ಒಂದು ದೇಶ, ಒಂದು ಭಾಷೆ: ಹಿಂದಿಯನ್ನು ಬೆಂಬಲಿಸಿದ ಅಮಿತ್ ಶಾ

0
547

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.14: ಒಂದು ದೇಶ, ಒಂದು ಭಾಷೆ ಎಂಬ ಆಶಯವನ್ನು ಗೃಹ ಸಚಿವ ಅಮಿತ್ ಶಾ ಬೆಂಬಲಿಸಿದ್ದಾರೆ. ಹಿಂದಿ ದಿವಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ಭಾರತ ವಿವಿಧ ಭಾಷೆಗಳ ನಾಡು, ಪ್ರತಿಯೊಂದು ಭಾಷೆಗೆ ಅದರ ಪ್ರಾಮುಖ್ಯತೆಯಿದೆ. ಆದರೆ, ದೇಶವನ್ನು ಒಟ್ಟುಗೂಡಿಸಿಡಲು ಏಕ ಭಾಷೆ ಬೇಕು. ಹೆಚ್ಚು ಜನರು ಮಾತಾಡುವ ‘ಹಿಂದಿ’ ಅದಕ್ಕೆ ಉತ್ತಮವಾಗಿದೆ ಎಂದು ಅಮಿತ್ ಶಾ ಹೇಳಿದರು. ಹಿಂದಿ ಮಾತಾಡುವ ಜನರು ಮಹಾತ್ಮಗಾಂಧಿಯ ಕನಸನ್ನು ಈಡೇರಿಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.