ಸಂಘ ಪರಿವಾರದ ತೆಕ್ಕೆಗೆ ಸೈನಿಕ ಶಾಲೆಗಳನ್ನು ನೀಡಿದ ಕೇಂದ್ರ ಸರಕಾರ: ಬೆಚ್ಚಿ ಬೀಳಿಸಿದ ವರದಿ

0
232

ಸನ್ಮಾರ್ಗ ವಾರ್ತೆ

ದೇಶದಲ್ಲಿ ಹೊಸದಾಗಿ ಆರಂಭಿಸಲಾದ ಸೈನಿಕ ಶಾಲೆಗಳ ಪೈಕಿ 65% ಶಾಲೆಗಳು ಸಂಘ ಪರಿವಾರ ಮತ್ತು ಬಿಜೆಪಿಯ ಸಂಬಂಧ ಉಳ್ಳವರಿಗೆ ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಸ್ವತಂತ್ರ ಪತ್ರಕರ್ತರ ಗುಂಪಾದ ದಿ ರಿಪೋರ್ಟರ್ಸ್ ಕಲೆಕ್ಟಿವ್ ಈ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸಿದೆ.

ಖಾಸಗಿಯಾಗಿ ಸೈನಿಕ ಶಾಲೆಗಳನ್ನು ತೆರೆಯಲು 2021ರಲ್ಲಿ ಕೇಂದ್ರ ಸರಕಾರ ಅನುಮತಿ ನೀಡಿತ್ತು. ಸರ್ಕಾರಿ ಮತ್ತು ಖಾಸಗಿ ಜಂಟಿ ಸಹಭಾಗಿತ್ವದಲ್ಲಿ ಈ ಸೈನಿಕ ಶಾಲೆಗಳನ್ನು ತೆರೆಯಬಹುದು ಎಂದು ಹೇಳಲಾಗಿತ್ತು. ದೇಶಾದ್ಯಂತ ನೂರು ಹೊಸ ಸೈನಿಕ ಶಾಲೆಗಳನ್ನು ತೆರೆಯಲಾಗುವುದು ಎಂದು ಆ ವರ್ಷದ ಬಜೆಟ್ ನಲ್ಲಿ ವಾಗ್ದಾನ ಮಾಡಲಾಗಿತ್ತು.

ಆದರೆ ಇದೀಗ ಕೇಂದ್ರ ಸರಕಾರ ಈ ಶಾಲೆಗಳನ್ನು ತೆರೆಯಲು ಹೊರಟಿರುವ ರೀತಿ ಅತ್ಯಂತ ಆಘಾತಕಾರಿಯಾಗಿದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ಸ್ ವರದಿಯಲ್ಲಿ ಹೇಳಲಾಗಿದೆ.