ಹಾಂಕಾಂಗ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರಜಾಪ್ರಭುತ್ವ ಸಖ್ಯಕ್ಕೆ ಜಯ

0
426

ಸನ್ಮಾರ್ಗ ವಾರ್ತೆ

ಹಾಂಕಾಂಗ್,ನ.26: ಆರು ತಿಂಗಳಿಂದ ಪ್ರತಿಭಟನೆ ನಡೆಯುತ್ತಿರುವ ಹಾಂಕಾಂಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಸಖ್ಯಕ್ಕೆ ಜಯ ಸಿಕ್ಕಿದೆ.

ಹದಿನೆಂಟು ಜಿಲ್ಲಾ ಕೌನ್ಸಿಲ್‍ಗಳಲ್ಲಿ 17ರಲ್ಲಿಯೂ ಪ್ರಜಾಪ್ರಭುತ್ವ ಸಖ್ಯದ ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು 458 ಸೀಟುಗಳಲ್ಲಿ 390 ಸೀಟುಗಳು ಇವರಿಗೆ ಸಿಕ್ಕಿದೆ. ನಾಲ್ಕು ವರ್ಷಗಳ ಹಿಂದೆ ಚೀನಾವನ್ನು ಬೆಂಬಲಿಸುವ ಪಾರ್ಟಿಗಳಿಗೆ 292 ಸೀಟುಗಳು ಸಿಕ್ಕಿದ್ದವು. ಪ್ರಜಾಪ್ರಭುತ್ವ ಪಾರ್ಟಿಗಳಿಗೆ 116 ಸೀಟು ಸಿಕ್ಕಿತ್ತು. ಈಗ ಎಲ್ಲವೂ ಬುಡಮೇಲಾಗಿದ್ದು ಪ್ರಜಾಪ್ರಭುತ್ವವಾದಿ ಪಾರ್ಟಿಗಳು ಮೇಲುಗೈ ಸಾಧಿಸಿವೆ.

ರವಿವಾರ ದಾಖಲೆಯ ಮತದಾನ ನಡೆದಿತ್ತು. 2015ರಲ್ಲಿ ಶೇ. 14.7 ಮತದಾನ ಆಗಿತ್ತು. ಈ ಸಲ ಶೇ.29.4 ಮತದಾನ ಆಗಿದೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವ ಸೂಚನೆಯಿದೆಂದು ಪ್ರಜಾಪ್ರಭುತ್ವ ಸಖ್ಯ ಪಾರ್ಟಿಗಳು ಸಂತಸ ವ್ಯಕ್ತಪಡಿಸಿವೆ. ಜಿಲ್ಲಾ ಕೌನ್ಸಿಗಳಿಗೆ ದೊಡ್ಡ ಅಧಿಕಾರ ಹಾಕಾಂಗಿನಲ್ಲಿಲ್ಲ. ಬಸ್ ರೂಟ್ ನಿರ್ಣಯಿಸುವಂತಹ ಸಣ್ಣಪುಟ್ಟ ಅಧಿಕಾರಗಳನ್ನು ಮಾತ್ರ ಅದು ಹೊಂದಿವೆ. ಆದ್ದರಿಂದ ಜನರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಪ್ರತಿಭಟನೆಯ ನಂತರ ಜನರಲ್ಲಿ ಜಾಗೃತಿ ಮೂಡಿದೆ.