ಭಾರತೀಯ ಮೂಲದ ಅಮೇರಿಕನ್ ದಂಪತಿಗಳಿಂದ ಕೋವಿಡ್-19 ರೋಗಿಗಳಿಗಾಗಿ ಕಡಿಮೆ ವೆಚ್ಚದ ವೆಂಟಿಲೇಟರ್ ಅಭಿವೃದ್ಧಿ

0
484

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಮೇ.28: ನೂರು ಡಾಲರ್‌ಗಿಂತಲೂ ಕಡಿಮೆ ವೆಚ್ಚದ ಎಮರ್ಜೆನ್ಸಿ ವೆಂಟಿಲೇಟರನ್ನು ಭಾರತೀಯ ಮೂಲದ ಅಮೆರಿಕನ್ ದಂಪತಿಗಳು ಅಭಿವೃದ್ಧಿ ಪಡಿಸಿದ್ದಾರೆ. ಜಾರ್ಜಿಯಾದ ಜಾರ್ಜ್ ಡಬ್ಲ್ಯೂ ವುಡ್ರಫ್ ಸ್ಕೂಲ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್‍ನ ಪ್ರೊ.ದೇವೇಶ್ ರಂಜನ್ ಮತ್ತು ಅವರ ಪತ್ನಿ ಡಾ.ಕುಮುದಾ ರಂಜನ್ ಹೆಮ್ಮೆಯ ಸಾಧನೆ ಮಾಡಿದ್ದು ಕೇವಲ ಮೂರು ವಾರಗಳಿಂದ ಪೋರ್ಟೆಬಲ್ ಎಮರ್ಜೆನ್ಸಿ ವೆಂಟಿಲೇಟರ್ ಮಾದರಿಯನ್ನು ಇವರು ಅಭಿವೃದ್ಧಿ ಪಡಿಸಿದ್ದಾರೆ.

ಈಗ ಇಂತಹ ವೆಂಟಿಲೇಟರ್ ನಿರ್ಮಾಣಕ್ಕೆ 10,000 ಡಾಲರ್ ವೆಚ್ಚ ತಗುಲುತ್ತದೆ. ಆದರೆ, ಇದನ್ನು ಐಸಿಯು ವೆಂಟಿಲೇಟರ್ ಆಗಿ ಉಪಯೋಗಿಸಲು ಆಗದು. ಅದಕ್ಕೆ ಹೆಚ್ಚು ವೆಚ್ಚವಾಗಬಹುದು ಎಂದು ರಂಜನ್ ಹೇಳಿದರು. ಬಿಹಾರದ ಪಟ್ನಾದವರಾದ ರಂಜನ್, ಅವರ ಪತ್ನಿ ರಾಂಚಿಯ ಕುಮುದಾ ಆರು ವರ್ಷವಾಗಿದ್ದಾಗ ತಂದೆ-ತಾಯಿ ಜೊತೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ನ್ಯೂಜರ್ಸಿಯಲ್ಲಿ ಮೆಡಿಕಲ್ ಪರಿಶೀಲನೆಯನ್ನು ಪೂರ್ತಿಗೊಳಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.