲಿಲ್ಲ. ಆದರೆ ಅದು ಯಾಕೆ ಆ ಕಾರಣವನ್ನು ಹೇಳುವುದಿಲ್ಲ. ಈ ಚ್ಯಾನೆಲ್‍ನ ಬೆನ್ನೆಲುಬು ಪ್ರೇಮಾ ಶ್ರೀದೇವಿ ಆಗಿದ್ದರು. ಆವರೂ ಈ ಕೆಲಸ ಬೇಡ ಎಂದು ಕೆಲಸ ಬಿಟ್ಟರು. ಪ್ರೇಮರಿಲ್ಲದ ಈ ಚ್ಯಾನೆಲ್ ಸೊನ್ನೆಯಂತಾಗಿದೆ ಎಂದು ಹಿಂದೊಮ್ಮೆ ಅರ್ನಾಬ್ ಹೇಳಿದ್ದು ನನಗೆ ಈಗ ನೆನಪಾಗುತ್ತಿದೆ.

ಕಳೆದ ಒಂದು ವಾರದಲ್ಲಿ ಇನ್ನೂ ಹಲವು ಮಂದಿ ರಾಜೀನಾಮೆ ನೀಡಿದ್ದು ನನಗೆ ಗೊತ್ತಾಯಿತು. ರಿಯಾ ಚಕ್ರವರ್ತಿಯ ಸಂದರ್ಶನ ಮಾಡಲು ಆಗದೆ ಅಪಮಾನಿಸಲ್ಪಟ್ಟದ್ದಕ್ಕೆ ಅವರು ಕೆಲಸ ದಿಂದ ಇಳಿದು ಹೋದರು. ಬೇರೆ ಚ್ಯಾನೆಲ್‍ಗಿಂತ ಮೊದಲು ರಿಯಾರ ಸಂದರ್ಶನ ಮಾಡಿ ಅವುಗಳನ್ನು ಹಿಂದಿಕ್ಕುವ ಯತ್ನದಲ್ಲಿ ಸಿಬ್ಬಂದಿಗಳನ್ನು ಅರ್ನಾಬ್‍ಗೆ ಪೀಡಿಸಲು, ಅಪಮಾನಿಸಲು ಯಾವ ಹಿಂಜರಿಕೆಯೂ ಇರಲಾರದು.

ದೇಶದ ದೊಡ್ಡ ಟಿವಿ ಶೃಂಖಲೆ ರಿಪಬ್ಲಿಕ್ ಆಗಿದೆ ಎಂದು ಅರ್ನಾಬ್ ಹೇಳುತ್ತಿದ್ದರೂ ವಾಸ್ತವದಲ್ಲಿ ಹಲವು ರಾಜ್ಯಗಳಲ್ಲಿ ಒಬ್ಬನೇ ಒಬ್ಬ ವರದಿಗಾರ ಆ ಚ್ಯಾನೆಲ್‍ಗಿಲ್ಲ. ಇದ್ದವರು ರಾಜೀನಾಮೆ ನೀಡಿ ಹೋದರು. ಒಬ್ಬ ವೃತ್ತಿಪರ ಪತ್ರಕರ್ತ ಅದರ ಭಾಗವಾಗಲು ಇನ್ನು ಮುಂದೆ ಇಚ್ಛಿಸಲಾರ. ದಿಲ್ಲಿಯಲ್ಲಿ ಒಬ್ಬ ಬೀಟ್ ವರದಿಗಾರರು ಕೂಡ ಇಲ್ಲ. ವಾಯುಸೇನೆ ಮತ್ತು ನೌಕಾ ಸೇನೆಯ ಯುನಿ ಫಾರ್ಮ್ ಗುರುತಿಸಲು ತಿಳಿಯದ ಒಬ್ಬ ಕ್ರೈಂ ವರದಿಗಾರ ರಕ್ಷಣಾ ವಾರ್ತೆಗಳನ್ನು ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದಿನ ಹಳೆಯ ಸುದ್ದಿ ವಾರ್ತೆಯನ್ನು ಇಂಟರ್ ನೆಟ್ ನಿಂದ ಹೊರತೆಗೆದು ವರದಿ ಮಾಡಿ ನಾಚಿಗೆಗೆಟ್ಟಾಗ ಅರ್ನಾಬ್ ಅದನ್ನು ಸೇನೆಯ ತಲೆಗೆ ಕಟ್ಟಿದ್ದರು. ಹಿರಿಯ ಸೇನಾಧಿಕಾರಿ ಇದನ್ನು ಕೊಟ್ಟಿದ್ದಾರೆ ಎಂದು ವಾದಿಸಲು ನಕಲಿ ಸ್ಕ್ರೀನ್ ಶಾಟ್‍ಗಳನ್ನು ಪ್ರಸಾರ ಮಾಡಿದರು. ಕೆಲವು ದಿವಸಗಳಿಂದೀಚೆಗೆ ಅರ್ನಾಬ್ ಸ್ವಜನಪಕ್ಷಪಾತವನ್ನು ಶುರುವಿಟ್ಟಿದ್ದಾರೆ.

