ಸನ್ಮಾರ್ಗ ವಾರ್ತೆ
ನವದೆಹಲಿ ಮೇ 2- ದೇಶದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿರುವ ಸೂಚನೆಯನ್ನು ನೀಡುತ್ತಿದ್ದು ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2293 ಹೊಸ ಕೊರೋನಾ ಸೋಂಕುಗಳು ದೃಢಪಟ್ಟಿವೆ ಮತ್ತು 71 ಮಂದಿ 24 ಗಂಟೆಗಳ ಅವಧಿಯ ಒಳಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು 1218 ಮಂದಿ ಕೊರೋನಾಕ್ಕೆ ಬಲಿಯಾದಂತಾಗಿದ್ದು 37,336 ಮಂದಿಗೆ ಕೊರೋನಾ ಸೋಂಕು ತಗಲಿದಂತಾಗಿದೆ. ಈ ನಡುವೆ 9951 ಮಂದಿ ಸೋಂಕಿನಿಂದ ಮುಕ್ತರಾಗಿ ಬಿಡುಗಡೆಗೊಂಡಿದ್ದಾರೆ.
ಕೇವಲ ಮಹಾರಾಷ್ಟ್ರ ಒಂದರಲ್ಲಿಯೇ 485 ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದು 11506 ಮಂದಿಗೆ ಸೋಂಕು ತಗುಲಿದೆ. 1879 ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ ಬಳಿಕ ಗುಜರಾತಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು 4721 ಮಂದಿಗೆ ಸೋಂಕು ತಗುಲಿದ್ದು 236 ಮಂದಿ ಸಾವನ್ನಪ್ಪಿದ್ದಾರೆ. 735 ಮಂದಿ ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 589 ಮಂದಿಗೆ ಸೋಂಕು ಪ್ರಕರಣ ತಗುಲಿದ್ದು, 22 ಮಂದಿ ಸಾವಿಗೀಡಾಗಿದ್ದಾರೆ. 251 ಮಂದಿ ಗುಣಮುಖರಾಗಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲಾಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












