ತಜ್ಞರ ಅವೈಜ್ಞಾನಿಕ ತೀರ್ಮಾನ, ಜಿಲ್ಲಾಡಳಿತದ‌ ನೀತಿಗಳು ಜನರನ್ನು ದಂಗೆ ಏಳಿಸಬಹುದು

0
578

ಲೇಖನ: ಮುಸ್ತಫಾ ಇರುವೈಲ್

ಬೆಳಗ್ಗೆ 6 ಆಗುತ್ತಿದ್ದಂತೆ ದಿನಸಿ ಅಂಗಡಿಗಳ ಎದುರು ಸಾಲುದ್ದ ಜನರು ನಿಂತಿದ್ದರು. ಅಲ್ಲಿ 9 ಘಂಟೆಗೆ ಮನೆ ಸೇರಬೇಕು ಎಂಬ ಬಗ್ಗೆ ಜನರ ಕಾಳಜಿ ಎದ್ದು ಕಾಣುತ್ತಿತ್ತು, ಆದರೆ ಅಲ್ಲಿದ್ದ ಎಲ್ಲರಿಗೆ ಅದು ಅಸಾಧ್ಯವೂ ಹೌದು ಮತ್ತು ಕಣ್ಣೆದುರಿಗೆ 7 ಗಂಟೆಗೆ ಕ್ಯೂ ನಿಂತವರಿಗೆ ದಿನಸಿ ಸಿಗದಂತೆ ಆಯಿತು. ದಿನಸಿ ಅಂಗಡಿಯ ಬಾಗಿಲು ಮುಚ್ಚಿತು. ಅರ್ಧದಷ್ಟು ಜನರಿಗೆ ದಿನಸಿ ಸಿಗದೆ ಅಂಗಡಿಯವರ ಜೊತೆಗೆ ವಾಗ್ವಾದಕ್ಕೆ ಇಳಿದರು. ಅವರಾದರೋ ಪೋಲಿಸರು ಗಾಡಿ ಸೀಝ್ ಮಾಡುವ, ಹಿಡಿಯುವ ರಗಳೆ ಬೇಡ ಎಂದೇ ಮುಂಜಾಗ್ರತೆ ವಹಿಸಿದಂತಿತ್ತು, ಇಂತಹ ಘಟನೆ ಜಿಲ್ಲೆಯ ಹಲವೆಡೆ ವರದಿಯಾಗಿದೆ, ತಜ್ಞರು ಎಂದು ಸರಕಾರಕ್ಕೆ ವರದಿ ಕೊಟ್ಟವರು ಎಲ್ಲಿದ್ದಾರೆ ಎಂದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ.

 

ದ‌.ಕ. ಜಿಲ್ಲಾಡಳಿತ ಬಹಳ ವ್ಯವಸ್ಥಿತವಾಗಿ ಕೋರೊನ ನಿಯಂತ್ರಣ ಮಾಡುವುದಕ್ಕಿಂತ ಕೋರೊನವನ್ನು ಅವೈಜ್ಞಾನಿಕ ತೀರ್ಮಾನಗಳ ಕಾರಣ ಹರಡುತ್ತಿದೆ ಎಂದೇ ಹೇಳಬಹುದು, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವ ವಿಷಯ ಅರ್ಥ ಮಾಡಿಕೊಳ್ಳಲು ವಿಫಲರಾದುದೇಕೆ ಎನ್ನುವುದು ದಿಗಿಲು ಹುಟ್ಟಿಸುವ ವಿಚಾರ ಎಂದರೆ ತಪ್ಪಾಗಲಾರದು.

 

ಜನನಿಭಿಡವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಕರ್ಪ್ಯೂ ಹೇರಿ ಸೋಮವಾರವಾಗುವಾಗ ದಿನಸಿ ವಸ್ತುಗಳನ್ನು, ತರಕಾರಿ ಹಣ್ಣುಗಳನ್ನು ಖರೀದಿಸುವವರು ಸಹಜವಾಗಿಯೇ ಹೆಚ್ಚಾಗುತ್ತಾರೆ. ಈ ಹೆಚ್ಚು ಹೇಗೆ ಎಂದರೆ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗದಷ್ಟು ಹೆಚ್ಚೇ ಆಗಿರುತ್ತದೆ ಎನ್ನುವುದನ್ನು ಊಹಿಸಬಹುದು, ಅಷ್ಟಕ್ಕೂ ಜನರ ಮನಸ್ಸುಗಳನ್ನು ಅರ್ಥ ಮಾಡದ ಮೂರ್ಖ ತಜ್ಞರು ಯಾರು ಅನ್ನುವುದೇಜಿಜ್ಞಾಸೆಯ ವಿಚಾರ.

