ಇದು ಇತಿಹಾಸದ ಅತ್ಯಂತ ಉಷ್ಣ ದಶಕ:ವಿಶ್ವಸಂಸ್ಥೆಯ ಹವಾಮಾನ ಶೃಂಗದಲ್ಲಿ ಡಬ್ಲ್ಯೂಎಂಒ ವರದಿ

0
505

ಸನ್ಮಾರ್ಗ‌ ವಾರ್ತೆ

ಮ್ಯಾಡ್ರಿಡ್, ಡಿ.4: ಇತಿಹಾಸದಲ್ಲಿಯೇ ಅತ್ಯಂತ ಉಷ್ಣ ಹವಾಮಾನವನ್ನು ಈಗ ಅನುಭವಿಸುತ್ತಿದೆ ಎಂದು ಜಾಗತಿಕ ಹವಮಾನ ಕುರಿತ ಅಧ್ಯಯನ ಬಹಿರಂಗಪಡಿಸಿದೆ. ಹವಾಮಾನ ಅಧ್ಯಯನ ಸಂಘಟನೆಯಾದ ಡಬ್ಲ್ಯೂಎಂಒ ಮ್ಯಾಡ್ರಿಡ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗದಲ್ಲಿ ಮಂಡಿಸಿದ ವಾರ್ಷಿಕ ವರದಿಯಲ್ಲಿ ಈ ದಶಕವನ್ನೆ ಅತಿ ಉಷ್ಣದೆಂದು ಹೇಳಿದೆ. ಬದಲಾವಣೆಗೆ ಹೊಂದಿಕೊಳ್ಳುವ ಮನುಷ್ಯ ಸಾಮರ್ಥ್ಯಕ್ಕಿಂತ ವೇಗದಲ್ಲಿ ಹವಮಾನ ವೈಪರೀತ್ಯವಾಗಿದೆ ಎಂದು ವರದಿ ಬೆಟ್ಟು ಮಾಡಿದೆ.

ಪ್ಯಾರಿಸ್ ಒಪ್ಪಂದ ಪ್ರಕಾರ ಪೂರ್ವ ಅನುಪಾತಕ್ಕಿಂತ 11 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ. ಇತಿಹಾಸದಲ್ಲಿ ಇದು ಅತ್ಯಂತ ಉಷ್ಣ ಕಾಲವಾಗಿದೆ. ಜೈವ ಇಂಧನ, ಕಟ್ಟಡಗಳ ಮೂಲ ಸೌಕರ್ಯಗಳು, ಸರಕು ಸಾಗಾಟ ಸಹಿತ ಮನುಷ್ಯನ ಕಾರ್ಬೊನ್ ಹೊರ ತಳ್ಳುವಿಕೆಯಿಂದಾಗಿ ಆಗಿ ಉಷ್ಣತೆ ತೀವ್ರಗೊಂಡಿತೆಂದು ಅಧ್ಯಯನ ಬಹಿರಂಗಪಡಿಸಿದೆ.