ರಾಜೀವ್ ಗಾಂಧಿ ಹತ್ಯೆ ಪ್ರಕರಣ; ಶ್ರೀಲಂಕದ ಮೂವರು ಆರೋಪಿಗಳು ತಾಯ್ನಾಡಿಗೆ…

0
267

ಸನ್ಮಾರ್ಗ ವಾರ್ತೆ

ಚೆನ್ನೈ, ಎ.3: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಗುರಿಯಾದ ಮೂವರು ಶ್ರೀಲಂಕದ ಪ್ರಜೆಗಳಾದ ಮುರುಗನ್, ರಾಬರ್ಟ್ ಪಾಯಸ್, ಜಯಕುಮಾರ್ ಸ್ವಂತ ದೇಶಕ್ಕೆ ಮರಳಿದ್ದಾರೆ.

ಜೈಲಿನ ಉತ್ತಮ ನಡೆತೆ ಕಾರಣದಿಂದ 2022ರಲ್ಲಿ ನವೆಂಬರಿನಲ್ಲಿ ಸುಪ್ರೀಂ ಕೋರ್ಟು ಇವರನ್ನು ಬಿಡುಗಡೆಗೊಳಿಸಿತ್ತು.

ಶ್ರೀಲಂಕದ ಪಾಸ್‍ಪೋರ್ಟ್ ಒದಗಿಸಲಾದ ಮೇಲೆ ಮಂಗಳವಾರ ಅವರು ಊರಿಗೆ ಮರಳಿದ್ದಾರೆ. ಫಾರಿನ್ ರಿಜಿಯನಲ್ ರಿಸ್ಟ್ರೇಶನ್ ಆಫಿಸ್ ಗಡೀಪಾರು ಆದೇಶ ಹೊರಡಿಸಿದರೆ, ಊರಿಗೆ ಹೋಗಬಹುದಾಗಿದೆ ಎಂದು ತಮಿಳ್ನಾಡು ಸರಕಾರ ಈ ಹಿಂದೆ ಮದ್ರಾಸ್ ಹೈಕೋರ್ಟಿಗೆ ತಿಳಿಸಿತ್ತು.

ಎರಡು ವರ್ಷಗಳ ಹಿಂದೆ ಬಿಡುಗಡೆಗೊಂಡ ಆರು ಮಂದಿಯಲ್ಲಿ ಒಬ್ಬರಾದ ಶ್ರೀಲಂಕದ ಪ್ರಜೆ ಶಾಂತನು ಕರುಳು ನೋಯುತ್ತಿದ್ದ ಕಾರಣ ಚೆನ್ನೈಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೇರರಿವಾಳನ್, ರವಿಚಂದ್ರನ್, ನಳಿನಿ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬಿಡುಗಡೆಗೊಂಡ ಇತರರು.