ಕೇಂದ್ರ ಸರಕಾರದ ನೌಕರರ ಡಿಎ ಹೆಚ್ಚಳ

0
368

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮಾ.7: ಕೇಂರ ಸರಕಾರ ನೌಕರರ ಡಿಯರ್‍ನೆಸ್ ಅಲಯನ್ಸ್ (ತುಟ್ಟಿ ಭತ್ತೆ) 4% ಹೆಚ್ಚಳ ಮಾಡಿದ್ದು ಇದಕ್ಕೆ ಸಂಬಂಧಿಸಿದ ಘೋಷಣೆ ಇಂದೇ ಹೊರಬರಲಿದೆ ಎಂದು ವರದಿಯಾಗಿದೆ. 48.67 ಲಕ್ಷ ಕೇಂದ್ರ ಸರಕಾರದ ನೌಕರರಿಗೆ 67.95 ಲಕ್ಷ ನಿವೃತ್ತಿ ವೇತನದಾಯಕರಿಗೆ ಇದು ಸಂತಸದ ಸುದ್ದಿಯಾಗಿದ್ದು ಡಿಎ ಹೆಚ್ಚಳಕ್ಕೆ ಪ್ರಧಾನಿ ಅಧ್ಯಕ್ಷತೆಯ ಕ್ಯಾಬಿನೆಟ್ ಕಮಿಟಿ ಆನ್ ಇಕಾನಮಿ ಅಫೇರ್ಸ್(ಸಿಸಿಇಎ) ಅಂಗೀಕಾರ ನೀಡಿದೆ ಎಂದು ವರದಿಯಾಗಿದೆ.

7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಡಿಎ ಶೇಕಡಾ 50 ತಲುಪಿದ ನಂತರ, ಮನೆ ಬಾಡಿಗೆ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ, ಸಾರಿಗೆ ಭತ್ಯೆ ಇತ್ಯಾದಿಗಳಲ್ಲಿ ಪ್ರಮಾಣಾನುಗುಣವಾಗಿ ಹೆಚ್ಚಳವಾಗಲಿದೆ. ಇದರೊಂದಿಗೆ ವೇತನ ಪ್ಯಾಕೇಜ್ ಕೂಡ ಗಣನೀಯವಾಗಿ ಏರಿಕೆಯಾಗಲಿದೆ.

ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸಲಾಗುತ್ತದೆ. 2023ರ ಅಕ್ಟೋಬರ್‌ನಲ್ಲಿ ಕೊನೆಯದಾಗಿ ಡಿಎ ಹೆಚ್ಚಿಸಲಾಗಿತ್ತು. ಅದನ್ನೂ ಶೇ.4ರಷ್ಟು ಹೆಚ್ಚಿಸಲಾಗಿದೆ.