ಒಂದು ವೇಳೆ ಹಾಗೆಂದಾದರೆ ಅರ್ನಾಬ್ ಅದಕ್ಕೆ ಹೆಚ್ಚು ಸೂಕ್ತವಾದ ವ್ಯಕ್ತಿ ಎಂದು ನಾನು ಹೇಳುತ್ತೇನೆ. ಆವರ ಪತ್ನಿ (ಅವರ ಯೋಗ್ಯತೆ, ಅರ್ನಾಬ್‍ರ ಪತ್ನಿ ಎನ್ನುವುದು) ಎರಡೂ ಚ್ಯಾ ನೆಲ್‍ಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರಿಗೆ ನಿಕಟವಾಗಿದ್ದ ಕೆಲಸಗಾರರಲ್ಲಿ ಒಬ್ಬರಿಗೆ ಎಕ್ಸಿಕ್ಯೂಟಿವ್ ಎಡಿಟರ್ ನ್ಯೂಸ್ ಆಗಿ ಭಡ್ತಿ ಸಿಕ್ಕಿತು. ರಿಸರ್ಚ್ ಸಹಾಯಕ ನಾಗಿದ್ದ ವ್ಯಕ್ತಿ ಡಿಜಿಟಲ್ ಡೆಸ್ಕ್‍ನ ಮುಖ್ಯಸ್ಥರಾದರು( ಅದಕ್ಕೆ ಕಾರಣ ಈ ಮಹಿಳೆ ಅರ್ನಾಬ್‍ರ ಪತ್ನಿಯ ಊರಿನವರು). ಇತ್ತೀಚೆಗೆ ಸೀನಿಯರ್ ಅಸೋಸಿಯೇಟ್ ಎಡಿಟರಾಗಿ ಭಡ್ತಿ ಸಿಕ್ಕಿದ ವ್ಯಕ್ತಿಯ ಪತ್ನಿಯನ್ನು ಹಿಂದಿ ಚ್ಯಾನೆಲ್‍ನ ಇನ್‍ಪುಟ್ ಮುಖ್ಯಸ್ಥೆಯನ್ನಾಗಿ ಮಾಡಲಾಯಿತು. ಅವರಿಗಿರುವ ಕೆಲಸ, ನೋಯಿಡ ಕಚೇರಿಯ ಸಿಬ್ಬಂದಿಗಳ ಮೇಲೆ ಸದಾ ಸಮಯ ನಿಗಾ ಇರಿಸುವುದು. ಯಾರು ಕಚೇರಿಯಲ್ಲಿದ್ದಾರೆ, ಇಲ್ಲ ಎಂಬುದನ್ನು ಅರ್ನಾಬ್‍ಗೆ ಮತ್ತು ಅವರ ಪತ್ನಿಗೆ ತಿಳಿಸುವುದು ಅವರ ಕೆಲಸವಾಗಿದೆ.

