ಸನ್ಮಾರ್ಗ ವಾರ್ತೆ
ಬಿಂದ್(ಮಧ್ಯ ಪ್ರದೇಶ),ಜು.6: ಶಾಲೆಗೆ ಹೋಗಿ ಮುಟ್ಟಬೇಕಾದರೆ 24 ಕಿಲೋ ಮೀಟರ್ ಸೈಕಲ್ ತುಳಿಯಬೇಕು. ಹೀಗೆ ಹೋಗಿ ಕಲಿತ ಹದಿನೈದು ವರ್ಷದ ಬಾಲಕಿಗೆ ಎಸೆಸೆಲ್ಸಿಯಲ್ಲಿ ಎಂಟನೇ ರ್ಯಾಂಕ್ ಬಂದಿದೆ. ಶೇ. 98.7ರಷ್ಟು ಅಂಕವನ್ನು ಗಳಿಸಿದ್ದಾಳೆ.
ಈಗ ಸಿವಿಲ್ ಸರ್ವಿಸ್ ಕನಸ್ಸನ್ನು ಕಾಣುತ್ತಿರುವ ಬಿಂದ್ನ ಅಜ್ನೋಲ್ ಗ್ರಾಮದ ರೋಷ್ನಿ ರಾಜ್ಯದ ಮೆರಿಟ್ ವಿಭಾಗದಲ್ಲಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಒಂಬತ್ತನೆ ತರಗತಿಯಲ್ಲಿ ರೋಷ್ನಿ ಹನ್ನೆರಡು ಕಿಲೋ ಮೀಟರ್ ದೂರದ ಮೊಹ್ಗಾಂ ಸರ್ಕಲ್ ಸ್ಕೂಲ್ಗೆ ಸೇರಿದ್ದಳು. ಪ್ರಯಾಣ ಸೌಕರ್ಯ ಇಲ್ಲದ್ದರಿಂದ ಸೈಕ್ಲ್ನಲ್ಲಿ ಹೋಗಿ ಬರಲು 24 ಕಿ.ಮೀ ಸೈಕಲ್ ತುಳಿಯಬೇಕಾಗಿದೆ.
ಮಗಳ ಸಾಧನೆಗೆ ತಂದೆ ಪುರುಷೋತ್ತಮ್ ಅವಳಿಗೆ ವಾಹನ ಸೌಕರ್ಯ ಮಾಡಿಕೊಡುವ ಪ್ರಯತ್ನ ಆರಂಭಿಸಿದ್ದಾರೆ. ಅವರು ಗ್ರಾಮೀಣ ರೈತ. ಇತರರಿಂದಾಗದ ಸಾಧನೆ ಮಾಡಿದ ಮಗಳ ಬಗ್ಗೆ ಅವರಲ್ಲಿ ಅಪಾರ ಸಂತಸವಿದೆ.
‘ಸೈಕಲ್ನಲ್ಲಿ ಸ್ಕೂಲಿಗೆ ಹೋಗುವುದು ತುಂಬ ಕಷ್ಟಕಾರ್ಯ. ಅಧ್ಯಯನ ವರ್ಷದಲ್ಲಿ 60 ರಿಂದ 70 ದಿವಸಗಳವರೆಗೆ ನಾನು ಸೈಕಲ್ನಲ್ಲಿ ಶಾಲೆಗೆ ಹೋದೆ. ತಂದೆಗೆ ಸಮಯ ಇದ್ದರೆ ಅವರೇ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದರು ಎಂದು ರೋಷನಿ ಹೇಳುತ್ತಾಳೆ. ರೋಷ್ನಿಯ ಸಾಧನೆಯನ್ನು ಪ್ರಿನ್ಸಿಪಾಲ್ ಹರಿಶ್ಚಂದ್ರ ಶರ್ಮ ಅಭಿನಂದಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












