ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಬಾಬಾ ರಾಮ್ದೇವ್ ಹೇಳಿಕೆಯ ವಿರುದ್ಧ ಮಾನನಷ್ಟ ಕೇಸು ಹಾಕುತ್ತೇವೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತಿಳಿಸಿದೆ. ಆಧುನಿಕ ವೈದ್ಯಕೀಯ ವಿಜಾನ ವಿರುದ್ಧ ರಾಮದೇವ್ರ ಹೇಳಿಕೆವಿರುದ್ಧ ಉತ್ತರಾಖಂಡ ಐಎಂಎ ಕೋರ್ಟಿಗೆ ಹಗಲಿದೆ. 1000ಕೋಟಿ ರೂ. ಮಾನನಷ್ಟ ಕೇಸನ್ನು ದಾಖಲಿಸಲು ಐಎಂಎ ತೀರ್ಮಾನಿಸಿದೆ. ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉತ್ತರಾಖಂಡ್ ಸರಕಾರಕ್ಕೆ ಐಎಂಎ ಆಗ್ರಹಿಸಿದೆ. ಆಧುನಿಕ ವೈದ್ಯಕೀಯ ಶಾಸ್ತ್ರವನ್ನು ಮತ್ತು ವೈದ್ಯರನ್ನು ಅಪಮಾನಿಸುವ ರೀತಿಯಲ್ಲಿ ರಾಮ್ ದೇವ್ ಮಾತಾಡಿದ್ದನ್ನು ನೋಟಿಸಿನಲ್ಲಿ ವಿವರಿಸಲಾಗಿದೆ.
ಆಧುನಿಕ ವೈದ್ಯಕೀಯ ವಿಜ್ಞಾನದ ಕುರಿತು ತಾನು ಹೇಳಿದ ವಿಷಯಗಳು ಸರಿಯಲ್ಲ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬೇಕು. ಇಲ್ಲದಿದ್ದರೆ ಬರಹ ಮೂಲಕ ವಿಷಾದ ವ್ಯಕ್ತಪಡಿಸಬೇಕೆಂದು ನೋಟಿಸಿನಲ್ಲಿ ಐಎಂಎ ಹೇಳಿದೆ. ಇದಕ್ಕಾಗಿ ಹದಿನೈದು ದಿನದ ಸಮಯ ಕೊಡುತ್ತೇವೆ. ಅಲ್ಲದಿದ್ದರೆ 1000 ಕೋಟಿ ರೂಪಾಯಿ ಮಾನನಷ್ಟ ಕೊಡಬೇಕು. ಬಾಬಾ ರಾಮ್ ದೇವ್ರ ಸಂಸ್ಥೆಯ ಕೊರೊನಿಲ್ ಕಿಟ್ನ ಜಾಹೀರಾತು ಹಿಂಪಡೆಯಬೇಕು ಇಲ್ಲದಿದ್ದರೆ ಇದರ ವಿರುದ್ಧ ಐಎಂಎ ಕ್ರಿಮಿನಲ್ ಮೊಕದ್ದಮೆ ಹೂಡಲಿದೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.












