ಎನ್‍ಸಿಪಿ ಸಂಸದ ಉದಯರಾಜೆ ಭೋಸ್ಲೆ ಬಿಜೆಪಿಗೆ

0
449

ಸನ್ಮಾರ್ಗ ವಾರ್ತೆ

ಮುಂಬೈ,ಸೆ.14: ಎನ್‍ಸಿಪಿಯ ಸತಾರ ಸಂಸದ, ಮರಾಠ ಚಕ್ರವರ್ತಿ ಶಿವಾಜಿ ಕುಟುಂಬದ ಉದಯರಾಜೆ ಭೋಸ್ಲೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎನ್‍ಸಿಪಿ ಬಿಡುವ ವಿಷಯವನ್ನು ಪಕ್ಷದ ಅಧ್ಯಕ್ಷ ಶರದ್ ಪವಾರ್‍‌ಗೆ ಗುರುವಾರ ನೇರವಾಗಿ ತಿಳಿಸಿದ್ದಾರೆ. ನಂತರ ಶುಕ್ರವಾರ ದಿಲ್ಲಿಯಲ್ಲಿ ಲೋಕಸಭಾ ಸ್ಪೀಕರ್‌ಗೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರ ಜೊತೆ ಅವರು ದಿಲ್ಲಿಗೆ ಪ್ರಯಾಣಿಸಿದ್ದರು.

ಶನಿವಾರ ಅಮಿತ್ ಶಾರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮುಂದೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಉದಯರಾಜೆ ಭೋಸ್ಲೆಯವರ ನಿಕಟ ಮೂಲಗಳು ತಿಳಿಸಿವೆ. ಮೂರು ಬಾರಿ ಅವರು ಸತಾರದಿಂದ ಎನ್‍ಸಿಪಿ ಟಿಕೆಟ್‍ನಲ್ಲಿ ಗೆದ್ದಿದ್ದರು. ಉದಯರಾಜ್‍ರಿಗೆ ಈ ಸಲ ಬಹುಮತ ಕಡಿಮೆಯಾಗಿತ್ತು. ಮತಯಂತ್ರದಲ್ಲಿ ಸಂದೇಹ ವ್ಯಕ್ತಪಡಿಸಿ ಬ್ಯಾಲೆಟ್ ಪೇಪರ್‍‌ನಲ್ಲಿ ಮತದಾನ ನಡೆಸಲು ಆಗ್ರಹಿಸಿದ್ದರು. ಎನ್‍ಸಿಪಿ ಮತ್ತೋರ್ವ ಪ್ರಬಲ ನಾಯಕ ಭಾಸ್ಕರ್ ಜಾಧವ್ ಗುರುವಾರ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಪವಾರ್ರ ಬಲಗೈ ಅಜಿತ್ ಪವಾರ್‌ರ ಪತ್ನಿ ಸಹೋದರ ಪದಂಸಿಂಗ್ ಪಾಟೀಲ್‍ ಮತ್ತು ಅವರ ಪುತ್ರ ಒಂದು ವಾರದ ಹಿಂದೆ ಎನ್‍ಸಿಪಿಗೆ ರಾಜೀನಾಮೆ ನೀಡಿ ಶಿವಸೇನೆಗೆ ಸೇರಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಕೌನ್ಸಿಲ್ ಅಧ್ಯಕ್ಷ ರಾಮ್‌ರಾಜೆ ನಾಯಿಕ್ ನಿಂಬಾಲ್ಕರ್ ಎನ್‍ಸಿಪಿಯಿಂದ ಬಿಜೆಪಿಗೆ ವಲಸೆ ಹೋಗಿದ್ದಾರೆ.