‘ಜ್ಞಾನೇಶ್ ಕುಮಾರ್ ಇದ್ದಿದ್ದರೆ ಟ್ರಂಪ್‌ಗೆ ಈ ಗತಿ ಬರುತ್ತಿರಲಿಲ್ಲ’; ಅಭಿಜೀತ್ ದೀಪ್ಕೆ ವ್ಯಂಗ್ಯ

0
475

ಸನ್ಮಾರ್ಗ ವಾರ್ತೆ

ದೆಹಲಿ: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಮತ್ತು ಡೊನಾಲ್ಡ್ ಟ್ರಂಪ್ ಎದುರಿಸಿದ ಭಾರಿ ಹಿನ್ನಡೆಯ ಕುರಿತು ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಜ್ಞಾನೇಶ್ ಕುಮಾರ್ ಅವರನ್ನು ವ್ಯಂಗ್ಯವಾಡಿದ್ದಾರೆ. ಜ್ಞಾನೇಶ್ ಅಲ್ಲಿ ಇದ್ದಿದ್ದರೆ ಟ್ರಂಪ್ ಎಂದಿಗೂ ಈ ಗತಿಯನ್ನು ಎದುರಿಸುತ್ತಿರಲಿಲ್ಲ ಎಂಬುದು ದೀಪ್ಕೆ ಅವರ ಟೀಕೆಯಾಗಿತ್ತು.

ಭಾರತದಲ್ಲಿ, ಎಸ್‌ಐಆರ್ (SIR) ಕುರಿತು ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಹರಡುತ್ತಿವೆ. ಇದನ್ನು ಉಲ್ಲೇಖಿಸಿ ದೀಪ್ಕೆ ಅವರು ಜ್ಞಾನೇಶ್ ಅವರನ್ನು ಗೇಲಿ ಮಾಡಿದ್ದಾರೆ. ಅರ್ಹ ಮತದಾರರನ್ನು ಹೊರಗಿಡಲು ಚುನಾವಣಾ ಆಯೋಗ ಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.

ಅಮೆರಿಕ ಚುನಾವಣಾ ಫಲಿತಾಂಶದ ಕುರಿತು ಸಿಜೆಪಿ ನಾಯಕ ಅಶುತೋಷ್ ರಾಂಕ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಜನರು ಈಗ ದ್ವೇಷದ ರಾಜಕೀಯದ ವಿರುದ್ಧ ಮತ ಚಲಾಯಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಈ ಮಧ್ಯೆ, ಡೆಮಾಕ್ರಟ್‌ಗಳು ಅಮೆರಿಕದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಭಾರಿ ಜಯ ಸಾಧಿಸಿದ್ದು, ರಿಪಬ್ಲಿಕನ್ ಪಾರ್ಟಿಯು ತನ್ನ ಕೋಟೆಗಳಲ್ಲೇ ಹೆಣಗಾಡುವಂತೆ ಮಾಡಿದೆ.