ಭಾರತೀಯ ಮೂಲದ ಅನುರಾಗ್ ಸಿಂಗಾಲ್‍ ಅಮೆರಿಕದ ಫೆಡರಲ್ ಜಡ್ಜ್

0
450

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.12: ಫ್ಲೊರಿಡಾದ ಜಡ್ಜ್ ಆಗಿ ಭಾರತೀಯ ಮೂಲದ ಅನುರಾಗ್ ಸಿಂಗಾಲ್‌ರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮಾಂಕಗೊಳಿಸಿದ್ದಾರೆ. ಇಂಡೊ-ಅಮೆರಿಕನ್ ಸಕ್ರ್ಯೂಟ್ ಜಡ್ಜ್ ಅನುರಾಗ್ ಸಿಂಗಾಲ್‍ರನ್ನು ಅಮೆರಿಕದ ಫೆಡರಲ್ ಜಡ್ಜ್ ಆಗಿ ಸೂಚಿಸಲಾಗಿದೆ.
ಸೆನೆಟ್ ಅಂಗೀಕಾರ ಸಿಕ್ಕರೆ ಅವರು ಜಡ್ಜ್ ಜೇಮ್ಸ್ ಐಕಾನ್‍ರ ಉತ್ತರಾಧಿಕಾರಿಯಾಗಿ ಹೊರ ಬರಲಿದ್ದಾರೆ. ಫ್ಲೋರಿಡಾದ ಜಡ್ಜ್ ಆಗಿ ನಾಮನಿರ್ದೇಶನಗೊಂಂಡ ಮೊದಲ ಭಾರತದ ವಂಶಸ್ಥ ಸಿಂಗಾಲ್ ಆಗಿದ್ದಾರೆ.