ತಾಂತ್ರಿಕ ತೊಂದರೆ: ಲುಲು ಗ್ರೂಪ್ ಮಾಲಕ ಎಂ.ಎ. ಯೂಸುಫಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್

0
486

ಸನ್ಮಾರ್ಗ ವಾರ್ತೆ

ಕೊಚ್ಚಿ: ಖ್ಯಾತ ಉದ್ಯಮಿ, ಲುಲು ಗ್ರೂಪ್ ಮಾಲಕ ಯೂಸುಫ್ ಅಲಿ ಎಂ. ಎ, ಅವರ ಪತ್ನಿ ಮತ್ತು ಇತರ ಮೂವರನ್ನು ಹೊತ್ತ ಖಾಸಗಿ ಹೆಲಿಕಾಪ್ಟರ್ ಭಾನುವಾರ ಬೆಳಿಗ್ಗೆ ಕೊಚ್ಚಿಯಲ್ಲಿ ಖಾಲಿ ನಿವೇಶನದಲ್ಲಿ ತುರ್ತು ಲ್ಯಾಂಡಿಂಗ್ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್ ನಲ್ಲಿದ್ದವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಸುರಿದ ತುಂತುರು ಮಳೆಯ ಮಧ್ಯೆ ಈ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ ಪನಂಗಡ್ನ ಎನ್ಎಚ್ ಬೈಪಾಸ್ನಿಂದ ಭೂಮಿಯಲ್ಲಿ ಇಳಿಸಲಾಗಿದೆ. ತಾಂತ್ರಿಕ ತೊಂದರೆಯಿಂದ ತುರ್ತು ಲ್ಯಾಂಡಿಂಗ್ ನಡೆಸಲಾಗಿದೆ ಎಂದು ವರದಿಯಾಗಿದೆ. ಪೈಲಟ್ ಮತ್ತು ಇತರರು ಸೊಂಟದವರೆಗಿದ್ದ ಆಳವಾದ ನೀರಿನ ಮೂಲಕ ನಡೆದು, ಸ್ಥಳೀಯ ಜನರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಲುಲು ಗ್ರೂಪ್‌ನ ಅಧ್ಯಕ್ಷರಾಗಿರುವ ಯೂಸುಫ್ ಅಲಿ ಎಂ. ಎ ಮತ್ತು ಇತರರು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಸಂಬಂಧಿಯೋರ್ವರನ್ನು ಭೇಟಿಯಾಗಲು ಪತ್ನಿಯೊಂದಿಗೆ ಕೊಚು ಕಡವಂತ್ರದಲ್ಲಿರುವ ತಮ್ಮ ಮನೆಯಿಂದ ತಮ್ಮ ಕಂಪನಿಯ ಲೋಗೋ ಹೊಂದಿರುವ ಹೆಲಿಕಾಪ್ಟರ್‌ನಲ್ಲಿ ಹತ್ತಿದ್ದರು. ಇದು ಪನಂಗಡ್‌ನ ಮೀನುಗಾರಿಕಾ ಕಾಲೇಜಿನ ಮೈದಾನದಲ್ಲಿ ಇಳಿಸಲು ಮೊದಲೇ ನಿರ್ಧರಿಸಲಾಗಿತ್ತು ಆದರೆ ದುರಾದ್ರಷ್ಟವಷಾತ್ ಸುಮಾರು 200 ಮೀ ದೂರದಲ್ಲಿರುವ ಜವುಗು ಭೂಮಿಯಲ್ಲಿ ಲ್ಯಾಂಡಿಂಗ್ ಮಾಡಲಾಯಿತು ಎಂದು ಮಲಯಾಳಂ ಮಾಧ್ಯಮಗಳು ತಿಳಿಸಿವೆ.

ಹತ್ತಿರವೇ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದರೂ, ಪೈಲಟ್ ನ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ಪನಂಗಡ್ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.