ಯುದ್ಧ ಭೀತಿಯಲ್ಲಿ ಮಧ್ಯಪ್ರಾಚ್ಯ: ಪ್ರತೀಕಾರಕ್ಕಾಗಿ ತಹತಹ

0
1207

ಸನ್ಮಾರ್ಗ ವಾರ್ತೆ-
ಬಾಗ್ದಾದ್, ಜ. 6: ಇರಾನ್ ನ ಸೇನಾ ಜನರಲ್ ಖಾಸಿಂ ಸುಲೈಮಾನಿಯ ಹತ್ಯೆಯ ಬೆನ್ನಿಗೆ ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಕವಿದಿದೆ. ಇರಾನ್ ನ ಐತಿಹಾಸಿಕ ನಗರ ಕುಮ್ಮ್‍ನ ಝಂಕರಾನ್ ಮಸೀದಿಯಲ್ಲಿ ಕೆಂಪು ಪತಾಕೆ ಹಾರಿದ್ದು ಪ್ರತೀಕಾರದ ಪ್ರತಿಜ್ಞೆ ತೆಗೆದುಕೊಳ್ಳಲಾಗಿದೆ. ಅಮೆರಿಕದ ಸೈನಿಕರ ಮೇಲೆ ದಾಳಿ ಆದರೆ ಇರಾನಿನ ಐವತ್ತೆರಡು ಕೇಂದ್ರದ ಮೇಲೆ ಭಾರೀ ದಾಳಿ ಮಾಡುವುದಾಗಿ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಜಾಗತಿಕ ದೇಶಗಳು ರಾಜಿಗಾಗಿ ಸಕ್ರಿಯವಾಗಿವೆ. ಆದರೆ ಯುದ್ಧ ತಪ್ಪಿಸಲು ಸಾಧ್ಯವೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕದ ಬಾಂಬುಗಳು ಜೀವ ತೆಗೆದ ಉನ್ನತ ಜನರಲ್ ಖಾಸಿಂ ಸುಲೈಮಾನ್‍ರ ಜನಾಝ ಯಾತ್ರೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದು ಟ್ರಂಪ್ ವಿರುದ್ಧ ಯುದ್ಧ ಘೋಷಣೆಯಾಗಿ ಬದಲಾಯಿತು. ಬಗ್ದಾದಿನಿಂದ ರವಿವಾರ ಇರಾನ್‍ಗೆ ಮೃತದೇಹವನ್ನು ತರಲಾಗಿದ್ದು ಮೃತದೇಹ ನೋಡಲು ಲಕ್ಷಾಂತರ ಮಂದಿ ಆಗಮಿಸಿದ್ದರು.

ತಿರುಗೇಟಿನ ಸೂಚನೆಯಾಗಿ ಕಳೆದ ದಿವಸ ಬಗ್ದಾದಿನಲ್ಲಿ ಅಮೆರಿಕ ಧೂತವಾಸದ ಸಮೀಪ ಮೋರ್ಟರ್ ದಾಳಿ ನಡೆದಿದೆ. ಸೇನೆಯ ನೆಲೆಗೂ ರಾಕೆಟ್ ದಾಳಿ ನಡೆದಿದೆ. ಘಟನೆಯಲ್ಲಿ ಜನರಿಗೆ ಅಪಾಯವಾಗಿಲ್ಲ. ಇರಾನ್ ನಿಲುವು ಸ್ಪಷ್ಟಪಡಿಸಿದ್ದು ಅದೇ ರೀತಿ ಉತ್ತರ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ. ಇದು ಯುದ್ಧ ಆತಂಕ ಸೃಷ್ಟಿಸಿದೆ.
ಖಾಸಿಂ ಸುಲೈಮಾನಿಯ ಮೃತದೇಹ ಇರಾನ್‍ಗೆ ತಲುಪಿದ ಕೂಡಲೇ 52 ಇರಾನ್ ಕೇಂದ್ರಗಳಿಗೆ ದಾಳಿ ನಡೆಸುವ ಮುನ್ನೆಚ್ಚರಿಕೆಯೊಂದಿಗೆ ಟ್ರಂಪ್ ಟ್ವೀಟ್ ಮಾಡಿದರು. 1979ರಲ್ಲಿ ಇರಾನ್ ಬಂದಿಯಾಗಿಸಿದ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆ 52 ಆಗಿದೆ. ಎರಡು ಲಕ್ಷ ಕೋಟಿ ಡಾಲರ ವೆಚ್ಚದಲ್ಲಿ ರಚಿಸಲಾದ ಸೈನಿಕ ಶಕ್ತಿ ಅಮೆರಿಕದಲ್ಲಿದೆ ಎಂದು ಸುಂದರವಾದ ಒಂದು ಆಯುಧ ಇರಾನ್‍ಗೆ ಕಾದಿದೆ ಎಂದು ಟ್ರಂಪ್ ನಂತರ ಟ್ವೀಟ್ ಮಾಡಿದರು.