ಸ್ವಲ್ಪ ಸಮಾಧಾನವಾದ ಕೆಲಸ ನನ್ನದಾಗಿತ್ತು. ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿಯವರ ವಿರುದ್ಧ ಮಾತಾಡುವ ಕೆಲಸ ನನ್ನದು. ಸದಾ ಅವರನ್ನು ದೇಶ ವಿರೋಧಿಯಾಗಿ ಪ್ರಸ್ತುತ ಪಡಿಸಿದರೆ ನನ್ನ ಕೆಲಸ ಮುಗಿಯಿತು. ಆ ಹೊಣೆಗಾರಿಕೆಯನ್ನು ಗರಿಷ್ಠವಾಗಿ ನಾನು ನಿರ್ವಹಿಸಿದೆ. ಸುಳ್ಳು ಹೇಳುವುದು ಅಷ್ಟು ನನಗೆ ಹಿಡಿಸದ್ದರಿಂದ ಕ್ರಮೇಣ ಇದನ್ನು ನಾನು ವಿರೋ ಧಿಸತೊಡಗಿದೆ. ಕೆಲವು ಎಕ್ಸ್‍ಕ್ಲ್ಯೂಸಿವ್ ಸುದ್ದಿಗಳನ್ನು ಮಾಡಿದೆ. ಆದರೆ, ಚ್ಯಾನೆಲ್‍ನ ಕೆಲವು ಹಿರಿಯ ಉದ್ಯೋಗಿಗಳು ನನ್ನೊಂದಿಗೆ ನಿರಂತರ ಹೇಳಿದ್ದು, ತೇಜಿಂದರ್ ಈ ಕಂಪೆನಿಯಲ್ಲಿ ನೀನಿರುವುದು ನಿನ್ನಿಂದ ಆದ ತಪ್ಪು ಎಂದರು.

ನಾನು ಮದುವೆಯಾದವನು, ನನಗೆ ಕುಟುಂಬ ಇದೆ. ಮಕ್ಕಳಿದ್ದಾರೆ. ಅವರನ್ನು ಸಾಕಬೇಕು. ಪ್ರತಿತಿಂಗಳು ನನ್ನನ್ನು ನೋಡುವ ಬ್ಯಾಂಕ್ ವ್ಯವಹಾರಗಳಿವೆ. ಹೀಗೆ ಇದಕ್ಕಾಗಿ ಅರ್ನಾಬ್‍ನೊಂ ದಿಗೆ ಕೆಲಸ ಮಾಡಲು ನನ್ನ ಆದರ್ಶಗಳನ್ನೆಲ್ಲ ನಾನು ಬಲಿಕೊಟ್ಟೆ. ರಿಪಬ್ಲಿಕ್‍ನಲ್ಲಿ ಮಾಧ್ಯಮಗಾರಿಕೆ ನಡೆಯುತ್ತಿಲ್ಲ ಎಂದು ಗೊತ್ತಿದ್ದೇ ಇವೆಲ್ಲವನ್ನೂ ಮಾಡಿದ್ದು. ನಾನು ಕೊನೆಯ ಮೊಳೆ ಜಡಿದದ್ದು (ಕೆಲಸ ಬಿಟ್ಟದ್ದು) ಆಗಸ್ಟ್ ಐದರಂದು ಆಗಿತ್ತು. ನಾನು ತೆಗೆಯಲು ಬಯಸಿದ್ದ ಸಂದರ್ಶನವನ್ನು ಇನ್ನೊಬ್ಬ ವರದಿಗಾರನಿಗೆ ಅರ್ನಾಬ್ ವರ್ಗಾಯಿಸಿದರು. ಅದಕ್ಕೆ ಕಾರಣವೇ ನಾಗಿತ್ತು. ಆತ, ಅರ್ನಾಬ್‍ರ ಹೆಂಡತಿಯ ಊರಿನವ ಎಂಬುದಾಗಿತ್ತು. ಆತ್ಮಹತ್ಯೆ ಪ್ರೇರಣೆ ನೀಡಿದ ಆರೋಪದಡಿಯಲ್ಲಿ ಮುಂಬೈಯಲ್ಲಿ ದಾಖಲಾದ ಕೇಸು ಇಲ್ಲದಾಗಿಸಲು ಈ ವರದಿಗಾರ ಅರ್ನಾಬ್‍ಗೆ ಸಹಾಯ ಮಾಡಿದ್ದ.

