ಪಿಎಂ ಕೇರ್ಸ್ ನಿಧಿಗೆ ಕೋಟ್ಯಂತರ ರೂ. ದೇಣಿಗೆ ನೀಡಿದ ಚೀನಾದ ಕಂಪೆನಿಗಳು!

0
727

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.29: ನರೇಂದ್ರ ಮೋದಿಯಯವರ ಪಿಎಂ ಕೇರ್ಸ್ ನಿಧಿಗೆ ಚೈನೀಸ್ ಕಂಪೆನಿಗಳು ಕೋಟ್ಯಂತರ ರೂಪಾಯಿ ನೀಡಿವೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಾಂಗ್ರೆಸ್ ಹೊರಬಿಟ್ಟಿದೆ. ಕಾಂಗ್ರೆಸ್ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್, ಚೀನಾದಿಂದ ದೇಣಿಗೆ ಪಡೆದಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಿಗೆ ಕಾಂಗ್ರೆಸ್ ಈ ದಾಖಲೆಗಳನ್ನು ಬಹಿರಂಗಪಡಿಸಿತು.

ಚೀನ ಬಹಿಷ್ಕಾರ ಪ್ರಚಾರ ಗಟ್ಟಿಗೊಳ್ಳುತ್ತಿರುವಾಗ ಶವೋಮಿ, ಓಪ್ಪೊ, ವಾವೆ, ಟಿಕ್‍ಟಾಕ್ ಕಂಪೆನಿಗಳು ಕೊರೋನ ಪ್ರತಿರೋಧಕ್ಕಾಗಿ ಪಿಎಂ ಕೇರ್ಸ್‍ಗೆ ಸಂಭಾವನೆ ನೀಡಿದೆ ಎಂದು ಕಾಂಗ್ರೆಸ್ ನಾಯಕ ಮನು ಅಭಿಶೇಕ್ ಸಿಂಘ್ವಿ ಆರೋಪಿಸಿದ್ದಾರೆ.

ಮೇ 20ರವರೆಗೆ 9,678 ಕೋಟಿ ರೂಪಾಯಿ ಪಿಎಂ ಕೇರ್ಸ್‌ಗೆ ಲಭಿಸಿದೆ. ವಾವೆ ಏಳು ಕೋಟಿ, ಟಿಕ್ ಟಾಕ್ 30 ಕೋಟಿ ನೀಡಿದೆ. ಶೇ.30ರಷ್ಟು ಹೂಡಿಕೆ ಇರುವ ಪೆಟಿಎಂ 100 ಕೋಟಿ ರೂಪಾಯಿ ಮತ್ತು ಶವೊಮಿ 15 ಕೋಟಿ ರೂಪಾಯಿ, ಓಪ್ಪೊ ಒಂದು ಕೋಟಿ ರೂಪಾಯಿ ನೀಡಿದೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದ್ದು, ದೇಣಿಗೆ ನೀಡಿದ್ದನ್ನು ಶವೋಮಿ ದೃಢಪಡಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.