ಮಸ್ಜಿದುಲ್ ಹುದಾ, ತೊಕ್ಕೊಟ್ಟುವಿನಲ್ಲಿ ಸ್ವಾತಂತ್ರೋತ್ಸವ ಸಂಭ್ರಮ

0
150

ಸನ್ಮಾರ್ಗ ವಾರ್ತೆ

ಮಸ್ಜಿದುಲ್ ಹುದಾ ಮಸೀದಿ ತೊಕ್ಕೊಟ್ಟುವಿನಲ್ಲಿ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷರಾದ ಜ| ಇಸ್ಹಾಕ್ ಪುತ್ತೂರುರವರು ಧ್ವಜಾರೋಹಣವನ್ನು ಮಾಡಿ ಸಂದೇಶವನ್ನು ನೀಡಿದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದವರ ಮತ್ತು ಬಲಿದಾನವನ್ನು ನೀಡಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿದರು.

ಯಾವ ಘನ ಉದ್ದೇಶಕ್ಕಾಗಿ ಧರ್ಮ-ಜಾತಿಗಳ ಗೋಡೆಗಳಿಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗಟ್ಟಿನಿಂದ ಹೋರಾಡಿದರೋ ಅದೇ ರೀತಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸೌಹಾರ್ಧದಿಂದ ಬಾಳಬೇಕಾದುದು, ದೇಶದ ಅಭಿವೃದ್ಧಿಗೆ ದುಡಿಯಬೇಕಾದುದು ಪ್ರಸಕ್ತ ಕಾಲದ ಬೇಡಿಕೆಯಾಗಿದೆ ಎಂದು ಕರೆ ನೀಡಿದರು.

ಬಳಿಕ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷರಾದ ಜ| ಅಬ್ದುಲ್ ಕರೀಮ್ ಮತ್ತು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಉಳ್ಳಾಲ ಅಧ್ಯಕ್ಷರಾದ ಡಾ| ಮೈನುದ್ದೀನ್ ಸಂದೇಶವನ್ನು ನೀಡಿದರು. ಮಸ್ಜಿದುಲ್ ಹುದಾ ಮಸೀದಿಯ ಅಧ್ಯಕ್ಷರಾದ ಜ| ಹಸನಬ್ಬ ಮತ್ತು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷರಾದ ಜ| ನಿಝಾಮುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಾಷ್ಟ್ರಗೀತೆಯನ್ನು ಹಾಡಲಾಯಿತು. ಕೊನೆಯಲ್ಲಿ ಗುಲ್ಶನ್‌ನ ಮಕ್ಕಳಾದ ಲುಬೈಬಾ ಮತ್ತು ತಂಡ ದೇಶಭಕ್ತಿ ಗೀತೆಯನ್ನು ಹಾಡಿದರು. ಸಿಹಿ ತಿಂಡಿ ಮತ್ತು ಚಹಾವನ್ನು ವಿತರಿಸಲಾಯಿತು. ಮಸ್ಜಿದುಲ್ ಹುದಾ ತೊಕ್ಕೊಟ್ಟು, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಉಳ್ಳಾಲ, ಎಸ್‌.ಐ.ಓ. ಉಳ್ಳಾಲ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.