ಅಂತಾರಾಷ್ಟ್ರೀಯ ಕಿರಾಅತ್ ಸ್ಪರ್ಧೆ; ಅತೀಯಾ ವಿಜ್ದನ್ ಗೆ ಪ್ರಥಮ ಸ್ಥಾನ

0
353

ಸನ್ಮಾರ್ಗ ವಾರ್ತೆ

ಕಾಸರಗೋಡು ನಿವಾಸಿಯಾದ ಅತಿಯಾ ವಿಜ್ದನ್ ಅವರು ಯುಎಇ ಜನರಲ್ ಅಥಾರಿಟಿ ಆಫ್ ಇಸ್ಲಾಮಿಕ್ ಅಫೇರ್ಸ್ ಅಂಡ್ ಎಂಡೋಮೆಂಟ್ ಪ್ರಾಯೋಜಿಸಿದ ಅಂತಾರಾಷ್ಟ್ರೀಯ ಕಿರಾಅತ್ ಸ್ಪರ್ಧೆಯಲ್ಲಿ ಒಂದೂ ಕಾಲು ಲಕ್ಷ ಭಾರತೀಯ ರೂಪಾಯಿ (5000 Dirhams) ಬಹುಮಾನದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕಳೆದ ವರ್ಷ ನಡೆದ ಕಶಾರಾ ಆನ್‌ಲೈನ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲೂ ಅಥಿಯಾ ಪ್ರಥಮ ಸ್ಥಾನ ಪಡೆದಿದ್ದರು.

ಪ್ಲಸ್ ಟು ವಿದ್ಯಾರ್ಥಿನಿಯಾಗಿರುವ ಅತೀಯಾ, ಮರ್ಹೂಮ್ ಎಂ.ಇ.ಅಬ್ದುಲ್ ಹಕೀಂ ಮೌಲವಿ ಹಾಗೂ ಯಾಕೂಬ್ ಕಲ್ಲಂಗಲ ವಿಟ್ಲ ಅವರ ಮೊಮ್ಮಗಳು ಮತ್ತು ಅತೀಕ್ ರೆಹಮಾನ್ ಅಲ್ ಫೈದಿ ಮತ್ತು ಜಹ್ರಾ ಬಾನು ದಂಪತಿಯ ಪುತ್ರಿಯಾಗಿದ್ದಾರೆ.