ಸನ್ಮಾರ್ಗ ವಾರ್ತೆ
ತಿರುವನಂತಪುರಂ: ದೇಶದ ಸಾಮಾಜಿಕ ವಾತಾವರಣ ಮತ್ತು ಶಾಂತಿ ಸಮಾಧಾನವನ್ನು ಕೆಡಿಸುವ ಫ್ಯಾಶಿಸ್ಟ್ ಯತ್ನಗಳ ವಿರುದ್ಧ ಎಚ್ಚರ ವಹಿಸಬೇಕೆಂದು ಡಾ.ಜೆ ದೇವಿಕ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕದ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿ ಇಸ್ಲಾಮಿಕ್ ಕಲ್ಚರಲ್ ಅಸೋಸಿಯೇಶನ್ ಆಯೋಜಿಸಿದ ಸಭೆಯನ್ನು ಉದ್ಘಾಟಿಸಿ ಅವರು ಮಾತಾಡಿದರು.
ಅಸೋಸಿಯೇಶನ್ ಅಧ್ಯಕ್ಷ ಅಡ್ವೊಕೇಟ್ ಎಎಂಕೆ ನೌಫಲ್ ಅಧ್ಯಕ್ಷತೆ ವಹಿಸಿದರು. ತಿರುವನಂತಪುರಂ ಸೆಂಟ್ರಲ್ ಜುಮಾ ಮಸೀದಿಯ ಮುಖ್ಯ ಇಮಾಮ್ ನವಾಝ್ ಮನ್ನಾನಿ ಪನವೂರ್ ಮುಖ್ಯ ಭಾಷಣ ನೀಡಿದರು. ಕಾರ್ಯದರ್ಶಿ ಅಬೂಬಕರ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.












