ಅಮಿತ್ ಶಾರನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಕಂದಸ್ವಾಮಿ ಈಗ ತಮಿಳುನಾಡು ಡಿಜಿಪಿ

0
3026

ಸನ್ಮಾರ್ಗ ವಾರ್ತೆ

ಚೆನ್ನೈ: ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಬಿಜೆಪಿ ನಾಯಕ ಅಮಿತ್ ಶಾರನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿ ಪಿ. ಕಂದಸ್ವಾಮಿಯವರನ್ನ ತಮಿಳ್ನಾಡಿನ ಡಿಜಿಪಿಯಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನೇಮಕಗೊಳಿಸಿದ್ದಾರೆ. ವಿಜಿಲೆನ್ಸ್ ಮತ್ತು ಆಂಟಿ ಕರೆಪ್ಶನ್ ಇಲಾಖೆ ಮುಖ್ಯಸ್ಥ ಸ್ಥಾನ ಅವರಿಗೆ ನೀಡಲಾಗಿದೆ. ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ಸರಕಾರ ಕಾಲದ ಭ್ರಷ್ಟಾಚಾರ ತನಿಖೆಗೆ ಕ್ರಮ ಜರಗಿಸುವೆ ಎಂದು ಸ್ಟಾಲಿನ್ ಚುನಾವಣಾ ಭರವಸೆ ನೀಡಿದ್ದರು.

2010ರಲ್ಲಿ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‍ಕೌಂಟರ್ ಕೇಸಿಗೆ ಸಂಬಂಧಿಸಿ ಅಮಿತ್ ಶಾರನ್ನು ಬಂಧಿಸಲಾಗಿತ್ತು. ಅಂದು ಸಿಬಿಐ ಇನ್ಸ್‍ಪೆಕ್ಟರ್ ಜನರಲ್ ಪಿ. ಕಂದಸ್ವಾಮಿ. ಅಮಿತಾಬ್ ಠಾಕೂರ್ ಡಿಐಜಿ ಆಗಿದ್ದರು. ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಅಮಿತ್ ಷಾ ರವರನ್ನು ಬಂಧಿಸಿದ್ದರು. ಪಿಣರಾಯಿ ವಿಜಯನ್ ಆರೋಪಿಯಾಗಿರುವ ಎಸ್‍ಎನ್‍ಸಿ ಲಾವ್ಲಿನ್ ಪ್ರಕರಣವನ್ನು ಕಂದಸ್ವಾಮಿ ತನಿಖೆ ಮಾಡಿದ್ದಾರೆ.