ಭಾಷೆ ನಾಶವಾದರೆ ಜನಾಂಗವೂ ನಾಶವಾಗುತ್ತದೆ: ತಮಿಳಿನ ಬಗ್ಗೆ ಎಂ.ಕೆ.ಸ್ಟಾಲಿನ್

0
361

ಸನ್ಮಾರ್ಗ ವಾರ್ತೆ

ಚೆನ್ನೈ: ಭಾಷೆ ಎಂಬುದು ಜನಾಂಗದ ರಕ್ತದಲ್ಲಿದ್ದು, ಅದು ನಾಶವಾದರೆ ಜನಾಂಗವೂ ಕಣ್ಮರೆಯಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ತಮಿಳು ಕಡೆಗಣಿಸಲ್ಪಡುತ್ತಿರುವುದನ್ನು ತೋರಿಸಿ ಅವರು ಪ್ರತಿಕ್ರಿಯಿಸಿದರು. ಚೆನ್ನೈನಲ್ಲಿ ನಡೆದ ತಮಿಳು ಇಸೈ ಸಂಘದ 80ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ತಮಿಳ್ ಭಾಷೆ ಕಡೆಗಣನೆಗೊಳಗಾಗುತ್ತಿದು ಕೆಲವರು ತಮಿಳ್ ಹಾಡನ್ನು ನಿಷೇಧಿಸುತ್ತಿದ್ದಾರೆ ಎಂದು ಸ್ಟಾಲಿನ್ ದೂರಿದರು. ಶತಮಾನಗಳಲ್ಲಿ ತಮಿಳ್ನಾಡು ಹಲವು ಸಾಂಸ್ಕೃತಿಕ ಅತಿಕ್ರಮಣಗಳಿಗೆ ತುತ್ತಾಯಿತು. ಇವುಗಳಿಂದ ರಾಜ್ಯ ಬಹಳಷ್ಟು ಕಷ್ಟ ಅನುಭವಿಸಿತು. ನಾಡಿನ ಹಕ್ಕುಗಳು ಕಳಕೊಂಡೆವು. ವಿದೇಶಿ ಭಾಷೆ ಮಾತಾಡುವವರ ಸೂಚನೆಯಂತೆ ರಾಜ್ಯ ಕಡೆಗಣನೆಗೊಳಗಾಗಿದೆ ಎಂದು ಸ್ಟಾಲಿನ್ ಹೇಳಿದರು.

ತಮಿಳ್ ಹೊರತು ಇನ್ನಾವ ಭಾಷೆಗೂ ಪ್ರಾಮುಖ್ಯ ಕೊಡೆವು ಎನ್ನುವುದು ಬೇರೆ ಭಾಷೆಗಳ ಮೇಲಿನ ದ್ವೇಷದಿಂದಲ್ಲ. ಕೇಂದ್ರದ ಬಿಜೆಪಿ ಸರಕಾರ ಹಿಂದಿ ಹೇರಿಕೆಗೆ ಯತ್ನಿಸಿದೆ. ಒಬ್ಬ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯಲಿ. ಆದರೆ ಯಾವುದಾದರೊಂದನ್ನು ಹೇರಿಕೆಗೆ ಯತ್ನಿಸುವುದಾದರೆ ಅದನ್ನು ಖಂಡಿತ ಒಪ್ಪಲಾರೆವು. ಇದು ರಾಜ್ಯ ಸರಕಾರದ ಭಾಷಾ ನೀತಿ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು.