ಐ ಲವ್ ಮುಹಮ್ಮದ್ ಅಭಿಯಾನ: ಮೌಲಾನಾ ತೌಕೀರ್ ರಝ ಬಂಧನ

0
717

ಸನ್ಮಾರ್ಗ ವಾರ್ತೆ

ಐ ಲವ್ ಮುಹಮ್ಮದ್ ಅಭಿಯಾನಕ್ಕೆ ಸಂಬಂಧಿಸಿ ಪ್ರಮುಖ ಧಾರ್ಮಿಕ ಮುಖಂಡ ಮತ್ತು ಇತ್ತಿಹಾದೇ ಮಿಲ್ಲತೆ ಕೌನ್ಸಿಲ್ ನ ಮುಖ್ಯಸ್ಥ ಮೌಲಾನ ತವ್ಕೀರ್ ರಝ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಬರೇಲ್ವಿ ಯ ಪ್ರಮುಖ ಧಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡಿರುವ ತೌಕಿರ್ ರಝ ಅವರು ಐ ಲವ್ ಮುಹಮ್ಮದ್ ಎಂದು ಹೇಳಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಪ್ರಶ್ನಿಸಿದ್ದರು. ಶುಕ್ರವಾರದಂದು ತಾನು ಈ ಬಗ್ಗೆ ರ್ಯಾಲಿ ನಡೆಸುವುದಾಗಿಯೂ ಘೋಷಿಸಿದ್ದರು. ಇವರ ಘೋಷಣೆಯ ಬಳಿಕ ಬರೇಲ್ವಿಯ ಇಸ್ಲಾಮಿಯ ಇಂಟರ್ ಕಾಲೇಜ್ ಗ್ರೌಂಡಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರತೊಡಗಿದರು. ಶುಕ್ರವಾರದ ಪ್ರಾರ್ಥನೆಯ ಬಳಿಕ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮುಂದಾಗಿದ್ದರು.

ಇದೇ ವೇಳೆ ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾಗಿ ವರದಿಯಗಿತ್ತು. ಇದೇ ವೇಳೆ ಅನುಮತಿ ನಿರಾಕರಿಸುವುದು ಸುಳ್ಳು ಸುದ್ದಿ, ನಾನು ಸ್ಥಳಕ್ಕೆ ಬರುತ್ತಿದ್ದೇನೆ ಎಂದು ತವ್ಕೀರ್ ರಜಾ ಅವರು ವಿಡಿಯೋ ಮೂಲಕ ತನ್ನ ಬೆಂಬಲಿಗರಿಗೆ ಸುದ್ದಿಯನ್ನು ರವಾನಿಸಿದ್ದರು. ಇದು ಜನರನ್ನು ಸಿಟ್ಟಿಗೆಬಿಸಿತು. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಿತು. ಇದರಿಂದಾಗಿ ಪೊಲೀಸರಿಗೂ ಮತ್ತು ಜನರಿಗೂ ನಡುವೆ ಘರ್ಷಣೆ ಉಂಟಾಯಿತು. ಇದರಲ್ಲಿ 10 ಮಂದಿ ಪೊಲೀಸರಿಗೆ ಗಾಯವಾಯಿತು. ಅಶ್ರು ವಾಯು ಪ್ರಯೋಗವು ನಡೆಯಿತು. 20 ಮಂದಿಯನ್ನು ಬಂಧಿಸಲಾಯಿತು.

ಇದೇ ವೇಳೆ ಐ ಲವ್ ಮೊಹಮ್ಮದ್ ಕ್ಯಾಂಪೇನ್ ಗೆ ಬೆಂಬಲ ಸಾರುವುದಾಗಿ ಪ್ರಮುಖ ಶಿಯಾ ನಾಯಕ ಕಲ್ಬೇ ಜವ್ವಾದ್ ಘೋಷಿಸಿದ್ದಾರೆ.