ಬಿಜೆಪಿಯನ್ನು ಅನುಸರಿಸಲು ಅಲ್ಲ ಪರಿವರ್ತಿಸಲು ಕಾಂಗ್ರೆಸ್ ಪ್ರಯತ್ನಿಸಬೇಕು- ಹಿರಿಯ ನಾಯಕ ಮಣಿಶಂಕರ್ ಅಯ್ಯರ್

0
754

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.7: ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಸ್ಥಳದಲ್ಲಿ ರಾಮ ಮಂದಿರ ಶಿಲಾನ್ಯಾಸ ಪೂಜೆಗೆ ಕಾಂಗ್ರೆಸ್ ನಾಯಕರು ಸೂಚಿಸಿದ ಬೆಂಬಲವನ್ನು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ. ದಿ ಹಿಂದೂ ಪತ್ರಿಕಗೆ ಬರೆದ ಲೇಖನದಲ್ಲಿ ಮಣಿಶಂಕರ್ ಅಯ್ಯರ್ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಯಾರು ಹೆಚ್ಚು ಹಿಂದೂ ಎಂಬ ವಿಷಯವಲ್ಲ. ಯಾರೂ ಹೆಚ್ಚು ಜಾತ್ಯತೀತರು ಎಂಬ ವಿಷಯ ಬಿಜೆಪಿ-ಕಾಂಗ್ರೆಸ್‍ಗಳ ನಡುವೆ ಸ್ಪರ್ಧೆ ಇರಬೇಕಾಗಿದೆ. ನಾವು ಅವರ ಜಾಗವನ್ನು ಅತಿಕ್ರಮಿಸುತ್ತಿದ್ದೇವೆ. ಚುನಾವಣೆಯಲ್ಲಿ ಬೆಲೆ ತೆರಬೇಕಾಗಿ ಬಂದರೂ ಜಾತ್ಯತೀತ ಭಾರತದ ಆಶಯಕ್ಕಾಗಿ ಹೋರಾಡಬೇಕಾಗಿದೆ. ಬಿಜೆಪಿಯ ಮಸುಕಾದ ಪ್ರತಿಯಲ್ಲ ಬದಲಾಗಿ ಬಿಜೆಪಿಗೆ ಬದಲಿಯಾಗಿ ಕಾಂಗ್ರೆಸ್ ನಿಲ್ಲಬೇಕಾಗಿದೆ.

ಮುಹಮ್ಮದಲಿ ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿತ್ತು ಕಾಂಗ್ರೆಸ್. ಆದ್ದರಿಂದ ಪಾಕಿಸ್ತಾನ ಇಸ್ಲಾಮೀ ದೇಶವಾದಾಗ ಭಾರತ ಜಾತ್ಯತೀತ ದೇಶವಾಯಿತು. ಒಂದು ಹಿಂದೂ ದೇಶವನ್ನು ಸೃಷ್ಟಿಸಿ ನಾವು ಜಿನ್ನಾರ ವಾದಕ್ಕೆ ಶಕ್ತಿ ಕೊಡುತ್ತಿದ್ದೇವೆ. ಸೋಮನಾಥ ಮಂದಿರದ ಪುನರುಜ್ಜೀಕರಣದಲ್ಲಿ ಸರದಾರ ಪಟೇಲರ ನಿರ್ದೇಶವನ್ನೂ ಮೀರಿ ಕೇಂದ್ರ ಸರಕಾರ ಭಾಗವಹಿಸಬೇಕಾಗಿಲ್ಲ ಎಂದು ನೆಹರೂ ಘೋಷಿಸಿದ್ದು, ಜಾತ್ಯತೀತ ಮೌಲ್ಯವನ್ನು ಎತ್ತಿಹಿಡಿಯುವುದಕ್ಕಾಗಿತ್ತು.

ರಾಜೀವ್ ಗಾಂಧಿ ಬಾಬರಿಯ ಬೀಗ ತೆರೆದು ಕೊಟ್ಟರು ಎಂಬ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆ ಸರಿಯಲ್ಲ. ಸ್ಥಳೀಯ ಕೋರ್ಟು ತೀರ್ಪು ಪಾಲಿಸುವ ಕೆಲಸವನ್ನು ಅವರು ಮಾಡಿದ್ದು, ಬಾಬರಿ ಮಸೀದಿ ಸಂರಕ್ಷಿಸುವುದೇ ಅವರ ಮೊದಲ ಆದ್ಯತೆಯಾಗಿತ್ತು.

ಮಸೀದಿ ಕೆಡವಿ ಅನ್ಯಾಯವನ್ನು ಆಚರಿಸಲು ಸುಪ್ರೀಂ ಕೋರ್ಟು ಹೇಳಿಲ್ಲ. ಮಸೀದಿ ಹೊರಗಿನ ಭೂಮಿಯಲ್ಲಿ ಶಿಲನ್ಯಾಸ ಮಾಡಲು ರಾಜೀವ ಗಾಂಧಿ ಅನುಮತಿ ನೀಡಿದ್ದು. ಕೆಡವಿದ ಮಸೀದಿಯ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗುವುದು ಎಂದು ಪಿವಿ ನರಸಿಂಹ ರಾವ್ ಹೇಳಿರುವುದನ್ನು ಮರೆಯಬಾರದೆಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.