ಸನ್ಮಾರ್ಗ ವಾರ್ತೆ-
ಮನಾಮ, ಜ. 6: ಸಮಕಾಲೀನ ಝಕಾತ್ ವಿಷಯಗಳಲ್ಲಿ 27ನೇ ಝಕಾತ್ ಫೋರಂಗೆ ಬಹ್ರೈನ್ ಆತಿಥ್ಯ ವಹಿಸುತ್ತಿದೆ ಎಂದು ನ್ಯಾಯ-ಇಸ್ಲಾಮಿಕ್ ವಿಷಯ-ವಕ್ಫ್ ಸಚಿವ ಶೇಖ್ ಖಾಲಿದ್ ಬನ್ ಅಲಿ ಬಿನ್ ಅಬ್ದುಲ್ ಅಲ್ ಖಲೀಫ ಹೇಳಿದರು. ಸಚಿವಾಲಯದ ಅಧೀನದ ಝಕಾತ್ ಫಂಡ್‍ನೊಂದಿಗೆ ಸಹಕರಿಸಿ ಕುವೈಟ್‍ನ ಬೈತುಝ್ಝಕಾತ್ ಫೋರಂ ಸಂಘಟಿಸುತ್ತಿದೆ. ಜಿಸಿಸಿ ದೇಶಗಳ ಝಕಾತ್ ವವ್ಯವಸ್ಥೆಯೊಂದಿಗೆ ಸಹಕರಿಸಿ ಬಹ್ರೈನ್ ಝಕಾತ್ ಫೋರಂ ಕಾರ್ಯನಿರ್ವಹಿಸುತ್ತಿದೆ.
ಕುವೈಟ್‍ನ ಬೈತುಝ್ಝಕಾತ್ ನಡೆಸುತ್ತಿರುವ ಜಾಗೃತಿ, ಚ್ಯಾರಿಟಿ ಕಾರ್ಯಗಳು ಮಾದರಿಯುತವಾಗಿದ್ದು 1994ರಲ್ಲಿ ನಡೆದ ನಾಲ್ಕನೆ ಝಕಾತ್ ಸಿಂಪೋಝಿಯಂ, 2005ರಲ್ಲಿ ನಡೆದ 14ನೆ ಸಿಂಪೊಝೀಯಂಗೂ ಬಹ್ರೈನ್ ಆತಿಥ್ಯ ವಹಿಸಿಕೊಂಡಿತ್ತು. 27ನೇ ಫೋರಂಗಾಗಿ ಬಹ್ರೈನ್ ಮೂರನೇ ಸಲ ಆತಿಥ್ಯ ವಹಿಸುತ್ತಿದೆ. ಝಕಾತ್ ಸರಿಯಾಗಿ ವಿತರಿಸುವ ಕುರಿತು ಸಂಶೋಧನೆ, ಅಧ್ಯಯನಗಳು, ಕಮ್ಮಟಗಳು ನಡೆಯಲಿವೆ. ಸಮಕಾಲೀನ ಜಗತ್ತಿನಲ್ಲಿ ಝಕಾತನ್ನು ಫಲಪ್ರದವಾಗಿ ಹೇಗೆ ವಿತರಿಸಬಹುದು, ಉಪಯೋಗಿಸಬಹುದು, ಬಡತನ ನಿರ್ಮೂಲಿಸಬಹುದು, ಸಮಾಜದ ಬೆಳವಣಿಗೆಗೆ ಅದನ್ನು ಹೇಗೆ ವಿನಿಯೋಗಿಸಬಹುದು ಎಂಬುದೆಲ್ಲ ಫೋರಂನಲ್ಲಿ ಚರ್ಚೆ ನಡೆಯಲಿದೆ. 1988ರಿಂದ ಕುವೈಟ್ ಬೈತುಝ್ಝಕಾತ್ ಅಡಿಯಲ್ಲಿ ಫೋರಂ ಸಂಘಟಿಸುತ್ತಿದೆ ಎಂದು ಬೈತುಝ್ಝಕಾತ್ ನಿರ್ದೇಶಕ ಮುಹಮ್ಮದ್ ಫಲಾಹ್ ಅಲ್ ಉತೈಬಿ ತಿಳಿಸಿದರು.












