ಸನ್ಮಾರ್ಗ ವಾರ್ತೆ
ಇಂದೋರ್,ಜೂ.12: ಇಂದೋರ್‌ನ ಶಾಲೆಯಲ್ಲಿ 12 ನೇ ತರಗತಿ ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸಲಾಯಿತು ಮತ್ತು ಕ್ಯಾಂಪಸ್‌ನ ಜಗುಲಿಯಲ್ಲಿ ಕುಳಿತು ತಮ್ಮ ಪತ್ರಿಕೆಗಳನ್ನು ಬರೆಯುವಂತೆ ಒತ್ತಡ ಹೇರಲಾಗಿದೆ ಎಂದು ಹಿಂದಿ ಭಾಷಾ ದಿನಪತ್ರಿಕೆ ದೈನಿಕ್ ದೋಪಹಾರ್ ವರದಿ ಮಾಡಿದೆ.

ಇಂದೋರ್‌ನ ನವಲಖಾ ಪ್ರದೇಶದಲ್ಲಿ ನೆಲೆಗೊಂಡಿರುವ ‘ಬಂಗಾಲಿ ಶಾಲೆ’ಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪತ್ರಿಕಾ ವರದಿ ತಿಳಿಸಿದೆ.
ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ತಲುಪಿದಾಗ ಅವರನ್ನು ಶಾಲಾ ಸಿಬ್ಬಂದಿ ತಡೆದರು. ಪೋಷಕರು ಪದೇ ಪದೇ ವಿನಂತಿಸಿದರೂ ವಿದ್ಯರ್ಥಿಗಳಿಗೆ ಅವರಿಗೆ ಅವಕಾಶವಿರಲಿಲ್ಲ. ವಿಪರೀತ ಬಿಸಿಲಿನ ವಾತಾವರಣದಲ್ಲಿ ವರಾಂಡಾದಲ್ಲಿ ಮೇಕ್-ಶಿಫ್ಟ್ ವ್ಯವಸ್ಥೆಯಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳನ್ನು ಒತ್ತಾಯಿಸಲಾಯಿತು.
“ಮುಸ್ಲಿಂ ವಿದ್ಯಾರ್ಥಿಗಳು ಕೊರೋನ ವೈರಸ್ ಹರಡಿರುವ ರೆಡ್ ಝೋನ್‌ನಿಂದ ಬಂದಿದ್ದಾರೆಂದು ಹೇಳಲಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಈ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಶಾಲೆ ಹೇಳಿಕೊಂಡಿದೆ. ಆದರೆ, ರೆಡ್ ಝೋನ್‌ನಿಂದಲೇ ಬಂದ ಅನೇಕ ಹಿಂದೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಒಳಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಪತ್ರಿಕೆಯು ವರದಿ ಮಾಡಿದೆ.
ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












