ಪ್ರಿಯಾಂಕಾ ರಾಯ್ ಬರೇಲಿಯಿಂದ, ರಾಹುಲ್ ಅಮೇಥಿ, ವಯನಾಡಿನಿಂದ ಸ್ಪರ್ಧೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

0
149

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ರಾಯ್‍ಬರೇಲಿಯಿಂದ ಮೊದಲ ಚುನಾವಣೆ ಎದುರಿಸಲಿದ್ದಾರೆ. ತಾಯಿ ಸೋನಿಯಾ ಗಾಂಧಿಯವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ಗೆದ್ದಿದ್ದ ರಾಯ್‍ಬರೇಲಿಯಿಂದ ಈ ಸಲ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ. ರಾಜಸ್ತಾನದಿಂದ ಸೋನಿಯಾಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

2019ರಲ್ಲಿ ಸೋನಿಯಾ ಗಾಂಧಿ 1.8 ಲಕ್ಷ ಬಹುಮತದಿಂದ ಬಿಜೆಪಿಯ ಪ್ರತಾಪ್ ಸಿಂಗ್‍ರನ್ನು ಸೋಲಿಸಿದ್ದರು. ಈ ಬಾರಿ ಇಲ್ಲಿನ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿಲ್ಲ.

ಪ್ರಿಯಾಂಕಾರ ಅಜ್ಜಿ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇಲ್ಲಿಂದಲೇ ಚುನಾವಣೆಗೆ ನಿಂತು ಗೆಲ್ಲುತ್ತಿದ್ದರು. ಈ ಸಲ ಸೋನಿಯಾ ಗಾಂದಿ ರಾಯ್‍ಬರೇಲಿಯಿಂದ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ಘೋಷಿಸಿದ್ದಾರೆ.

ರಾಹುಲ್ ಗಾಂಧಿ ವಯನಾಡ್ ಸಂಸದರು ಆಗಿದ್ದು ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಅಮೇಠಿ ಮತ್ತು ವಯನಾಡಿನಿಂದ ಈ ಸಲವೂ ಸ್ಪರ್ಧಿಸುವುದಾಗಿ ವರದಿಯಾಗಿದೆ.

ರಾಹುಲ್ ವಯನಾಡಿನಿಂದ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ರಾಹುಲ್ 2019ರಲ್ಲಿ ಸ್ಮೃತಿ ಇರಾನಿಯ ವಿರುದ್ಧ ಸೋಲುಂಡಿದ್ದರು. ಈ ಕ್ಷೇತ್ರವನ್ನು ಬಿಜೆಪಿಯಿಂದ ಮರು ವಶಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಮೇಠಿಯಲ್ಲಿ ಸ್ಮೃತಿ ಇರಾನಿಯವರೇ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.