ಜನರು ಕೋರೊನ ನಿಯಂತ್ರಣಕ್ಕೆ ಸಹಕರಿಸುವುದಿಲ್ಲ ಎನ್ನುವ ವಿಚಾರ ಇಲ್ಲಿಯವರೆಗೆ ಇಲ್ಲ. ಸಾರ್ವಜನಿಕರೆಲ್ಲರೂ ಸಹಕರಿಸುತ್ತಾರೆ. ಜಿಲ್ಲಾಧಿಕಾರಿಗಳು, ಪೋಲೀಸರು ಜನರನ್ನು ಗೊಂದಲಕ್ಕೆ ಈಡು ಮಾಡಬಾರದು. 6 ರಿಂದ 9 ರ ಸಮಯ ಖಂಡಿತವಾಗಿ ಕೋರೋನವನ್ನು ವ್ಯಾಪಕವಾಗಿ ಹರಡುತ್ತದೆ ಎನ್ನುವುದು ಸತ್ಯ. ಈ ಸಮಯವನ್ನು ವಾರದಲ್ಲಿ ಎಲ್ಲಾ ದಿನ 6 ರಿಂದ 10 ಅಥವಾ ಎಂದು ನಿಗದಿಪಡಿಸಬೇಕು. ನಿಭಿಡತೆ ಕಡಿಮೆಯಾದಾಗ ಜನರು‌ ಕೂಡಾ ಹೆಚ್ಚಾಗಿ ಸೇರುವುದಿಲ್ಲ.

ನಡೆದುಕೊಂಡು ದಿನಸಿ ಖರೀದಿಸುವ ವಿಚಾರ :

ಇದೊಂದು ಅಪ್ಪಟ ಮೂರ್ಖತನ, ಇಂತಹ ಸಲಹೆ ನೀಡಿದ ತಜ್ಞ, ಜನರ‌ ಮನಸ್ಸುಗಳನ್ನು ಅರ್ಥ ಮಾಡದ ಮೂರ್ಖ‌ ಮತ್ತು ಅವಿವೇಕಿ ಎಂದರೆ ತಪ್ಪಲ್ಲ. ದಿನಸಿ ಖರೀದಿಗೆ ಬರುವವ ನಡೆದುಕೊಂಡು ಹಿಡಿದು ಸಾಗುವ ಚೀಲಕ್ಕಿಂತ ಹೆಚ್ಚೆ ಖರೀದಿಸುತ್ತಾರೆ. ಏಕೆಂದರೆ ನಾಳೆ ಮತ್ತೆ ಬರಬೇಕು‌ ಎನ್ನುವ ‌ಉದ್ದೇಶ ಅವನ‌ ಬಳಿ‌ ಇರುವುದಿಲ್ಲ. ತಜ್ಞ ಜನರನ್ನು ಅರಿತರೆ ತಜ್ಞ. ಇಲ್ಲವಾದರೆ ಅವನೊಬ್ಬ ಮೂರ್ಖನೆ ಹೌದು. ಜನರನ್ನು ಗದರಿಸಿದರೆ ನೂರಾರು ವಾಹನ ಸೀಝ್ ಮಾಡಿದರೆ ಕೋರೋಣ ನಿಯಂತ್ರಣಕ್ಕೆ ಬರುವುದಿಲ್ಲ, ಜನರ‌ ಮನಸ್ಸುಗಳನ್ನು ಗೆದ್ದಾಗ ಮಾತ್ರ ಇದು‌ ಸಾಧ್ಯ. ಜನರ ಮನಸ್ಸನ್ನು ಹೇಗೆ ಗೆಲ್ಲಬೇಕೆಂಬ ಪಾಠವನ್ನು ಕೇರಳ ರಾಜ್ಯದ ಅಧಿಕಾರಿಗಳನ್ನು ನೋಡಿ ಕಲಿಯಬೇಕಿದೆ.

ಜಿಲ್ಲಾಡಳಿತ, ಪೋಲಿಸ್ ವ್ಯವಸ್ಥೆ ಸರಕಾರದ ಮಾರ್ಗಸೂಚಿಗಳನ್ನು‌ ಪಾಲಿಸುವುದರೊಂದಿಗೆ ತಮ್ಮ ಕರ್ತವ್ಯ ‌ನಿರ್ವಹಿಸುವುದರೊಂದಿಗೆ ಕೆಲಸ ಮಾಡುತ್ತಿಲ್ಲ ‌ಎಂಬುದು‌‌ ಸಾರ್ವಜನಿಕರ ನಂಬಿಕೆಯಲ್ಲ. ಪೊಲೀಸರ ಕೆಲಸದ‌ ಬಗ್ಗೆ ಸಾರ್ವಜನಿಕರಿಗೆ ಹೆಮ್ಮೆ ಇದೆ, ಸಹಕಾರವು ಇದೆ. ಅದರೆ ಮಾಡಿರುವ ವ್ಯವಸ್ಥೆಗಳು ಜನರ ಪರವಾಗಿ ಇಲ್ಲ. ಸರಕಾರ ಪ್ರಜೆಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಮಾಡದೆ ಇರುವ ಕಾರಣ ಜನರು ಬೀದಿಯಲ್ಲಿ ಹೆಚ್ಚಾಗಿ ಓಡಾಟ ನಡೆಸುವಂತೆ ಮಾಡಿದೆ.

ಸರಕಾರ ‌ಮನೆ ಮನೆಗೆ ದಿನಸಿ ವಸ್ತುಗಳನ್ನು ‌ನೀಡಿ‌ ಜನರು ದಿನಸಿ‌ ಸಾಮಗ್ರಿ ಹೆಸರಲ್ಲಿ‌‌ ಮನೆ ಮನೆಗೆ ಕೋರೋಣ ಹಂಚುವುದನ್ನು ನ್ಯಾಯವಾಗಿ ‌ತಡೆಯಲ. ಆ‌ ಮೂಲಕ ‌ಜನರು ದಂಗೆ ಏಳುವುದನ್ನು‌ ತಡೆಯಲಿ.

 

ಮುಸ್ತಫಾ ಇರುವೈಲ್