ವಂದೇ ಮಾತರಂ ಹಾಡದವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ- ಕೇಂದ್ರ ಮಂತ್ರಿ

0
472

ಸನ್ಮಾರ್ಗ ವಾರ್ತೆ

ಸೂರತ್, ಜ. 20: ವಂದೇಮಾತರಂ ಹಾಡದವರಿಗೆ ಭಾರತದಲ್ಲಿ ಬದುಕು ಹಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ. ಅವರು ಗುಜರಾತಿನ ಸೂರತ್‍ನಲ್ಲಿ ಮಾತಾಡುತ್ತಿದ್ದರು. ವಿಭಜನೆಯ ಪಾಪಕ್ಕೆ ಪ್ರಾಯಶ್ಚಿತ್ತದ ದಾರಿ ಪೌರತ್ವ ತಿದ್ದುಪಡಿ ಕಾನೂನು ಎಂದು ಅವರು ಹೇಳಿದರು. ಪೌರತ್ವ ಕಾನೂನು ಎಪ್ಪತ್ತು ವರ್ಷದ ಮೊದಲು ಜಾರಿಯಾಗಬೇಕಿತ್ತು. ರಾಜಕೀಯ ನಾಯಕರು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು. ಸಿಎಎ ಎಪ್ಪತು ವರ್ಷ ಹಿಂದೆಯೇ ಜಾರಿಯಾಗಬೇಕಿತ್ತು. ನಮ್ಮ ಪೂರ್ವಜರು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡುವ ದಾರಿ ಕೂಡ ಸಿಎಎ ಆಗಿದೆ ಎಂದರು.