ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ ಆರು ಆಸ್ಪತ್ರೆಗಳು; ಚಿಕಿತ್ಸೆ ಲಭಿಸದೇ ದೆಹಲಿ ವಿವಿ ಪ್ರೊಫೆಸರ್ ವಾಲಿ ಅಖ್ತರ್ ನಿಧನ

0
1125

ಸನ್ಮಾರ್ಗ ವಾರ್ತೆ

ದೆಹಲಿ,ಜೂ.12: ದೆಹಲಿ ಮತ್ತು ನೋಯ್ಡಾದ ಆರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲ್ಪಟ್ಟು ದೆಹಲಿ ವಿಶ್ವವಿದ್ಯಾಲಯದ ಅರೇಬಿಕ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವಾಲಿ ಅಖ್ತರ್ ನದ್ವಿ ಜೂನ್ 9 ರಂದು ನಿಧನರಾದರು. ಅವರಲ್ಲಿ ಕೋವಿಡ್ ರೋಗಲಕ್ಷಣಗಳು ಕಂಡು ಬಂದಿದ್ದವು ಆದರೆ, ಆಸ್ಪತ್ರೆಗಳು ವಿಭಿನ್ನ ಕಾರಣಗಳನ್ನು ನೀಡಿ ಅವರಿಗೆ ಪ್ರವೇಶವನ್ನು ನಿರಾಕರಿಸಿದವು.

ಜೂನ್ 2 ರಂದು ಅಖ್ತರ್ ಅವರಿಗೆ ಜ್ವರವಿರುವುದು ತಿಳಿದು ಬಂದಿದ್ದು, ಅಂದಿನಿಂದ ಅವರ ಕುಟುಂಬ ಸದಸ್ಯರು ದೆಹಲಿಯ ಬನ್ಸಾಲ್ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಹೋಲಿ ಫ್ಯಾಮಿಲಿ ಆಸ್ಪತ್ರೆ, ಮೂಲ್‌ಚಂದ್ ಆಸ್ಪತ್ರೆ ಮತ್ತು ನೋಯ್ಡಾದ ಕೈಲಾಶ್ ಆಸ್ಪತ್ರೆ ಸೇರಿದಂತೆ ಆರು ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿದರು. ಆದರೆ ಎಲ್ಲರೂ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಅವರಲ್ಲಿ ಕೆಲವರು ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದದೇ ಮತ್ತು ಕೆಲವರು ಬೆಡ್ ಖಾಲಿ ಇಲ್ಲ ಎಂದು ಹೇಳಿದ್ದವು.

ಅನಾರೋಗ್ಯಕ್ಕೀಡಾಗಿದ್ದ ನನ್ನ ಸಹೋದರ ಭಾವನಾತ್ಮಕವಾಗಿ ದುರ್ಬಲ ವ್ಯಕ್ತಿಯಾಗಿದ್ದರಿಂದ ಅವರು ಕಾಯಿಲೆಗಿಂತ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದಲೇ ಆಘಾತಕ್ಕೊಳಗಾದರು ಮತ್ತು ನಿರಾಶೆಗೊಂಡರು. ಕೋವಿಡ್-19 ಪರೀಕ್ಷಾ ಪ್ರಕ್ರಿಯೆಯ ಪ್ರಾರಂಭಕ್ಕೂ ಮುಂಚೆಯೇ ಅವರು ಭರವಸೆ ಕಳೆದುಕೊಂಡರು. ಎಂದು ದಿವಂಗತ ಪ್ರೊಫೆಸರ್ ವಾಲಿ ಅಖ್ತರ್ ಅವರ ಕಿರಿಯ ಸಹೋದರ ಜಮಿಲ್ ಅಖ್ತರ್ ಮುಸ್ಲಿಂ ಮಿರರ್‌ಗೆ ತಿಳಿಸಿದರು.

ಇವುಗಳು ನಮ್ಮ ಮನೆಯ ಸುತ್ತಮುತ್ತಲಿನ ಆಸ್ಪತ್ರೆಗಳು ಮತ್ತು ದೆಹಲಿ ವಿಶ್ವವಿದ್ಯಾನಿಲಯದೊಂದಿಗೆ ನೇರ ಪಾವತಿ ಸೌಲಭ್ಯದಡಿಯಲ್ಲಿದ್ದವುಗಳಾಗಿವೆ. ಆದ್ದರಿಂದ ನನ್ನ ಸಹೋದರನನ್ನು ಇವುಗಳಲ್ಲಿ ಚಿಕಿತ್ಸೆ ನೀಡಲು ನಾವು ಪ್ರಯತ್ನಿಸಿದೆವು. ಫೋರ್ಟಿಸ್ ಎಸ್ಕೋರ್ಟ್‌ನ ಕಾವಲುಗಾರರು ನಮ್ಮನ್ನು ನೋಡಿದ ನಂತರ ಆಸ್ಪತ್ರೆಯೊಳಗೆ ನಮ್ಮನ್ನು ಪ್ರವೇಶವನ್ನು ಅನುಮತಿಸಲಿಲ್ಲ, ಮತ್ತು ಇದು ನನ್ನ ಸಹೋದರನಿಗೆ ಹೆಚ್ಚು ದುಃಖಕ್ಕೀಡು ಮಾಡಿತು.

ಫೋರ್ಟಿಸ್ ಎಸ್ಕಾರ್ಟ್‌ನ ಸಿಬ್ಬಂದಿ ಆಸ್ಪತ್ರೆಯೊಳಗೆ ನಮ್ಮ ಪ್ರವೇಶವನ್ನು ಅನುಮತಿಸದಿದ್ದಾಗ ನಾವು ತುಂಬಾ ಆಘಾತಕ್ಕೊಳಗಾಗಿದ್ದೇವು ಮತ್ತು ಇದು ನನ್ನ ದಿವಂಗತ ಸಹೋದರನಿಗೆ ಹೆಚ್ಚು ದುಃಖ ತಂದಿದೆ ಎಂದು ಜಮಿಲ್ ಹೇಳಿದರು.

“ಈ ಆಸ್ಪತ್ರೆಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಯಾವುದೇ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟವಾಗಿದೆ ಆದ್ದರಿಂದಲೇ ತಮಗೆ ಬೇಕಾದುದನ್ನು ಈ ಆಸ್ಪತ್ರೆಗಳು ಮಾಡುತ್ತಿವೆ. ಇದಲ್ಲದೆ, ಸರ್ಕಾರದ ಸವಲತ್ತುಗಳು ಟೊಳ್ಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ವ್ಯಕ್ತಿಗೆ ಘನತೆ ಇಲ್ಲ” ಎಂದು ಪ್ರಾಧ್ಯಾಪಕ ಮುಜೀಬ್ ಹೇಳಿದರು.

ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಡಾ. ಆದಿತ್ಯ ನಾರಾಯಣ್ ಮಿಶ್ರಾ ಅವರು ಅಖ್ತರ್ ಸಾವಿನ ಬಗ್ಗೆ ಆರೋಗ್ಯ ಅಧಿಕಾರಿಗಳನ್ನು ಟೀಕಿಸಿದರು. ನ್ಯೂಸ್ 18 ಉರ್ದುಗೆ ನೀಡಿದ ಸಂದರ್ಶನದಲ್ಲಿ ಮಿಶ್ರಾ, ಅವರ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನದಲ್ಲಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಓಡುತ್ತಿದ್ದರು ಆದರೆ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸದ ಕಾರಣ ಅವರ ಜೀವನ ಕಳೆದುಹೋಗಿದೆ ಎಂದು ಹೇಳಿದರು.

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.