ಆ ವರದಿಗಾರನ ಶೋ ನಡೆದ ಬಳಿಕ ಅರ್ನಾಬ್ ನನ್ನನ್ನು ಕರೆದು ಬೊಬ್ಬೆ ಹೊಡೆದರು. ನನಗೆ ಸಹನೆ ಕೆಟ್ಟಿತು. ನಾನು ಅವರದೇ ಭಾಷೆಯಲ್ಲಿ ಉತ್ತರ ನೀಡಿದೆ. ಮಾತ್ರವಲ್ಲ, ಶುದ್ಧ ಪಂಜಾಬಿ ಭಾಷೆಯಲ್ಲಿ ಸ್ವಲ್ಪ ಒಳ್ಳೆಯದೇ ಆದ ಮಾತುಗಳನ್ನೂ ಹೇಳಿದೆ. ಅವರು ಅದನ್ನು ತನ್ನ ಜೀವನದಾದ್ಯಂತ ನೆನಪಿನಲ್ಲಿಟ್ಟುಕೊಂಡಾರು. ಜೊತೆಗೆ ಸ್ಟುಡಿಯೊದಲ್ಲಿರುವ ಪ್ಯಾನಲಿಸ್ಟ್‍ಗಳ ವಿರುದ್ಧ ಮೋಟಾರ್ ಪೈಪ್ ತೆರೆದು ಹರಿಯಬಿಡುವಂತೆ ಅರ್ನಾಬ್ ತನ್ನ ಸಹೋದ್ಯೋಗಿಗಳ ಮೇಲೂ ಬೈಯ್ಗುಳ, ನಿಂದಿಸಿ ಕೂಗುಹಾಕುತ್ತಾರೆ. ಇದಕ್ಕೆ ಮದ್ದು ಅರೆಯಲು ಇನ್ನು ತಡವಾಗಬಾರದೆಂದು ನಾನು ಭಾವಿಸಿದೆ.

ನನ್ನನ್ನು ನೀವು ನಂಬಬಹುದು. ಅರ್ನಾಬ್ ಜೊತೆ ಒಂದುಸಲ ಕೆಲಸ ಮಾಡಿರುವ ಎಲ್ಲರಿಗಾಗಿ ನಾನು ಇಷ್ಟು ಹೇಳಿದ್ದಕ್ಕಾಗಿ ಅವರು ತಲೆದೂಗಿದ್ದಾರೆ. ರಿಪಬ್ಲಿಕ್‍ನಿಂದ ಹಲವು ಮಂದಿ ಕೆಲಸ ಬಿಟ್ಟುಹೋಗುತ್ತಾರೆ. ಕೆಲವು ಮಂದಿ ವಿಳಂಬವಾಗದೆ ಅಲ್ಲಿಂದ ಹೊರಬರಲಿದ್ದಾರೆ ಯುವ ಪ್ರತಿಭಾವಂತರನ್ನು ಕೆಲಸಕ್ಕೆ ತೆಗೆದು ಕೊಂಡು ನಯಾಪೈಸೆಯನ್ನು ಕೊಡುವುದು ಅರ್ನಾಬ್ ಕೆಲಸ ಮಾಡಿಸಿಕೊಳ್ಳುವ ಶೈಲಿಯಾಗಿದೆ. ಡೆಸ್ಕ್‍ನ ಪರಿಚಯ ಇಲ್ಲದ ಹೊಸಬರನ್ನು ಡೆಸ್ಕ್‍ನಲ್ಲಿ ಕೂರಿಸಲಾಗುತ್ತಿದೆ.

