ಸನ್ಮಾರ್ಗ ವಾರ್ತೆ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ 3ನೇ ಸುತ್ತಿನ ಇ-ಹರಾಜು ಇಂದಿಗೆ ಮುಕ್ತಾಯವಾಗಲಿದೆ.
ಈ ಬಾರಿಯ ಪ್ರಧಾನಿ ಮೋದಿಯ ಉಡುಗೊರೆಗಳ ಪೈಕಿ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾರ ಜಾವೆಲಿನ್ ಇ-ಹರಾಜಿನಲ್ಲಿ ಬರೋಬ್ಬರಿ 1 ಕೋಟಿ ರೂ.ಗೆ ಹರಾಜಾಗಿದೆ. ನೀರಜ್ ಜಾವೆಲಿನ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಪ್ರಧಾನಿ ಮೋದಿ ಅವರಿಗೆ ಬಂದಿರುವ ಉಡುಗೊರೆಗಳನ್ನು ಇರಿಸಲಾಗಿದ್ದು, ಇ-ಹರಾಜಿನ ಹರಾಜು ನಡೆಸಲಾಗುತ್ತಿದೆ.