ವಿವಾದಿತ ಹೇಳಿಕೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಅಮೆರಿಕ ಪ್ರತಿನಿಧಿ ಆಗಿರುವ ಸ್ವಿಸ್ ರಾಜತಾಂತ್ರಿಕ ಅಧಿಕಾರಿಯನ್ನು ಇರಾನ್ ಕರೆಯಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿತು.

ಘರ್ಷಣಾ ಸ್ಥಿತಿ ಬಿಗುಗೊಂಡಿದ್ದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಸಾರಿಫ್‍ರನ್ನು ಯುರೋಪಿಯನ್ ಯೂನಿಯನ್ ಕೇ೦ದ್ರ ಬ್ರಸೆಲ್ಸ್ ಗೆ ಕರೆಯಿಸಿಕೊಳ್ಳಲಾಗಿದೆ. ಯುರೋಪಿಯನ್ ಯೂನಿಯನ್ ವಿದೇಶ ನೀತಿ ಮುಖ್ಯಸ್ಥ ಜೋಸಫ್ ಬೊರಲರು ಸಾರಿಫ್‍ರೊಂದಿಗೆ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಎರಡು ವಿಭಾಗಗಳು ಸಮಚಿತ್ತ ಪಾಲಿಸಬೇಕೆಂದು ಪೋಪ್ ಫ್ರಾನ್ಸಿಸ್ ಆಗ್ರಹಿಸಿದ್ದಾರೆ.

ಅಮೆರಿಕ ಸೇನೆಯನ್ನು ದೇಶದಿಂದ ಹಿಂದೆಗೆಯಬೇಕೆಂದು ರವಿವಾರ ಇರಾಕ್ ಪಾರ್ಲಿಮೆಂಟ್ ತುರ್ತು ಸಭೆ ಸೇರಿತು. ದೇಶದಲ್ಲಿರುವ ಅಮೆರಿಕ ಸೈನಿಕರ ನೆಲೆಗಳಿಗೆ ಒಂದು ಕಿಲೊಮೀಟರ್ ದೂರದಲ್ಲಿರಬೇಕೆಂದು ಇರಾಕಿ ಸೇನೆಗೆ ಕತಾಇಬ್ ಹಿಝ್ಬುಲ್ಲ ಎಂಬ ಪೌರಸೇನೆ ಮುನ್ನೆಚ್ಚರಿಕೆ ನೀಡಿದೆ.

ಶುಕ್ರವಾರ ಇರಾನ್‍ನ ಉನ್ನತ ಸೇನಾ ಜನರಲ್ ಖಾಸಿಂ ಸುಲೈಮಾನಿ ಮತ್ತು ಇರಾಕ್ ಪೌರ ಸೇನಾ ಉಪಮುಖ್ಯಸ್ಥ ಅಬೂ ಮಹ್ದಿ ಅಲ್‍ಮುಹಂದಿಸು ಸಂಚರಿಸಿದ ವಾಹನಕ್ಕೆ ಡ್ರೋನ್ ದಾಳಿ ಮಾಡಿ ಅಮೆರಿಕ ನಾಶಪಡಿಸಿತ್ತು.
ಬಾಗ್ದಾದಿನ ಅಮೆರಿಕ ಎಂಬೆಸಿ ಮುಂದೆ ಜನರು ಮುತ್ತಿಗೆ ಹಾಕಿದ ಬೆನ್ನಿಗೆ ಅಮೆರಿಕ ದಾಳಿ ಮಾಡಿತ್ತು. ಬಲವಾದ ತಿರುಗೇಟು ನೀಡುತ್ತೇವೆ ಎಂದು ಇರಾನ್ ಆಧ್ಯಾತ್ಮಿಕ ನಾಯಕ ಆಯತುಲ್ಲ ಅಲಿ ಖಾಮ್‍ನಾಈ ಮುನ್ನೆಚ್ಚರಿಕೆ ನೀಡಿದ್ದಾರೆ.