ಆದ್ದರಿಂದ, ಅವರ ಡೆಸ್ಕ್ ನಲ್ಲಿ ಅವರ ನೀತಿಯನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಒಂದು ಪ್ರತ್ಯೇಕ ರಾಜಕೀಯ ಪಕ್ಷದ ವಾಟ್ಸಪ್ ಸಂದೇಶ ಅವರ ಆ ನೀತಿಯನ್ನು ತೀರ್ಮಾನಿಸುತ್ತದೆ. ವೃತ್ತಿ ಮೌಲ್ಯವನ್ನು ಅರ್ನಾಬ್ ಹಸಿಹಸಿಯಾಗಿ ಉಲ್ಲಂಘಿಸಿದರು. ರಿಪಬ್ಲಿಕ್ (ಇಂಗ್ಲಿಷ್ ಚ್ಯಾನೆಲ್) ಟಿವಿ ಚ್ಯಾನೆಲ್‍ಗೆ ಕೆಲಸಕ್ಕೆ ತೆಗೆದುಕೊಂಡಿದ್ದರೂ ಹಿಂದಿ ಚ್ಯಾನೆಲ್‍ಗೂ ಕೆಲಸಮಾಡಲು ನಮ್ಮ ಮೇಲೆ ಅರ್ನಾಬ್ ಒತ್ತಡ ಹಾಕಿದರು. ಡಿಜಿಟಲ್ ಡೆಸ್ಕ್‍ಗೆ ನಿಗದಿತ ವರದಿಗಳನ್ನು ತರದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆ ಹಾಕುತ್ತಾರೆ. ಕೆಲಸಕ್ಕೆ ಸೇರುವಾಗ ಮಾಡಿಕೊಳ್ಳುವ ಒಪ್ಪಂದದಲ್ಲಿ ಇದು ಏನೂ ಇರಲಿಲ್ಲ. ಇದು ಕೆಲಸ ನಿಯಮಕ್ಕೆ ವಿರುದ್ಧವಾದುದು.. ಹೀಗೆ ಪತ್ರ ಬರೆದ ಎಚ್.ಆರ್ ಸಿಬ್ಬಂದಿಗಳು ಕೂಡ ಕೋರ್ಟು ಮೆಟ್ಟಲು ಏರಬೇಕಾಯಿತು.

ಅರ್ನಾಬ್ ಎಂದರೆ ತನ್ನ ಸಿಬ್ಬಂದಿಗಳ ಮೇಲೆ ಸ್ವಲ್ಪವೂ ಕನಿಕರ ಇಲ್ಲದ ವ್ಯಕ್ತಿ. ಕೊರೊನ ಕಂಟೈನ್‍ಮೆಂಟ್ ಝೋನ್‍ನಲ್ಲಿರುವವರನ್ನು ಕೂಡ ಕೆಲಸಕ್ಕೆ ಬರಲು ಒತ್ತಡ ಹಾಕುತ್ತಾರೆ. ಎಷ್ಟು ಅಪಾಯಕರವಿದೆಂದು ತಿಳಿದರೂ ಸಿಬ್ಬಂದಿಗಳಿಗೆ ಬರದೆ ಬೇರೆ ದಾರಿಯಿರಲಿಲ್ಲ. ಈಗಲೂ ನನ್ನ ಬಳಿ ಕಂಪೆನಿ ಲ್ಯಾಪ್‍ಟ್ಯಾಪ್ ಇದೆ. ಮಾಜಿ ಸಿಬ್ಬಂದಿಗಳಲ್ಲಿ ಹಲವರ ಬಾಧ್ಯತೆ ಕೊಟ್ಟು ತೀರಿಸಬೇಕಾಗಿದೆ. ಮತ್ತು ನನ್ನ ರಾಜೀನಾಮೆ ಇತ್ಯರ್ಥ ಆಗಿ ಎನ್‍ಒಸಿ ರಿವೀಲಿಂಗ್ ಪತ್ರ ಸಿಕ್ಕಿದ ಬಳಿಕ ಅದನ್ನು ಮರಳಿಸಿಬಿಡುವೆ.

