ಅವಧಿಗಿಂತ ಹೆಚ್ಚು ಸಮಯದ ದುಡಿಮೆಗೆ ಸಂಬಳ ನೀಡಬೇಕು: ಸೌದಿ ಮಾನವ ಅಭಿವೃದ್ಧಿ ಸಚಿವಾಲಯ

0
232

ಸನ್ಮಾರ್ಗ ವಾರ್ತೆ

ಸೌದಿಯಲ್ಲಿ ಇನ್ನು ಮುಂದೆ 8 ಗಂಟೆಗಿಂತ ಹೆಚ್ಚಿನ ಅವಧಿಗೆ ಓರ್ವನನ್ನು ದುಡಿಸಿದರೆ ಆ ಹೆಚ್ಚುವರಿ ಅವಧಿಗೆ ಪ್ರತ್ಯೇಕ ವೇತನ ನೀಡಬೇಕು ಎಂದು ಸೌದಿ ಮಾನವ ಅಭಿವೃದ್ಧಿ ಸಚಿವಾಲಯ ಆದೇಶ ನೀಡಿದೆ. ವೇತನ ನೀಡದೆ ಅವಧಿಗಿಂತ ಹೆಚ್ಚುವರಿಯಾಗಿ ದುಡಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.

ಯಾರಲ್ಲಾದರೂ ದೂರುಗಳಿದ್ದರೆ ಅವರು ಸಚಿವಾಲಯವನ್ನು ಸಂಪರ್ಕಿಸಬೇಕು ಎಂದು ಕರೆ ನೀಡಲಾಗಿದೆ. ನಿಗದಿಯಾಗಿರುವ ಸಮಯಕ್ಕಿಂತ ಅಧಿಕ ದುಡಿಸಿದರೆ ಹೆಚ್ಚುವರಿ ಸಮಯದ ವೇತನವನ್ನು ಲೆಕ್ಕಹಾಕಿ ಉದ್ಯೋಗಿಗಳಿಗೆ ಕೊಡಬೇಕು. ಇದಕ್ಕೆ ತಪ್ಪಿದರೆ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.

ಪ್ರತಿದಿನ 8 ಗಂಟೆ ಮತ್ತು ವಾರದಲ್ಲಿ 48 ಗಂಟೆಗಳ ದುಡಿತ ಕಾನೂನುಬದ್ಧವಾಗಿದೆ. ಇದಕ್ಕಿಂತ ಹೆಚ್ಚುವರಿಯಾಗಿ ಕೆಲಸ ಮಾಡಿದರೆ ಅದು ಕಾನೂನಿಗೆ ವಿರುದ್ಧ ಎಂದು ಸಚಿವಾಲಯ ತಿಳಿಸಿದೆ.

ನಿಗದಿತ ಅವಧಿಗಿಂತ ಹೆಚ್ಚುವರಿಯಾಗಿ ದುಡಿಸಿದರೆ ಪ್ರತಿ ಗಂಟೆಗೆ ವೇತನದ 50 ಶೇಕಡಾ ಹಣವನ್ನು ಓವರ್ ಟೈಮ್ ವೇತನವಾಗಿ ನೀಡಬೇಕು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here