ಹಾನಗಲ್ ಅತ್ಯಾಚಾರ ಪ್ರಕರಣ: ಅನೈತಿಕ ಪೋಲಿಸ್ ಗಿರಿಯನ್ನು ಮಟ್ಟ ಹಾಕಲು ವೆಲ್ಫೇರ್ ಪಾರ್ಟಿ ಒತ್ತಾಯ

0
318

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಾವೇರಿ ಜಿಲ್ಲೆ ಹಂಗಲ್ ನಲ್ಲಿ ನಡೆದ ನೈತಿಕ ಪೋಲಿಸ್ ಗಿರಿ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯ. ಮನದಲ್ಲಿ ಕೋಮು ವಿಷ ತುಂಬಿಕೊಂಡು ಸಂವಿಧಾನ ತತ್ವಕ್ಕೇ ಅಪಚಾರಗೈದು ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಪ್ರಕ್ರಿಯೆಯನ್ನು ಸರಕಾರ ಮಟ್ಟ ಹಾಕಲೇಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಭವಿಷ್ಯದಲ್ಲಿ ಇದು ತುಂಬಾ ಅಪಾಯಕಾರಿ. ಕಾನೂನಿನ ಬಗ್ಗೆ ಜನರಿಗೆ ಭಯ ಹೊರಟು ಹೋಗಿರುವುದೇ ಇಂತಹ ಪ್ರಕ್ರಿಯೆಗೆ ಕಾರಣವಾಗಿದೆ. ಸಾಮೂಹಿಕ ಅತ್ಯಾಚಾರಗೈದ ಪ್ರಕರಣ ಸಾಮಾನ್ಯವಲ್ಲ. ಇದುವರೆಗೆ ಬಂದಿತರಾದ ಆರು ಮಂದಿಯಲ್ಲಿ ಇಬ್ಬರು ಆ ಪ್ರಕರಣದಲ್ಲಿ ಭಾಗಿಯಾಗದವರಲ್ಲ, ನನಗೆ ಆ ಇಬ್ಬರ ಫೋಟೋ ಮಾತ್ರ ತೋರಿಸಿದ್ದು ಅವರೀರ್ವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡಬೇಕಾದುದು ಸರಕಾರದ ಕರ್ತವ್ಯ. ಪ್ರಕರಣ ಮುಚ್ಚಿ ಹಾಕಲು ಸರಕಾರ ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವೂ ಗಮನಾರ್ಹ. ” ಎಂದವರು ಹೇಳಿದರು.