ಹೊಸದಿಲ್ಲಿ, ಆ. 7: ಸಂಘಪರಿವಾರದ ಅಜೆಂಡಾ ಆಗಿರುವ ಏಕರೂಪ ನೀತಿ ಸಂಹಿತೆ ಜಾರಿಯುಕೇಂದ್ರ ಸರಕಾರದ ಮುಂದಿನ ಕ್ರಮವಾಗಲಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಸಮಿತಿ ಆತಂಕ ವ್ಯಕ್ತಪಡಿಸಿದೆ. ಎಲ್ಲ ಪ್ರಜಾಪ್ರಭುತ್ವ-ಧರ್ಮನಿರಪೇಕ್ಷ ಪಕ್ಷಗಳ ಅಭಿಪ್ರಾಯವನ್ನು ತಳ್ಳಿಹಾಕಿ ಸರಕಾರ ಜನವಿರೋಧಿ- ಅಲ್ಪಸಂಖ್ಯಾತ ವಿರೋಧಿ ಕ್ರಮವನ್ನು ಕೈಗೊಂಡಿದೆ. ಈ ಕ್ರಮದ ವಿರುದ್ಧ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ಸಮಿತಿ ಅಭಿಪ್ರಾಯಿಸಿದೆ.
ಎರಡನೆ ಮೋದಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಕಾನೂನು ನಿರ್ಮಾಣಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಕೆ ಕುಂಞಲಿಕುಟ್ಟಿ ಹೇಳಿದ್ದಾರೆ.












