ಅವರು ನನ್ನ ವೆಂಟಿಲೇಟರ್ ತೆಗೆದು ಹಾಕಿದರು, ನಾನು ಸಾಯುತ್ತಿದ್ದೇನೆ- ಕೊರೋನಾ ರೋಗಿಯ ಕೊನೆಯ ಮಾತು

0
916

ಸನ್ಮಾರ್ಗ ವಾರ್ತೆ

ಹೈದರಾಬಾದ್,ಜೂ.29: ಸರಿಯಾದ ಚಿಕಿತ್ಸೆ ಸಿಗದೆ ಕೊರೋನ ರೋಗಿ ಮೃತಪಟ್ಟಿದ್ದಾನೆ ಎಂದು ಬಲವಾದ ಆರೋಪ ಹೈದರಾಬಾದಿನ ಆಸ್ಪತ್ರೆಯೊಂದರ ವಿರುದ್ಧ ಕೇಳಿ ಬಂದಿದೆ. ಈ ಆಸ್ಪತ್ರೆಯಲ್ಲಿ 35 ವರ್ಷದ ಯುವಕ ಕೊರೋನದಿಂದ ಮೃತಪಟ್ಟಿದ್ದು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯ ಯುವಕನ ಸಾವಿಗೆ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.

ಹೈದರಾಬಾದಿನ ಆಸ್ಪತ್ರೆಯೊಂದಕ್ಕೆಯುವಕನನ್ನು ಚಿಕಿತ್ಸೆಗೆ ಸೇರಿಸಲಾಗಿತ್ತು. ಶುಕ್ರವಾರ ವೈರಸ್ ಬಾಧೆ ದೃಢಪಟ್ಟಿತ್ತು. ವೆಂಟಿಲೇಟರ್ ಸೌಲಭ್ಯ ಸಿಕ್ಕಿಲ್ಲ ಎಂದು ರೋಗಿ ಹೇಳುತ್ತಿರುವ ವಿಡಿಯೋ ಪ್ರಚಾರವಾಗಿದೆ. ಕಳೆದ ಮೂರು ಗಂಟೆಗಳಿಂದ ತನಗೆ ವೆಂಟಿಲೇಟರ್ ಸೌಕರ್ಯವನ್ನು ತೆಗೆದುಹಾಕಿದ್ದಾರೆ ಎಂದು ರೋಗಿಯು ಹೇಳುವುದು ವಿಡಿಯೋದಲ್ಲಿದೆ.ಇದರ ಬಗ್ಗೆ ಆಸ್ಪತ್ರೆಯವರಲ್ಲಿ ಕೇಳಿದಾಗ ನಿಮಗೆ ಅಗತ್ಯವಿರುವಷ್ಟು ವೆಂಟಿಲೇಟರ್ ಸೌಕರ್ಯ ಕೊಟ್ಟಿದ್ದೇವೆ ಎಂದು ಉತ್ತರಿಸಿದ್ದರು.

ಇದೇವೇಳೆ, ರೋಗಿಗೆ ಉಸಿರಾಟಕ್ಕೆ ಸಂಬಂಧಿಸಿದ ಅಸೌಖ್ಯ ಮತ್ತು ಹೃದಯದಲ್ಲಿ ಸಮಸ್ಯೆ ಇತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು. ಮೃತಪಡುವುದಕ್ಕೆ ಇದು ಕಾರಣವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.