20 ದಿವಸಗಳೊಳಗೆ ಎನ್‍ಒಸಿ ರಿವೀಲಿಂಗ್ ಪತ್ರ ಕೊಡದಿದ್ದರೆ ಕೋರ್ಟು ಕಟ್ಟೆ ಹತ್ತುವುದಲ್ಲದೆ ಬೇರೆ ಮಾರ್ಗವಿಲ್ಲ ಎಂದು ಹೇಳುತ್ತಿದ್ದೇನೆ. ಅರ್ನಾಬ್‍ನ ಪ್ರತೀಕಾರ ಬುದ್ಧಿ ನನಗೆ ಗೊತ್ತಿದೆ. ನನ್ನ ಕೆರಿಯರ್ ನಾಶಮಾಡಲು, ಕೆಲಸದ ಮಾರ್ಗಕ್ಕೆ ಅಡ್ಡಗಾಲು ಇಡಲು ಆತ ಶ್ರಮಿಸುತ್ತಾರೆ ಎನ್ನುವುದು ನನಗೆ ಗೊತ್ತಿದ್ದರೂ ಆತನ ವಿರುದ್ಧ ಯಾರಾದರೊಬ್ಬ ಧ್ವನಿಯೆತ್ತಬೇಕಲ್ಲವೇ? ಇ ನ್ನಾದರೂ ಬಹಳಷ್ಟು ಯುವಕರು ಈತನ ವಂಚನೆ ಜಾಲಕ್ಕೆ ಬೀಳುವುದನ್ನು ತಡೆಯುವುದಾದರೂ ಆಗಬೇಡವೇ?.

ಇನ್ನೂ ಒಂದು ವಿಷಯವನ್ನು ಲಿಖಿತವಾಗಿಯೇ ಹೇಳುತ್ತೇನೆ, ನನಗೋ, ನನ್ನ ಕುಟುಂಬಕ್ಕೋ ಯಾವುದೇ ಅಪಾಯ ಸಂಭವಿಸಿದರೆ, ಅದಕ್ಕೆ ಜವಾಬ್ದಾರಿ ಅರ್ನಾಬ್ ಮತ್ತು ಅವರ ಪತ್ನಿ ಆಗಿರುತ್ತಾರೆ. ಈ ಅಫಿದಾವಿತ್ ನಾನು ತುರ್ತಾಗಿ ಊರಿನ ಪೊಲೀಸ್ ಠಾಣೆಗೆ ತಲುಪಿಸುತ್ತೇನೆ. ಬಿಟಿಡಬ್ಲ್ಯೂ ಹನಿ ಕೌರ್, ನಿಮಗೆ ಒಳಿತಾಗಲಿ, ಮಾಜಿ ಎಚ್‍ಆರ್ ಮುಖ್ಯಸ್ಥೆ ಅನುಭವಿಸಿದ್ದು ನಿಮಗೆ ಆಗದಿರಲಿ.

ಇತೀ,

ತೇಜಿಂದರ್ ಸಿಂಗ್ ಸೋಧಿ

(ಮಾಜಿ ಬ್ಯೂರೊ ಹೆಡ್, ರಿಪಬ್ಲಿಕ್ ಟಿವಿ. ಈಗ ಸ್ವತಂತ್ರ)

[ಕೃಪೆ: ಮಾಧ್ಯಮಂ]