ಸನ್ಮಾರ್ಗ ವಾರ್ತೆ
ಚೆನ್ನೈ: ರಾಜಧಾನಿ ಚೆನ್ನೈ ಸಹಿತ ತಮಿಳ್ನಾಡಿನಲ್ಲಿ ಭಾರೀ ಮಳೆಯಾಗಿದೆ. ರಾಮನಾಥಪುರಂ , ತಂಜಾವೂರ್, ತಿರುವಾರೂರ್, ನಾಗಪಟ್ಟಣಂ, ಮಲಿಯಾಡುತ್ತುರೈ, ಗುಡಲ್ಲೂರ್, ವಿಲ್ಲುಪುರಂ, ಚೆಂಗಲ್ಪೆಟ್, ಚೆನ್ನೈ, ಕಾಂಚಿಪುರಂ ತಿರುವಳ್ಳೂರ್, ಕಳ್ಳಕುರಿಚ್ಚಿ ಅರಿಯಾಲೂರ್, ಪೆರಂಬಲೂರ್, ಶಿವಗಂಗ, ಪುದುಚ್ಚೇರಿ, ಕಾರಕ್ಕಲ್ಗಳ್ಳಿ ಭಾರೀ ಮಳೆಯಾಗಿದೆ.
ಚೆನ್ನೈ, ಕಾಂಚಿಪುರಂ, ಚೆಂಗಲ್ಪೆಟ್, ತಿರುವಳ್ಳೂರ್, ರಾಣಿಪೇಟ್ ಸೇರಿ 6 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಮಳೆಯಿಂದ ಚೆನ್ನೈಯಲ್ಲಿ ಇಳಿಯಬೇಕಿದ್ದ ಹತ್ತು ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು. ರವಿವಾರ ರಾತ್ರೆ ಮಳೆ ಆರಂಭವಾಗಿದ್ದು, ಬೆಳಿಗ್ಗೆ ಮುಂದುವರಿದಿದೆ.
ತೆನಿ ಜಿಲ್ಲೆಯಲ್ಲಿ ಗೋಡೆ ಕುಸಿತದಿಂದ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಮುಖ್ಯ ದಾರಿ ಒ.ಎಂ ಆರ್ ನಲ್ಲಿ ನೀರು ತುಂಬಿಕೊಂಡದ್ದರಿಂದ ಸಾರಿಗೆ ಸಂಚಾರಕ್ಕೂ ಅಡಚಣೆಯಾಗಿದೆ. ಆರ್ ಆಕೆ ರಸ್ತೆಯಲ್ಲಿ ಮರ ಬಿದ್ದಿದ್ದು ಅಗ್ನಿಶಾಮಕ ದಳ ತೆರವುಗೊಳಿಸಿ ಸಂಚಾರಕ್ಕೆ ಸುಗಮಗೊಳಿಸಿದೆ.
ಕಳೆದ 24 ಗಂಟೆಗಳಲ್ಲಿ 140 ಮಿಲಿ ಮೀಟರ್ ಮಳೆ ಚೆನ್ನೈಯಲ್ಲಿ ಸುರಿಯಿತು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ 55 ಮಿಲಿ ಮೀಟರ್ ಮಳೆ ಆಗುವುದು ವಾಡಿಕೆ. 1996ರ ನಂತರ ಜೂನ್ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾದ್ದು ಇದೇ ಮೊದಲು ಎಂದು ವರದಿಯಾಗಿದೆ.












