ಮುಸ್ಲಿಂ ಸಮಾಜ ಬಂಟ್ವಾಳ ಕಚೇರಿ ಉದ್ಘಾಟನೆ

0
400

ಸನ್ಮಾರ್ಗ ವಾರ್ತೆ

ಬಿ.ಸಿ.ರೋಡ್: “ನಾವು ಕೋಮುವಾದಿಗಳ ನಡುವೆ ಬದುಕುತ್ತಿದ್ದೇವೆ. ಕೋಮುವಾದವನ್ನು ನಾವು ಶಾಂತಿಯುತ ರೀತಿಯಲ್ಲಿ ಕಾನೂನು ಬದ್ದವಾಗಿ ಎದುರಿಸಬೇಕಾಗಿದೆ. ನಮ್ಮಲ್ಲಿ ಪರಸ್ಪರ ನಂಬಿಕೆ ಬೆಳೆಸಿ ಒಗ್ಗಟ್ಟಿನಿಂದ ನಾವು ಹೋರಾಡಬೇಕಿದೆ.,” ಎಂದು ದ.ಕ.ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಎಂ.ಎಸ್ ಮುಹಮ್ಮದ್ ಹೇಳಿದರು.

ಅವರು ಇಲ್ಲಿನ ವಿಶಾಲ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆ ಗೊಂಡ ಮುಸ್ಲಿಮ್ ಸಮಾಜ ಬಂಟ್ವಾಳ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡುತ್ತಿದ್ದರು.

ಮಿತ್ತಬೈಲ್ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಫೈಝಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಂಯುಕ್ತ ಜಮಾಅತ್ ಬಂಟ್ವಾಳ ಇದರ ಅಧ್ಯಕ್ಷ ಹನೀಫ್ ಹಾಜಿ, ವಕೀಲರಾದ ಇಂತಿಯಾಝ್, ರೆಸ್ಕ್ಯೂ ಫೌಂಡೇಶನ್ ನ ಅಬ್ದುಲ್ ಜಬ್ಬಾರ್, ಪಿ.ಎ.ರಹೀಮ್ ಬಂಟ್ವಾಳ, ಅಬ್ಬಾಸ್ ಅಲಿ ಬೋಳಂತೂರು ಮುಂತಾದವರು ಮಾತನಾಡಿದರು.

ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಬ್ದುಲ್ ಕಾದರ್ ಹಾಜಿ ಕಚೇರಿಯನ್ನು ಉದ್ಘಾಟಿಸಿದರು. ಮುಸ್ಲಿಮ್‌ ಸಮಾಜ ಬಂಟ್ವಾಳ ಇದರ ಅಧ್ಯಕ್ಷ ಕೆ.ಹೆಚ್ ಅಬೂಬಕ್ಕರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಹನೀಫ್ ಖಾನ್ ಕೊಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.