ಆರ್‌ಟಿ‌ಐ ಮಾಹಿತಿಯ ನಂತರ ಕೊರೋನಾ ಪರಿಹಾರ ನಿಧಿಯ ವೆಚ್ಚವನ್ನು ಸರಕಾರ ತರತುರಿಯಲ್ಲಿ ಹೇಳಿಕೊಂಡಂತಿದೆ: ಉಳಿಕೆಯ ಮಾಹಿತಿ ಬಹಿರಂಗಕ್ಕೆ ವೆಲ್ಫೇರ್ ಪಾರ್ಟಿ ಒತ್ತಾಯ

0
485

ಸನ್ಮಾರ್ಗ ವಾರ್ತೆ

ಪುತ್ತೂರು: ಸಿಎಂ ಪರಿಹಾರ ನಿಧಿಗೆ ಕೊರೋನಾ ಸಂಕಷ್ಟಕ್ಕೆಂದು ಸಾರ್ವಜನಿಕರಿಂದ 290 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. ಆದರೆ, ರಾಜ್ಯ ಸರ್ಕಾರ ಕೊರೋನಾ ಸಂಕಷ್ಟಕ್ಕೆ ಒಳಗಾದ ಜನರಿಗೆ ವಿನಿಯೋಗಿಸಿಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆರೋಪಿಸಿದರು.

ಈ ಕುರಿತು ಮಾತನಾಡಿದ ಅವರು, ಈ ಹಣ ಕೊರೋನಾ ತುರ್ತು ಸೇವೆಗೆ ಮೀಸಲಿಡಲಾಗಿದೆ ಎಂದು‌ ಸರ್ಕಾರ ಹೇಳಿಕೊಳ್ಳುತ್ತಿದೆ. ನಿರುದ್ಯೋಗ, ಆರ್ಥಿಕ ಕುಸಿತ ಇವೆಲ್ಲಾ ತುರ್ತುಸ್ಥಿತಿ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಅವರು ಸಿಎಂ ಪರಿಹಾರ ನಿಧಿಯ ವಿವರ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಒಂದು ನಯಾ ಪೈಸೆಯು ಕೊರೋನಾ ಸಂಕಷ್ಟಕ್ಎ ಪರಿಹಾರಕಾರ್ಯಕ್ಕಾಗಿ ಉಪಯೋಸದೇ ಇರುವುದು ಬಹಿರಂಗವಾಗಿತ್ತು. ಆದರೆ, ಈ ಕುರಿತು ವರದಿಗಳು ಪ್ರಕಟವಾಗುತ್ತಲೇ ಬೆರಳೆಣಿಕೆಯ ದಿನಗಳಲ್ಲಿ 140 ಕೋಟಿ ರೂ. ಕಲ್ಯಾಣ ನಿಧಿಗೆ ಬಳಕೆಯಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ ಸರ್ಕಾರ ತರಾತುರಿಯಲ್ಲಿ ಕಲ್ಯಾಣ ನಿಧಿಗೆ ಹಣಕೊಟ್ಟಿರುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದು ಸಾರ್ವಜನಿಕರ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ ಎಂದರು‌.

‌ಬಿಜೆಪಿ ಮುಂದಿನ ಅಕ್ಟೋಬರ್​ನಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನರಿಂದ ಸಂಗ್ರಹಿಸಿದ ಹಣವನ್ನು ಕೂಡಿಡುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ ಸಾರ್ವಜನಿಕರಿಂದ ಸಂಗ್ರಹಿಸಿರುವ ನಿಧಿಯ ವೆಚ್ಚ ಮತ್ತು ಉಳಿಕೆಯ ಮಾಹಿತಿಯನ್ನು ಸರ್ಕಾರ ಕೂಡಲೇ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.