ಯುಎಇ ಯೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಇಸ್ರೇಲ್

0
309

ಸನ್ಮಾರ್ಗ ವಾರ್ತೆ

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಸಂಘರ್ಷ ತೀವ್ರಗೊಂಡಿದೆ. ಇದೇವೇಳೆ, ಇಸ್ರೇಲ್ ಮತ್ತು ಯುಎಇ ನಡುವೆ ಮುಕ್ತ ವ್ಯಾಪಾರ ಒಪ್ಪಂದ ನಡೆದಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಸ್ರೇಲಿನ ಹಣಕಾಸು ಮತ್ತು ಕೈಗಾರಿಕಾ ಸಚಿವೆ ಓರ್ನ ಅವರು ದುಬಾಯಿಯಲ್ಲಿ ಈ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ವಾಪಾರ ಒಪ್ಪಂದವು ತೆರಿಗೆಯ ಕುರಿತಂತೆ ಹಾಗೂ ಆಮದು ವಸ್ತುಗಳು ಹಾಗೂ ಬೌದ್ಧಿಕ ಆಸ್ತಿಗಳ ಕುರಿತಂತೆ
ಸಹಕಾರದ ಭರವಸೆಯನ್ನು ನೀಡಿದೆ ಎಂದು ಇಸ್ರೇಲಿ ನಿಯೋಗ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ದುಬೈಯಲ್ಲಿ ಇಸ್ರೇಲಿನ ಇನ್ನಷ್ಟು ಕಂಪನಿಗಳು ತಳವೂರಲು ಇದು ನೆರವಾಗಲಿದೆ ಎಂದು ಅವರು ಹೇಳಿದೆ.

ಈ ವರ್ಷದ ಕೊನೆಯಲ್ಲಿ ಸುಮಾರು ಒಂದು ಸಾವಿರ ಇಸ್ರೇಲಿ ಕಂಪನಿಗಳು ಯುಎಇಯಲ್ಲಿ ಅಥವಾ ಯುಎಇಯ ಮೂಲಕ ಚಟುವಟಿಕೆಯಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.