ಬಹ್ರೇನ್‌ನಲ್ಲಿ ಹಿಂದೂ ದೇವಾಲಯ: ಮಂದಿರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ ಬಹ್ರೇನ್ ದೊರೆ

0
412

ಸನ್ಮಾರ್ಗ ವಾರ್ತೆ

ಭಾರತದಲ್ಲಿ ಮಸೀದಿಗಳ ವಿರುದ್ಧ ಅಭಿಯಾನ ನಡೆಯುತ್ತಿದ್ದರೆ, ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಮಂದಿರಕ್ಕೆ ಅಲ್ಲಿನ ಆಡಳಿತಗಳು ಅವಕಾಶ ಮಾಡಿಕೊಡುತ್ತಿರುವ ವರದಿಗಳು ಪ್ರಕಟವಾಗುತ್ತಿವೆ. ಇದೀಗ ಬಹ್ರೇನ್, ಹಿಂದೂ ಮಂದಿರಕ್ಕೆ ಸ್ಥಳಾವಕಾಶ ನೀಡುವ ಸೂಚನೆ ನೀಡಿರುವುದಾಗಿ ವರದಿಯಾಗಿದೆ.

ಅಬುಧಾಬಿಯ ಹಿಂದೂ ಮಂದಿರದ ಮುಖ್ಯಸ್ಥರಾದ ಬ್ರಹ್ಮವಿಹಾರಿ ಸ್ವಾಮಿ ಮತ್ತು ಅವರ ನಿಯೋಗವು ಬಹ್ರೈನ್ ದೊರೆ ಸಲ್ಮಾನ್ ಬಿನ್ ಮಹಮ್ಮದ್ ಅಲ್ ಖಲೀಫಾ ರನ್ನು ಭೇಟಿಯಾಗಿದೆ. ಭೇಟಿಯ ವೇಳೆ ಬಹ್ರೇನ್‌ನಲ್ಲಿ ಸ್ವಾಮಿ ನಾರಾಯಣ ಮಂದಿರವನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಲಾಗಿದೆ. ಹಿಂದೂ ಮಂದಿರ ಸ್ಥಾಪನೆಗಾಗಿ ಬಹ್ರೈನ್ ಸ್ಥಳವನ್ನು ನೀಡಿದ್ದು, ಇದಕ್ಕಾಗಿ ಬಹ್ರೈನ್ ದೊರೆಗೆ ಬ್ರಹ್ಮವಿಹಾರಿ ಸ್ವಾಮಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಹ್ರೈನ್ ನಲ್ಲಿರುವ ಭಾರತೀಯ ರಾಯಭಾರಿ ಕೂಡ ಉಪಸ್ಥಿತರಿದ್ದರು.

ಯುಏಇ ಬಳಿಕ ಇದು ಅರಬ್ ರಾಷ್ಟ್ರದಲ್ಲಿ ನಿರ್ಮಾಣಗೊಳ್ಳಲಿರುವ ಎರಡನೇ ಮಂದಿರವಾಗಿದೆ. ಇದೇ ವೇಳೆ ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. 2024 ಫೆಬ್ರವರಿಯಲ್ಲಿ ಈ ಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಎಂಬುದಾಗಿ ವರದಿಯಾಗಿದೆ.