24 ಗಂಟೆಗಳಲ್ಲಿ 19,459 ಹೊಸ ಸೋಂಕು ಪ್ರಕರಣಗಳು; ದೇಶದಲ್ಲಿ ಒಟ್ಟು 5.4 ಲಕ್ಷ ಕೊರೋನಾ ಸೋಂಕಿತರು

0
441

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.29: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,459 ಮಂದಿಗೆ ಹೊಸದಾಗಿ ಕೊರೋನ ಸೋಂಕು ದೇಢವಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ 5,48,318 ಏರಿಕೆಯಾಗಿದ್ದು, 16,475 ಮಂದಿ ಈವರೆಗೆ ಕೊರೋನದಿಂದ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 380 ಮಂದಿ ಕೊರೋನದಿಂದ ಅಸುನೀಗಿದರು. ಈಗ 2,10,120 ಮಂದಿ ಕೊರೋನ ಚಿಕಿತ್ಸೆಯಲ್ಲಿದ್ದು, 3, 21,723 ಮಂದಿ ಗುಣಮುಖರಾಗಿದ್ದಾರೆ. 1,70,560 ಮಾದರಿಗಳನ್ನು ರವಿವಾರದಂದು ಪರೀಕ್ಷಿಸಲಾಯಿತು ಎಂದು ಐಸಿಎಂಆರ್ ತಿಳಿಸಿದೆ. ಇದುವರೆಗೆ 83,98,362 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಮಹಾರಾಷ್ಟ್ರ, ದೆಹಲಿ, ತಮಿಳ್ನಾಡುಗಳಲ್ಲಿ ಕೊರೋನ ತೀವ್ರ ಹಬ್ಬುತ್ತಿದ್ದು ಮಹಾರಾಷ್ಟ್ರದಲಿ 1,64,626 ಮಂದಿ ಸೋಂಕಿಗೊಳಗಾಗಿದ್ದಾರೆ. ತಮಿಳ್ನಾಡಿನಲ್ಲಿ 82,275 ಮಂದಿ ಹಾಗೂ ದಿಲ್ಲಿಯಲ್ಲಿ 83,077 ಮಂದಿ ಕೊರೋನ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.