ಪಂಜಾಬ್ ಕಾಂಗ್ರೆಸ್‍ನಲ್ಲಿ ಉಸ್ತುವಾರಿ ಬದಲಾಯಿಸುವ ಚಿಂತನೆ

0
618

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್‍ರನ್ನು ಪಂಜಾಬ್ ಹೊಣೆಗಾರಿಕೆಯಿಂದ ಬದಲಾಯಿಸುವ ಚಿಂತನೆ ಕಾಂಗ್ರೆಸ್‍ನಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ. ಹರೀಶ್ ರಾವತ್ ಬದಲು ಹರೀಶ್ ಚೌಧರಿಗೆ ಹೊಣೆ ವಹಿಸುವ ಕೊಡುವ ತೀರ್ಮಾನವಿದ್ದು ಪಂಜಾಬ್‍ನಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲಿ ಹರೀಶ್ ಚೌಧರಿಯನ್ನು ವೀಕ್ಷಕರಾಗಿ ಕಾಂಗ್ರೆಸ್ ಕಳುಹಿಸಿತ್ತು.

ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ಹರೀಶ್ ರಾವತ್ ಭಿನ್ನಾಭಿಪ್ರಾಯ ತೀವ್ರವಾಗಿದ್ದು ಇಬ್ಬರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಬಿಜೆಪಿಗೆ ಅಮರೀಂದರ್ ಸಿಂಗ್ ಸಹಾಯ ಮಾಡುತ್ತಿದ್ದಾರೆ ಎಂಬ ಹರೀಶ್ ರಾವತ್‍ರ ಟೀಕೆಗೆ ಅಮರೀಂದರ್ ಸಿಂಗ್ ಕುಟಕಿದ್ದು ನಾಲ್ಕುವರೆ ವರ್ಷ ಅಧಿಕಾರದಲ್ಲಿ ಕುಳಿತಿದ್ದ ಪಾರ್ಟಿಯ ದಯನೀಯ ಸ್ಥಿತಿಯನ್ನು ಇದು ತೋರಿಸುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ವಿಧಾನ ಸಭೆಗೆ ಮುಂಚೆ ರಾವತ್‍ರೊಡನೆ ಮಾತಾಡಿದ್ದು ಆಗ ತನ್ನ ವಿರುದ್ಧ 45 ಶಾಸಕರು ನೀಡಿದ ಪತ್ರವನ್ನು ನೋಡಿಲ್ಲ ಎಂದಿದ್ದರು. ಈಗ ಅವರು ಸುಳ್ಳು ಹೇಳುತ್ತಿರುವುದು ಆಶ್ಚರ್ಯವುಂಟು ಮಾಡಿದೆ ಎಂದು ಅಮರೀಂದರ್ ಸಿಂಗ್ ಹೇಳಿದರು. ಸೋನಿಯ ಗಾಂಧಿಗೆ ರಾಜೀನಾಮೆ ಪತ್ರ ಕೊಟ್ಟಾಗ ಅವರು ಅಧಿಕಾರದಲ್ಲಿ ಮುಂದುವರಿಯಲ್ಲಿ ಮನವಿ ಮಾಡಿದ್ದರು. ಅಪಮಾನ ಸಹಿಸಿ ಅಧಿಕಾರದಲ್ಲಿರುವುದಿಲ್ಲ ಎಂದು ತನ್ನ ನಿಲುವು. ತನ್ನನ್ನು ಅಪಮಾನಿಸಲಾಗಿದೆ ಎಂದು ಅಮರೀಂದರ್ ಸಿಂಗ್ ಹೇಳಿದರೆ ಅಮರೀಂದರ್ ಸಿಂಗ್‍ರಿಗೆ ಪಾರ್ಟಿ ಎಲ್ಲ ಕಾಲದಲ್ಲಿ ಗೌರವ ಕೊಟ್ಟಿದೆ ಎಂದು ಹರೀಶ್ ರಾವತ್ ಹೇಳಿದ್ದಾರೆ. ಅವರಿಗೆ ಶಾಸಕರು, ಸಚಿವರ ಸಲಹೆ ಅಗತ್ಯವಿರಲಿಲ್ಲ. ಬಿಜೆಪಿಗೆ ಸಹಾಯ ಮಾಡುವುದು ಅಮರೀಂದರ್ ಸಿಂಗ್‍ರ ಕಾರ್ಯಗಳಾಗಿವೆ ಎಂದು ಹರೀಶ್ ರಾವತ್ ಟೀಕಿಸಿದ್ದರು.