ಭಾರತ ನಡೆಯುತ್ತಿರುವುದು ಸಂವಿಧಾನದಂತೆ, ಇಸ್ಲಾಮಿಕ್ ಷರಿಯಾದಂತಲ್ಲ: ಯೋಗಿ ಆದಿತ್ಯನಾಥ್

0
547

ಸನ್ಮಾರ್ಗ ವಾರ್ತೆ

ಲಕ್ನೋ: ನಮ್ಮ ದೇಶವು ಕಾರ್ಯನಿರ್ವಹಿಸುತ್ತಿರುವುದು ಸಂವಿಧಾನದ ಪ್ರಕಾರ. ಇಸ್ಲಾಮಿಕ್ ಷರಿಯಾದಂತಲ್ಲ ಮತ್ತು ಭಾರತವನ್ನು ಘಜ್ವಾ-ಎ-ಹಿಂದ್ ಮಾಡುವ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೊಳಗಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂದು 2 ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ಮಧ್ಯೆ ನಿನ್ನೆ ರಾಷ್ಟೀಯ ಸುದ್ದಿ ಸಂಸ್ಥೆ ಎಎನ್ಐ ನಿನ್ನೆ ನಡೆಸಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿರುವ ಅವರ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ರಾಜಕೀಯ ಮುಖಂಡರು ಆಗ್ರಹಿಸಿದ್ದಾರೆ.

ಇದು ಹೊಸ ಭಾರತ, ಇದು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಭಾರತ ಎಂದು ನಾನು ಸಂಪೂರ್ಣವಾಗಿ ಸ್ಪಷ್ಟವಾಗಿ ಹೇಳಬಲ್ಲೆ. ಈ ಹೊಸ ಭಾರತದಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಧ್ಯೇಯದೊಂದಿಗೆ ಎಲ್ಲರನ್ನೊಳಗೊಂಡ ಅಭಿವೃದ್ಧಿಯಾಗುತ್ತಿದೆ ಮತ್ತು ಯಾರನ್ನೂ ಸಮಾಧಾನಪಡಿಸುವುದಕ್ಕಲ್ಲ ಎಂದು ಯೋಗಿ ಆದಿತ್ಯನಾಥ್ ಎಎನ್ಐ ಪ್ರತಿನಿಧಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.

ಹೊಸ ಭಾರತವು ಸಂವಿಧಾನದ ಪ್ರಕಾರ ಕೆಲಸ ಮಾಡುತ್ತದೆಯೇ ಹೊರತು ಇಸ್ಲಾಮಿಕ್ ಷರಿಯಾದಂತಲ್ಲ. ಖಯಾಮತ್ (ಜಗತ್ತಿನ ಅಂತ್ಯ) ವರೆಗೂ ಘಜ್ವಾ-ಎ-ಹಿಂದ್ ಕನಸು ನನಸಾಗುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದವರು ಹೇಳಿದರು.

ತಮ್ಮ “80 ವರ್ಸಸ್ 20” ಹೇಳಿಕೆಯ ಬಗ್ಗೆ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ ಅವರು, ನನ್ನ ಹೇಳಿಕೆಯು ಹಿಂದೂ-ಮುಸ್ಲಿಂ ಮತಗಳ ವಿಭಜನೆಯನ್ನುಸೂಚಿಸುವುದಲ್ಲ. ಈ ಚುನಾವಣೆಯು ವೇಳೆ 80 ಮತ್ತು 20 ನಡುವಿನ ಹೋರಾಟವಾಗಿದೆ. ಅದು ಹೇಗೆಂದರೆ 80 ಪ್ರತಿಶತದಷ್ಟು ಜನರು ಪ್ರಗತಿಯನ್ನು ಬೆಂಬಲಿಸುವವರು. ಆದರೆ 20 ಪ್ರತಿಶತ ಜನರು ಎಲ್ಲವನ್ನೂ ವಿರೋಧಿಸುತ್ತಾರೆ ಮತ್ತು ಸರಕಾರದ ಪ್ರತಿ ವಿಷಯದಲ್ಲೂ ನಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.