ದುಬೈ: ಸಂದರ್ಶನ ವೀಸಾದಲ್ಲಿ ಬಂದ ಪತ್ನಿಯನ್ನು ಕೊಲೆ ಮಾಡಿದ ಪತಿ

0
1255

ಸನ್ಮಾರ್ಗ ವಾರ್ತೆ

ದುಬೈ,ಸೆ.12: ಕೇರಳ ಮೂಲದ ಗೃಹಿಣಿಯೊಬ್ಬರು ಇರಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ತಿರುಮುಲ್ಲಕರ ಪುನ್ನತ್ತಲ ಅನುಗ್ರಹ ಭವನದ ಚಂದ್ರಶೇಖರನ್ ನಾಯರ್ ಚಂದ್ರಿಕಾರ ಪುತ್ರಿ ಸಿ. ವಿದ್ಯಾ ಚಂದ್ರನ್(39) ಮೃತಪಟ್ಟಿರುವ ಮಹಿಳೆಯಾಗಿದ್ದು. ಅಲ್‍ಸೂಕ್‍ನ ವಾಸಸ್ಥಳದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಮಾತಿನ ಚಕಮಕಿಯಲ್ಲಿ ಮಹಿಳೆಗೆ ಇರಿತವಾಗಿದೆ. ಪತಿಯೇ ಮಹಿಳೆಗೆ ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾ ದುಬೈಗೆ ಸಂದರ್ಶನ ವೀಸಾದಲ್ಲಿ ಬಂದಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.