ಉಪಗ್ರಹ ಕಳುಹಿಸಲು ಸಿದ್ಧವಾದ ಇರಾನ್

0
459

ಸನ್ಮಾರ್ಗ ವಾರ್ತೆ

ಟೆಹ್ರಾನ್, ಜ. 20: ಹೊಸದಾಗಿ ನಿರ್ಮಿಸಲಾದ ಎರಡು ಉಪಗ್ರಹಗಳ ಉಡಾವಣೆಗೆ ಇರಾನ್ ಸಿದ್ಧತೆ ನಡೆಸುತ್ತಿದೆ. ಹಾರಾಟಕ್ಕೆ ಮೊದಲು ಪ್ರಯೋಗ ಯಶಸ್ವಿಯಾಗಿದ್ದು ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಪಗ್ರಹವನ್ನು ಕೊಂಡೊಯ್ಯಲಾಗುವುದು ಎಂದು ಸುದ್ದಿ ವಿನಿಮಯ ಸಚಿವ ಮುಹಮ್ಮದ್ ಜವಾದ್‍ ಅಝಾರಿ ಹರುಮಿ ಹೇಳಿದರು. ಸಂಶೋಧನ ರಂಗದಲ್ಲಿ ದೇಶದ ಪ್ರಧಾನ ಇಜ್ಜೆ ಇದು ಎಂದು ಅವರು ವಿಶ್ಲೇಷಿಸಿದರು.

ಆದರೆ , ಉಪಗ್ರಹ ಹಾರಿಸುವ ಸಮಯದ ಕುರಿತು ಅವರು ವಿವರ ನೀಡಲಿಲ್ಲ. ರಾಷ್ಟ್ರೀಯ ಉತ್ಸವದ ಸಮಯದಲ್ಲಿ ಸಾಧಾರಣವಾಗಿ ಇರಾನ್ ಉಪಗ್ರಹ ಹಾರಿಸುತ್ತದೆ. ಇಸ್ಲಾಮಿಕ್ ಕ್ರಾಂತಿಯ 41ನೇ ವರ್ಷ ನಿಕಟವಾಗಿದೆ. 90 ಕಿಲೊ ಭಾರ, ಹೈರೆಸುಲೇಶನ್ ಕ್ಯಾಮರಾ ಇರುವ ಸಫರ್ ಉಪಗ್ರಹವನ್ನು ಇರಾನ್ ಉಡಾವಣೆ ನಡೆಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಕೃತಿ ಸಂಪನ್ಮೂಲಗಳು, ಕೃಷಿ, ಪರಿಸರ ವಿಕಾಸ ನಿರೀಕ್ಷಣೆಯನ್ನು ಉಪಗ್ರಹದ ಮೂಲಕ ನಡೆಸಲಾಗುವುದು ಎಂದು ವರದಿ ತಿಳಿಸಿದೆ.